ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ಬೇಡಿಕೆ ಈಡೇರದಿದ್ದರೆ ಏಪ್ರಿಲ್ ತಿಂಗಳಲ್ಲಿ ಮತ್ತೆ ಮುಷ್ಕರ : ಕೋಡಿಹಳ್ಳಿ

ಸರ್ಕಾರ ಕಳೆದ ಬಾರಿ‌ ಕೊಟ್ಟ ಮಾತು ತಪ್ಪಿದೆ. ಇದರಿಂದ ಕೆರಳಿರುವ ಕೋಡಿಹಳ್ಳಿ ನೇತೃತ್ವದ ತಂಡ, ಏಪ್ರಿಲ್‌ನಲ್ಲಿ ಮುಷ್ಕರ ಮಾಡೆ ಮಾಡುತ್ತೇವೆ. ಈ ಬಾರಿ ನಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ವಾಪಸ್ ಪಡೆಯಲ್ಲ ಅಂತಿದ್ದಾರೆ. ಆದರೆ, ಸರ್ಕಾರ ಮಾತ್ರ ಮುಷ್ಕರ ಮಾಡದಂತೆ ಪ್ರತಿತಂತ್ರ ಹೆಣೆಯುತ್ತಿದೆ..

kodihalli-chandrasekhar-talk-
ಕೋಡಿಹಳ್ಳಿ ಚಂದ್ರಶೇಖರ್

By

Published : Mar 13, 2021, 7:40 PM IST

ಬೆಂಗಳೂರು :ರಾಜ್ಯ ಬಜೆಟ್‌ನಲ್ಲಿ ಬೇಡಿಕೆ ಈಡೇರದ ಹಿನ್ನೆಲೆ ಸಾರಿಗೆ ನೌಕರರು, ಸರ್ಕಾರದ ವಿರುದ್ಧ ಮತ್ತೆ ಮುಷ್ಕರಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಇದನ್ನು ಹೇಗಾದರೂ ಮಾಡಿ ವಿಫಲ ಮಾಡಲೇಬೇಕು ಎಂದು ಸರ್ಕಾರ ಮತ್ತು ಅಧಿಕಾರಿಗಳು ಭರ್ಜರಿ ಪ್ಲಾನ್ ‌ಮಾಡುತ್ತಿದ್ದಾರೆ.

ಓದಿ: ರಮೇಶ್​ ಜಾರಕಿಹೊಳಿ ರಾಸಲೀಲೆ ಪ್ರಕರಣ.. ಆರೋಪಿಯ ಜತೆಗೆ ಹಾರ್ಡ್‌ಡಿಸ್ಕ್, ಪೆನ್ ಡ್ರೈವ್ ಎಸ್​ಐಟಿ ವಶಕ್ಕೆ

ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಸರ್ಕಾರಿ ಬಸ್ ಸಂಚಾರ ನಿಂತು ಹೋಗಿತ್ತು. ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಫ್ರೀಡಂ ಪಾರ್ಕ್ ನೊಳಗೆ ಬೃಹತ್ ಪ್ರತಿಭಟನೆ ಕೂಡ ನಡೆಸಿದ್ದರು. ಇದರಿಂದ ಅಸಮಾಧಾನಗೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ತಂಡ ಮತ್ತೆ ಬರುವ ತಿಂಗಳು ಮುಷ್ಕರ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಆದರೆ, ಇದರಿಂದ ಟೆನ್ಶನ್ ಆಗಿರುವ ಸರ್ಕಾರ ಮತ್ತು ಸಾರಿಗೆ ನಿಗಮಗಳು, ನೌಕರರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ಲಾನ್ ಮಾಡಿವೆ. ಈಗಾಗಲೇ ಮುಷ್ಕರಕ್ಕೆ ಕರೆ ಕೊಟ್ಟಿರುವ ಸಂಘಟನೆಗಳನ್ನು ಹೊರತುಪಡಿಸಿ ಬೇರೆ ಸಾರಿಗೆ ಸಂಘಟನೆಗಳ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸಾರಿಗೆ ನೌಕರರ ಮಹಾ ಮಂಡಲ, ಸಿಐಟಿಯು, ಎಐಟಿಯುಸಿ ಸಂಘಟನೆಗಳ ಮುಖಂಡರ ಜೊತೆಗೆ ಪ್ರತ್ಯೇಕ ಸಭೆ ನಡೆಸಿ ಈ ಬಾರಿಯ ಮುಷ್ಕರಕ್ಕೆ ಬೆಂಬಲ ನೀಡದಂತೆ ಪ್ರತಿತಂತ್ರ ಹೆಣೆಯುತ್ತಿದ್ದಾರೆ.

ಈ ಬಗ್ಗೆ ಮಾತಾನಾಡಿದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮಂಗಳವಾರ ಮುಷ್ಕರದ ಬಗ್ಗೆ ಕಾರ್ಮಿಕ ಇಲಾಖೆಗೆ ಮಾಹಿತಿ ಕೊಡುತ್ತೇವೆ. ಅವರು ಸಾರಿಗೆ ಮಂತ್ರಿಗಳಿಗೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ನಾಲ್ಕು ನಿಗಮದ ಎಂಡಿಗಳಿಗೆ ಮಾಹಿತಿ ಕೊಟ್ಟು ನಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಚರ್ಚೆ ಮಾಡುತ್ತಾರೆ. 22 ದಿನಗಳವರೆಗೂ ಅವಕಾಶ ಇರುತ್ತದೆ. ಅಷ್ಟರಲ್ಲಿ ನಮ್ಮ ಬೇಡಿಕೆ ಈಡೆರಿಲ್ಲ ಅಂದರೆ ಏಪ್ರಿಲ್ 7ರ ನಂತರ ದಿನಾಂಕ ಘೋಷಣೆ ಮಾಡಿ ಸಾರಿಗೆ ಮುಷ್ಕರಕ್ಕೆ ಮುಂದಾಗುತ್ತೇವೆ ಎಂದರು.

ಇನ್ನು, ಮುಷ್ಕರದಲ್ಲಿ ಭಾಗಿಯಾಗದಂತೆ ನಾಲ್ಕು ನಿಗಮದ ಡಿಪೋಗಳಿಗೆ ಹೋಗಿ ಅಧಿಕಾರಿಗಳು ನೌಕರರಿಗೆ ಕೌನ್ಸೆಲಿಂಗ್ ಮಾಡಲು ಮುಂದಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆ ನಿಮಗೆ ಸಂಬಳ ನೀಡಿದೆ, ಸಾಕಷ್ಟು ಸೌಲಭ್ಯ ನೀಡಿದೆ. ಹೀಗಾಗಿ, ಸಾರಿಗೆ ನೌಕರರ ಕೂಟದ ಮುಖಂಡರು ಕರೆ ಕೊಡುವ ಮುಷ್ಕರದಲ್ಲಿ ಭಾಗಿಯಾಗದಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸರ್ಕಾರ ಕಳೆದ ಬಾರಿ‌ ಕೊಟ್ಟ ಮಾತು ತಪ್ಪಿದೆ. ಇದರಿಂದ ಕೆರಳಿರುವ ಕೋಡಿಹಳ್ಳಿ ನೇತೃತ್ವದ ತಂಡ, ಏಪ್ರಿಲ್‌ನಲ್ಲಿ ಮುಷ್ಕರ ಮಾಡೆ ಮಾಡುತ್ತೇವೆ. ಈ ಬಾರಿ ನಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ವಾಪಸ್ ಪಡೆಯಲ್ಲ ಅಂತಿದ್ದಾರೆ. ಆದರೆ, ಸರ್ಕಾರ ಮಾತ್ರ ಮುಷ್ಕರ ಮಾಡದಂತೆ ಪ್ರತಿತಂತ್ರ ಹೆಣೆಯುತ್ತಿದೆ.

ABOUT THE AUTHOR

...view details