ಬೆಂಗಳೂರು: ಮನೆಗಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರು ಆರೋಪಿಗಳು ಕೊಲೆಯೊಂದಕ್ಕೆ ಸಂಚು ಹಾಕಿದ್ದ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.
ಬೆಂಗಳೂರಲ್ಲಿ ಬಂಧಿತರಾದ ಕಳ್ಳತನದ ಆರೋಪಿಗಳು ಬಾಯ್ಬಿಟ್ರು ಬೆಚ್ಚಿ ಬೀಳಿಸುವ ವಿಷ್ಯ! - ಡಿಸಿಪಿ ಭೀಮಾಶಂಕರ ಎಸ್.ಗುಳೇದ
ಬೆಂಗಳೂರಲ್ಲಿ ಮನೆಗಳ್ಳತನ ಪ್ರಕರಣಲ್ಲಿ ಬಂಧಿತರಾಗಿದ್ದ ಆರೋಪಿಗಳು ಕೊಲೆಯೊಂದಕ್ಕೆ ಸಂಚು ರೂಪಿಸಿದ್ದ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.
ಆರೋಪಿಗಳಾದ ಶರತ್ ಕುಮಾರ್, ಸುನೀಲ್ ಕುಮಾರ್,ಅರವಿಂದ್ ಹಾಗೂ ಪ್ರಕಾಶ್ ರಾಜ್ನನ್ನು ಈಗಾಗಲೇ ಬಂಧಿಸಲಾಗಿದ್ದು, ಇವರಲ್ಲಿ ಸುನೀಲ್, ವಿವೇಕನಗರದ ನಿವಾಸಿ ಮೂವೇಶ್ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದಾಗಿ ಕೊತ್ತನೂರು ಪೊಲೀಸರು ನಡೆಸಿದ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಎಸ್.ಗುಳೇದ ತಿಳಿಸಿದ್ದಾರೆ.
ಸುನೀಲ್ ಹಾಗೂ ಮೂವೇಶ್ ಇವರಿಬ್ಬರ ನಡುವೆ ವಿವೇಕನಗರದಲ್ಲಿ ಪ್ರಾಬಲ್ಯ ಹೊಂದುವ ವಿಚಾರದಲ್ಲಿ ವೈಮನಸಿತ್ತು. ಹೀಗಾಗಿ ಮೂವೇಶ್ ಹತ್ಯೆಗೆ ಸಂಚು ರೂಪಿಸಿ ಮನೆಯಲ್ಲಿ ಮಾರಕಾಸ್ತ್ರ ಸಂಗ್ರಹಿಸಿಟ್ಟಿದ್ದ ಸುನೀಲ್ ಇದರ ನಡುವೆ ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರಿಂದ ಬಂಧಿತನಾಗಿದ್ದಾನೆ.