ಕರ್ನಾಟಕ

karnataka

ETV Bharat / state

ಸಿಎಂ ರಾಜೀನಾಮೆ ಘೋಷಿಸುತ್ತಿದ್ದಂತೆ ಸರ್ಕಾರಿ ಕಾರು ತ್ಯಜಿಸಿದ ಕೋಟಾ ಶ್ರೀನಿವಾಸ ಪೂಜಾರಿ - ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ

ಈ ವೇಳೆ ವಿಧಾನಸೌಧದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಯವಾಗಿ ನಿರಾಕರಿಸಿದ ಪೂಜಾರಿ, ಯಡಿಯೂರಪ್ಪನವರು ರಾಜ್ಯದ ಬಡವರ ಬಂಧುವಾಗಿ ಅಧಿಕಾರ ಚಲಾಯಿಸಿದ್ದರು ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು..

ಕೋಟಾ ಶ್ರೀನಿವಾಸ ಪೂಜಾರಿ
Kota Srinivasa Poojary

By

Published : Jul 26, 2021, 9:37 PM IST

ಬೆಂಗಳೂರು :ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​​ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್‌ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರಿ ಕಾರು ತ್ಯಜಿಸಿ ಬಾಡಿಗೆ ವಾಹನದಲ್ಲಿ ತೆರಳಿದರು.

ಸಿಎಂ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಕೆ ಮಾಡುವ ಮೊದಲೇ ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರಿ ಕಾರು ಬಳಕೆ ನಿಲ್ಲಿಸುವ ನಿರ್ಧಾರ ಪ್ರಕಟಿಸಿದರು. ರಾಜ್ಯಪಾಲರು ಯಡಿಯೂರಪ್ಪ ರಾಜೀನಾಮೆ ಅಂಗೀಕರಿಸಿ ಸಚಿವ ಸಂಪುಟವನ್ನು ವಿಸರ್ಜಿಸಿದ ನಂತರವೂ ಕೆಲವರು ಇನ್ನು ಸರ್ಕಾರಿ ಕಾರು ಬಳಕೆ ಮಾಡುತ್ತಿದ್ದಾರೆ. ಆದರೆ, ಕೋಟಾ ಶ್ರೀನಿವಾಸ ಪೂಜಾರಿ ಮಾತ್ರ ಬಿಎಸ್​ವೈ ರಾಜೀನಾಮೆಗೂ ಮುನ್ನವೇ ಸರ್ಕಾರಿ ಕಾರು ತ್ಯಜಿಸಿ ಗಮನ ಸೆಳೆದರು.

ಈ ವೇಳೆ ವಿಧಾನಸೌಧದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಯವಾಗಿ ನಿರಾಕರಿಸಿದ ಪೂಜಾರಿ, ಯಡಿಯೂರಪ್ಪನವರು ರಾಜ್ಯದ ಬಡವರ ಬಂಧುವಾಗಿ ಅಧಿಕಾರ ಚಲಾಯಿಸಿದ್ದರು ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.

ABOUT THE AUTHOR

...view details