ಕರ್ನಾಟಕ

karnataka

ETV Bharat / state

ಗಡಿ ಪ್ರವೇಶಕ್ಕೆ ಕರಾವಳಿ ಜನರಿಗೆ ಅನುಮತಿ; ಸಿಎಂಗೆ ಅಭಿನಂದಿಸಿದ ಶ್ರೀನಿವಾಸ ಪೂಜಾರಿ - Kota Srinivasa Poojary

ಅತಂತ್ರ ಸ್ಥಿತಿಯಲ್ಲಿ ರಾಜ್ಯದ ಗಡಿ ಭಾಗದಲ್ಲಿ ಕಾಯುತ್ತಿದ್ದ ಗರ್ಭಿಣಿಯರು, ಮಕ್ಕಳ ಸಹಿತ ಕರಾವಳಿ ಭಾಗದ ಜನರಿಗೆ ರಾಜ್ಯಕ್ಕೆ ಪ್ರವೇಶ ನೀಡಲು ಸರ್ಕಾರ ಅನುಮತಿ ನೀಡಿದೆ. ಮುಖ್ಯಮಂತ್ರಿಯವರ ಈ ನಡೆಗೆ ಮುಜಿರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ವಾಗತಿಸಿದ್ದಾರೆ

Kota Srinivasa Poojary
Kota Srinivasa Poojary

By

Published : May 20, 2020, 6:45 PM IST

ಬೆಂಗಳೂರು: ಹೊರ ರಾಜ್ಯದಲ್ಲಿದ್ದ ಕರಾವಳಿ ಭಾಗದ ಜನರಿಗೆ ರಾಜ್ಯ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದ್ದನ್ನು ಮುಜಿರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ವಾಗತಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಖುದ್ದು ಮನವಿ ಮಾಡಿದ ಹಿನ್ನೆಲೆಯಲ್ಲಿ, ಬೆಳಗಾವಿಯ ನಿಪ್ಪಾಣಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ಕಾಯುತ್ತಾ ನಿಂತಿರುವ ಗರ್ಭಿಣಿಯರು, ಮಕ್ಕಳ ಸಹಿತ ಕರಾವಳಿ ಭಾಗದ ಜನರಿಗೆ ರಾಜ್ಯಕ್ಕೆ ಪ್ರವೇಶ ನೀಡಲು ಸರ್ಕಾರ ಅನುಮತಿ ನೀಡಿದೆ. 'ಮಾನವೀಯತೆ ಮೆರೆದ ಮುಖ್ಯಮಂತ್ರಿಯವರಿಗೆ ಧನ್ಯವಾದಗಳು' ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details