ಬೆಂಗಳೂರು:ಕಳೆದ ಬಾರಿ ಕೊಡಗು ಜಿಲ್ಲೆಗೆ ಮಳೆಯಿಂದಾಗಿ ಅಪಾರವಾದ ಹಾನಿ ಆಗಿತ್ತು. ಈಗ ಮಳೆಗಾಲ ಶುರು ಆಗುತ್ತಿರುವ ಹೊತ್ತಿನಲ್ಲೇ ಸ್ಯಾಂಡಲ್ವುಡ್ ಸ್ಟಾರ್ಗಳಾದ ಶಿವರಾಜಕುಮಾರ್, ಕಿಚ್ಚ ಸುದೀಪ್, ರಶ್ಮಿಕಾ ಮಂದಣ್ಣ, ಹರ್ಷಿಕ ಪೂಣಚ್ಛ ಕೊಡಗಿಗೆ ಎಮರ್ಜೆನ್ಸಿ ಆಸ್ಪತ್ರೆ ಬೇಕು ಎಂಬ ಕೂಗಿಗೆ ದನಿಗೂಡಿಸಿದ್ದಾರೆ.
ಕೊಡಗು ಜಿಲ್ಲೆಗೆ ಎಮರ್ಜೆನ್ಸಿ ಆಸ್ಪತ್ರೆ ಕೂಗು.. ನಟ- ನಟಿಯರಿಂದಲೂ ಸಾಥ್..! - kannadanews
ಅತೀವೃಷ್ಟಿಯಿಂದಾಗಿ ಅಪಾರ ತೊಂದರೆ ಅನುಭವಿಸಿದ ಕೊಡಗು ಜಿಲ್ಲೆಗೆ ಎಮರ್ಜೆನ್ಸಿ ಆಸ್ಪತ್ರೆ ಬೇಕು ಎಂಬ ಕೂಗಿಗೆ ಸಿನಿಮಾ ನಟ - ನಟಿಯರು ದನಿಗೂಡಿಸಿದ್ದಾರೆ.
ಇದೇ ತರಹದ ಕೂಗು ಉತ್ತರ ಕನ್ನಡ ಜಿಲ್ಲೆಗೆ ಬೇಕು ಎಂದು ಕರೆ ನೀಡಿದಾಗ ಅದು ಕರ್ನಾಟಕದ ಸರ್ಕಾರದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಗಮನಕ್ಕೆ ಬಂದು ಅದರ ಬಗ್ಗೆ ಸೂಕ್ತ ಕ್ರಮದ ಬಗ್ಗೆ ಭರವಸೆ ಸಿಕ್ಕಿತ್ತು. ಕೊಡಗಿನ ನಿವಾಸಿಗಳಿಗೆ ತೊಂದರೆ ಆದರೆ ಮೈಸೂರು ಅಥವಾ ಮಂಗಳೂರಿಗೆ ಹೋಗಬೇಕು. ಆದರೆ, ಒಂದು ಎಮರ್ಜೆನ್ಸಿ ಆಸ್ಪತ್ರೆ ಇದ್ದರೆ, ಬಹಳ ಅನುಕೂಲ ಆಗುತ್ತದೆ ಎಂಬುದು ಈಗಿನ ಅಹವಾಲು. ಈ ದೇಶಕ್ಕಾಗಿ ಅನೇಕ ಕೊಡಗಿನ ವೀರಯೋಧರು ಹೋರಾಡಿದ್ದಾರೆ. ಕೊಡಗು ಜಿಲ್ಲೆಗೆ ಇಂತಹ ಎಮರ್ಜೆನ್ಸಿ ಆಸ್ಪತ್ರೆ ಅವಶ್ಯಕ. ಎಲ್ಲ ಸೌಲಭ್ಯಗಳಿರುವ ಒಂದು ಎಮರ್ಜೆನ್ಸಿ ಆಸ್ಪತ್ರೆ ಕೊಡಗು ಜಿಲ್ಲೆಗೆ ಬೇಗ ಬರಲಿ ಎಂದು ನಟ ಡಾ. ಶಿವರಾಜಕುಮಾರ್ ವಿನಂತಿಸಿಕೊಂಡಿದ್ದಾರೆ. ಕೊಡಗಿನ ಜನರಿಗಾಗಿ ನಾವಿದ್ದೇವೆ. ಅವರ ಅವಶ್ಯಕತೆಗಳಿಗೆ ನಾವು ಸ್ಪಂದಿಸೋಣ, ಎಮರ್ಜೆನ್ಸಿ ಆಸ್ಪತ್ರೆ ಬೇಗ ನೆರವೇರಲಿ, ನಾವೂ ಸಹ ಸಹಾಯ ಮಾಡೋಣ ಎಂದು ಟ್ವಿಟರ್ ಮೂಲಕ ಕಿಚ್ಚ ಸುದೀಪ್ ಕರೆ ನೀಡಿದ್ದಾರೆ.
ನಟಿ ಹರ್ಷಿಕಾ ಪೂಣಚ್ಛ ಇತ್ತೀಚೆಗೆ ತನ್ನ ತಂದೆಗೆ ಆರೋಗ್ಯ ಸಮಸ್ಯೆ ಎದುರಾದಾಗ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆಯಬೇಕಾಯಿತು ಎಂದು ಸ್ವಂತ ಅನುಭವ ಹೇಳಿಕೊಂಡಿದ್ದಾರೆ .ನಟಿ ರಶ್ಮಿಕಾ ಮಂದಣ್ಣ ಸಹ ಟ್ವೀಟ್ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಅವರಿಗೆ ಎಮರ್ಜೆನ್ಸಿ ಆಸ್ಪತ್ರೆ ಕೊಡಗಿಗೆ ಬಹಳ ಅವಶ್ಯಕ ಎಂದು ಬೇಡಿಕೆ ಇಟ್ಟಿದ್ದಾರೆ.