ಕರ್ನಾಟಕ

karnataka

ETV Bharat / state

ಕೋರಮಂಗಲ ಜೋಡಿ‌ ಕೊಲೆ ಪ್ರಕರಣ: ಪರಿಚಯಸ್ಥರಿಂದಲೇ ಕೃತ್ಯ ನಡೆದಿರುವ ಶಂಕೆ

ಕೋರಮಂಗಲದಲ್ಲಿ ನಡೆದ ಜೋಡಿ ಕೊಲೆ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ಭೇಟಿ ನೀಡಿದರು. ಮೇಲ್ನೋಟಕ್ಕೆ ಪರಿಚಿತರಿಂದಲೇ ಕೃತ್ಯ ನಡೆದಿದೆ ಎಂದು ಶಂಕಿಸಿದರು.

By

Published : Dec 19, 2022, 1:08 PM IST

double murder and robbery
ಕೋರಮಂಗಲ ಜೋಡಿ‌ ಕೊಲೆ, ದರೋಡೆ ಪ್ರಕರಣ

ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್

ಬೆಂಗಳೂರು:ಕೋರಮಂಗಲದಲ್ಲಿರುವ ಮನೆಯಲ್ಲಿ ಜೋಡಿ ಕೊಲೆ‌ಯಾಗಿರುವ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ಭೇಟಿ ನೀಡಿ, ತನಿಖಾಧಿಕಾರಿಗಳಿಂದ ಮಾಹಿತಿ ಪಡೆದರು.

ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ:ಘಟನಾ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಸುಬ್ರಹ್ಮಣ್ಯೇಶ್ವರ್ ರಾವ್ 'ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಸೇರಿ ಕೃತ್ಯ ಎಸಗಿರುವುದು ಕಂಡು ಬಂದಿದೆ. ಮನೆಯೊಳಗೆ ಯಾವುದೇ ಬೀಗ ಮುರಿದಿರುವಂತಹದ್ದು ಕಂಡುಬಂದಿಲ್ಲ. ಸದ್ಯ ದೊರೆತಿರುವ ಕುರುಹುಗಳ ಆಧಾರದಲ್ಲಿ ಹೇಳುವುದಾದರೆ ಇದು ಪರಿಚಿತರಿಂದಲೇ ನಡೆದಿರಬಹುದಾದ ಕೃತ್ಯ ಎನಿಸುತ್ತದೆ'. ಅಲ್ಲದೇ ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನ ಕಲೆಹಾಕಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸುವ ಭರವಸೆ ನೀಡಿದರು.

ಇದನ್ನೂ ಓದಿ:ಸುಳೇಭಾವಿ ಡಬಲ್ ಮರ್ಡರ್ ಪ್ರಕರಣ: ಆರು ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಕೋರಮಂಗಲದ ಆರನೇ ಹಂತದಲ್ಲಿರುವ ಕಾಂಟ್ರಾಕ್ಟರ್ ಗೋಪಾಲರೆಡ್ಡಿ ಎಂಬುವವರ ಮನೆಯಲ್ಲಿ ಡಿಸೆಂಬರ್ 17ರ ರಾತ್ರಿ ಮನೆ ಕೆಲಸಗಾರ ಕರಿಯಪ್ಪ ಹಾಗೂ ಸೆಕ್ಯುರಿಟಿ ಗಾರ್ಡ್ ದಿಲ್ ಬಹದ್ದೂರ್ ಕೊಲೆಯಾಗಿದೆ. ಅಲ್ಲದೇ ಐದು ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.

ABOUT THE AUTHOR

...view details