ಬೆಂಗಳೂರು:ನಾಡಿನ ಜನತೆ ಮುಂದೆ ಮಾತಾಡು ಬಾ, ಇಲ್ಲಿ ಕೂತು ಚರ್ಚೆ ಮಾಡಿ ಮಾತಾಡೋಣ. ಯಾವತ್ತಾದರೂ ನಮ್ಮ ಸಲಹೆ ಕೇಳಿದ್ಯಾ? ನಮ್ಗೆ ಯಾರೂ ಆಗಲ್ಲ, ಅವರು ಬೇಡ ಅಂದರೆ ಅರ್ಥ ಏನು? ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಏಕವಚನದಲ್ಲೇ ಸಚಿವ ಸವದಿ ವಿರುದ್ಧ ಹರಿಹಾಯ್ದರು.
ನಗರದ ಮೌರ್ಯ ಸರ್ಕಲ್ ಬಳಿ ಸಾರಿಗೆ ಇಲಾಖೆಯ ನೌಕರರು ನಡೆಸುತ್ತಿರುವ ಸಾಂಕೇತಿಕ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಸಾಲ ಮಾಡಿ ಹೊಸ ಬಸ್ ಖರೀದಿಗೆ ಮುಂದಾಗುತ್ತೀರಿ. ಇರುವ ಬಸ್ಗಳನ್ನು ಯಾಕೆ ನಿಲ್ಲಿಸಿದ್ದೀರಾ?, ಪೂರ್ಣ ಪ್ರಮಾಣದಲ್ಲಿ ಬಸ್ಗಳು ಓಡಾಡುತ್ತಿಲ್ಲ ಯಾಕೆ?, ಇದು ಸಾಮಾನ್ಯ ಜ್ಞಾನ ಕಣಪ್ಪಾ ಸವದಿ ಎಂದು ಆಕ್ರೋಶ ಹೊರಹಾಕಿದರು.
ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ಇವತ್ತಿನ ಸಾಂಕೇತಿಕ ಪ್ರತಿಭಟನೆಯನ್ನು ಸರ್ಕಾರಕ್ಕೆ ಎಚ್ಚರಿಕೆ ಮುಟ್ಟಿಸುವ ನಿಟ್ಟಿನಲ್ಲಿ ಮಾಡಿದ್ದೇವೆ. ಮಾರ್ಚ್ 15ರಂದು ಗಡುವು ಮುಕ್ತಾಯವಾಗಲಿದೆ. ಸರ್ಕಾರ ತಾನು ಕೊಟ್ಟ ಮಾತು ಉಳಿಸಿಕೊಳ್ಳಬೇಕು, ವಚನಭ್ರಷ್ಟ ಸರ್ಕಾರವಾಗಬಾರದು. ಬೇಡಿಕೆ ಈಡೇರಿಸದೇ ಇದ್ದರೆ ಮುಂದಿನ ಹೋರಾಟವನ್ನು ಬದಲಾದ ರೀತಿಯಲ್ಲಿ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನಾನಿರತರ ಬೇಡಿಕೆಗಳೇನು?
- 6ನೇ ವೇತನ ಆಯೋಗದ ಶಿಫಾರಸು ಜಾರಿಯಾಗಬೇಕು.
- ಕೊರೊನಾ ಸಂದರ್ಭದಲ್ಲಿ ಮೃತಪಟ್ಟರೆ 30 ಲಕ್ಷ ರೂ ಪರಿಹಾರ ಘೋಷಣೆ ಮಾಡಬೇಕು.
- ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಅಳವಡಿಕೆ
- ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನ
ಇದನ್ನೂ ಓದಿ:ವಿಶ್ವದಾಖಲೆ ಬರೆದ 'ರಾಮಾಯಣ' ಸೀರಿಯಲ್; 999 ಶತಕೋಟಿಗೇರಿದ ವೀಕ್ಷಣಾ ನಿಮಿಷ!