ಕರ್ನಾಟಕ

karnataka

ETV Bharat / state

ಜೂಜಾಟ, ಮೋಜಿನ ಜೀವನಕ್ಕಾಗಿ ರಾಬರಿ.. ಕೊನೆಗೂ ಕಂಬಿ ಹಿಂದೆ ಖತರ್ನಾಕ್​​ ಗ್ಯಾಂಗ್.. - ಬೆಂಗಳೂರಿನಲ್ಲಿ ಪೊಲೀಸರಿಂದ ದರೋಡೆಕೋರರ ಬಂಧನ

ಸದ್ಯ ಬಂಧಿತ ಆರೋಪಿಗಳಿಂದ ಪಿಸ್ತೂಲ್ ವಶಪಡಿಸಿಕೊಂಡ ಪೊಲೀಸರು, ಬಂಧನದ ನಂತರ ಆರೋಪಿಗಳಿಂದ‌ 8 ಪ್ರಕರಣ ಪತ್ತೆಯಾಗಿವೆ. ಹೀಗಾಗಿ, ಉಳಿದ ಪ್ರಕರಣಗಳ ತನಿಖೆಯನ್ನ ಪೊಲೀಸರು ಮುಂದುವರೆಸಿದ್ದಾರೆ..

ಜೂಜಾಟ, ಮೋಜಿನ ಜೀವನಕ್ಕಾಗಿ ರಾಬರಿ
ಜೂಜಾಟ, ಮೋಜಿನ ಜೀವನಕ್ಕಾಗಿ ರಾಬರಿ

By

Published : Nov 20, 2021, 7:24 PM IST

ಬೆಂಗಳೂರು :ರಾಬರಿ ಮತ್ತು ಮನೆಗಳ್ಳತನ ಮಾಡಿತ್ತಿದ್ದ ಕುಖ್ಯಾತ ಗ್ಯಾಂಗ್​​ ಅನ್ನು ಕೋಡಿಗೆಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಸೈಮನ್, ಜೀವನ್, ಮೋಹನ್, ಸಲ್ಮಾನ್ ಟಿಪ್ಪು ಮತ್ತು ಪುನೀತ್‌ಕುಮಾರ್ ಬಂಧಿತ ಆರೋಪಿಗಳು. ಸದ್ಯ ಬಂಧಿತರಿಂದ‌ 25 ಲಕ್ಷ ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಬಂಧಿತ‌ ಆರೋಪಿಗಳು ಈ ಮೊದಲು ಮೇ 26ರಂದು ಟಿಆರ್​​ಬಿಆರ್​​ ಲೇಔಟನ್ ಶಶಿಕಲಾ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಿದ್ದರು.‌ ಮನೆಗೆ ನುಗ್ಗಿದ ಆರೋಪಿಗಳು ಮನೆಯವರಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಮನೆಯಲಿದ್ದ ವಸ್ತುಗಳನ್ನ ದರೋಡೆ ಮಾಡಿದ್ದರು.

ಈ‌ ದರೋಡೆಕೋರರ ಗ್ಯಾಂಗ್ ಜೂಜಾಟ ಹಾಗೂ ಮೋಜಿನ ಜೀವನಕ್ಕಾಗಿ ರಾಬರಿ ಮಾಡುತ್ತಿದ್ದರು.‌ ಮತ್ತೊಂದು ರಾಬರಿ ಮಾಡಲು ಹೊಂಚು ಹಾಕುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.‌

ಸದ್ಯ ಬಂಧಿತ ಆರೋಪಿಗಳಿಂದ ಪಿಸ್ತೂಲ್ ವಶಪಡಿಸಿಕೊಂಡ ಪೊಲೀಸರು, ಬಂಧನದ ನಂತರ ಆರೋಪಿಗಳಿಂದ‌ 8 ಪ್ರಕರಣ ಪತ್ತೆಯಾಗಿವೆ. ಹೀಗಾಗಿ, ಉಳಿದ ಪ್ರಕರಣಗಳ ತನಿಖೆಯನ್ನ ಪೊಲೀಸರು ಮುಂದುವರೆಸಿದ್ದಾರೆ.

ABOUT THE AUTHOR

...view details