ಬೆಂಗಳೂರು: ಮಹದಾಯಿ ಟ್ರಿಬ್ಯುನಲ್ ಅವಾರ್ಡ್ ಬಂದ ಮೇಲೆ ಭಾರತ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡಬೇಕು. ಆದರೆ ಆ ಕೆಲಸ ಮಾಡದ ಸರ್ಕಾರ ದೀರ್ಘಕಾಲದ ಪ್ರಕ್ರಿಯೆ ಅನುಸರಿಸಿದ್ದು ತಪ್ಪು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಮಹದಾಯಿ ವಿವಾದ: ನ್ಯಾಯಾಲಯದ ನಿರ್ದೇಶನದಂತೆ ತಕ್ಷಣ ಕೆಲಸ ಕೈಗೊಳ್ಳಬೇಕು: ಕೋಡಿಹಳ್ಳಿ ಚಂದ್ರಶೇಖರ್
ಮಹದಾಯಿ ಟ್ರಿಬ್ಯುನಲ್ ಅವಾರ್ಡ್ ಬಂದ ಮೇಲೆ ಭಾರತ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡಬೇಕು. ಆದರೆ ಆ ಕೆಲಸ ಮಾಡದ ಸರ್ಕಾರ ದೀರ್ಘಕಾಲದ ಪ್ರಕ್ರಿಯೆ ಅನುಸರಿಸಿದ್ದು ತಪ್ಪು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಮಹದಾಯಿ ನದಿ ನೀರಿನ ವಿವಾದಕ್ಕೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿರುವ ಕುರಿತು ಮಾತನಾಡಿದ ಅವರು, ಈಗ ನ್ಯಾಯಾಲಯ ಆದೇಶ ನೀಡಿದೆ. ತಕ್ಷಣ ಗೆಜೆಟ್ ನೋಟಿಫಿಕೇಶನ್ ಮಾಡಿ ಕರ್ನಾಟಕಕ್ಕೆ ಅಭಿವೃದ್ಧಿ ಮಾಡಲು ಅನುಕೂಲ ಮಾಡಿಕೊಡಬೇಕು ಎಂದರು.
ಸರ್ಕಾರ ಮೀನಮೇಷ ಮಾಡುವ ಅಗತ್ಯ ಇಲ್ಲ. ಏಕೆಂದರೆ ಮಲಪ್ರಭಾ ಅಣೆಕಟ್ಟು ಕಟ್ಟಿದ ನಂತರ ಮಹದಾಯಿ ನೀರನ್ನು ಇಟ್ಟುಕೊಳ್ಳಲಾಗಿತ್ತು. ಆಗ ಗೋವಾ ಸರ್ಕಾರ, ಕೇಂದ್ರ ಸರ್ಕಾರ, ಪರಿಸರ ಹಾಗೂ ಅರಣ್ಯ ಯಾವುದು ಅಡ್ಡಿ ಮಾಡಲಿಲ್ಲ. ಇದಕ್ಕೆಲ್ಲ ಕಾರಣ ನಿಧಾನಗತಿಯ ಪ್ರಕ್ರಿಯೆ. ಆದರೆ ಇನ್ನಾದರೂ, ನ್ಯಾಯಾಲಯದ ನಿರ್ದೇಶನದಂತೆ ತಕ್ಷಣ ಕೆಲಸವನ್ನು ಕೈಗೊಳ್ಳಬೇಕು. ಈ ಬಗ್ಗೆ ಸಿಎಂ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು.