ಬೆಂಗಳೂರು:ಮಾಜಿ ಸಚಿವ, ರಿಯಲ್ ಎಸ್ಟೇಟ್ ಉದ್ಯಮಿ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ, ಇದು ನಿಜಕ್ಕೂ ಹಣಕ್ಕಾಗಿಯೇ ನಡೆದಿದ್ಯಾ ಇಲ್ಲ ಹೆಣ್ಣಿನ ವಿಚಾರಕ್ಕಾಗಿ ಏನಾದ್ರು ನಡೆದಿದ್ಯಾ ಅನ್ನೋ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.
ಬುಧವಾರ ಸಂಜೆ ಬೆಳ್ಳಂದೂರಿನಿಂದ ಬಂದ ಪ್ರಕರಣವನ್ನು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಿನ್ನೆ ರಾತ್ರಿಯೇ ಸ್ಥಳ ಮಹಜರು ಮಾಡಿದ್ದಾರೆ, ನಂತರ ವರ್ತೂರ್ ಪ್ರಕಾಶ್ ಹೇಳಿಕೆ ಪಡೆದು ಅವರನ್ನು ಮೆಡಿಕಲ್ ಟೆಸ್ಟ್ಗೂ ಒಳಪಡಿಸಿದ್ರು. ಇನ್ನು ಇಂದು ಬೆಳಗ್ಗೆ ಪ್ರಕರಣದಲ್ಲಿ ಕಿಡ್ನಾಪರ್ಸ್ಗೆ ವರ್ತೂರ್ ಪ್ರಕಾಶ್ ಸೂಚನೆ ಮೇರೆಗೆ 48 ಲಕ್ಷ ರೂಪಾಯಿ ಹಣ ನೀಡಿದ್ದ ವರ್ತೂರ್ ಆಪ್ತ ನಯಾಜ್ನನ್ನು ವಿಚಾರಣೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ಹಣಕೊಟ್ಟ ನಯಾಜ್ ಸೋದರ ಸಿರಾಜ್ ಪ್ರತಿಕ್ರಿಯಿಸಿದ್ದು, ಅವತ್ತು ವರ್ತೂರ್ ಪ್ರಕಾಶ್ ಫೋನ್ ಮಾಡಿದ್ದಾಗ ನಾನು ಸಿರಾಜ್ ಜೊತೆಗಯಲ್ಲೇ ಇದ್ದೆ, ಅವತ್ತು ನಮ್ಮ ಬಳಿ ಹಸು ಮಾರಿದ್ದ 48 ಲಕ್ಷ ಹಣವಿತ್ತು ಅದನ್ನು ವರ್ತೂರ್ ಪ್ರಕಾಶ್ ಪೋನ್ ಮಾಡಿ ನರಸಾಪುರ ಕಾಫಿಡೇ ಬಳಿ ಒಬ್ಬರು ಬರ್ತಾರೆ ಅವರಿಗೆ ನೀಡಲು ತಿಳಿಸಿದ್ರು ಅದರಂತೆ ಅವರಿಗೆ ಹಣಕೊಟ್ಟಿದ್ದಾಗಿ ನಯಾಜ್ ಸಹೋದರ ಸಿರಾಜ್ ಹೇಳಿದ್ದಾನೆ.