ಬೆಂಗಳೂರು : ಬೆಳಕಿಲ್ಲದ ಅಡುಗೆ ಕೋಣೆ, ಸ್ವಚ್ಛತೆ ಇಲ್ಲದ ಸಪ್ಲೇಯರ್ಸ್, ಈ ಕ್ಯಾಂಟಿನ್ ಗುಣಮಟ್ಟವೋ ಒಂದು ಸಾರಿ ಬಂದವರು ಮತ್ತೊಮ್ಮೆ ತಿರುಗಿನೋಡದ ಪರಿಸ್ಥಿತಿ. ಈ ಕಾರಣಕ್ಕಾಗಿ ಈ ಕ್ಯಾಂಟೀನ್ನ್ನು ದಯವಿಟ್ಟು ಮುಚ್ಚಿ, ಸುಸಜ್ಜಿತ ಹೋಟೆಲ್ ತೆರೆಯುವಂತೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ.
ನಗರದ ಇತರೆ ಹೋಟೆಲ್, ರೆಸ್ಟೋರೆಂಟ್, ಮಾಲ್ ಗಳ ಆಹಾರ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಸಾವಿರಾರು ರುಪಾಯಿ ದಂಡ ಹಾಕುವ ಆರೋಗ್ಯಾಧಿಕಾರಿಗಳಿಗೆ ತಮ್ಮ ಕೇಂದ್ರ ಕಚೇರಿಯ ಕ್ಯಾಂಟಿನ್ ಕಣ್ಣಿಗೆ ಕಂಡೇ ಇಲ್ಲ ಅನಿಸುತ್ತೆ. ಗಾಳಿ, ಬೆಳಕಿನ ಸೌಲಭ್ಯ ಇಲ್ಲ. ಕಿಚನ್ ರೂಂ, ಸ್ವಚ್ಛತೆ ಇಲ್ಲದ ಸಪ್ಲಯಿಂಗ್ ಕೋಣೆ, ಇನ್ನು ಕೆಲಸ ಮಾಡುವ ಸಿಬ್ಬಂದಿಗಳ ತಲೆಗೆ ಕ್ಯಾಪ್ ಇಲ್ಲ, ಹೀಗೆ ಸ್ವಚ್ಛತೆ ದೃಷ್ಟಿಯಲ್ಲಿ ನೋಡಿದರೆ ಈ ಕ್ಯಾಂಟಿನ್ ನಡೆಯಲು ಸಾಧ್ಯವೇ ಇಲ್ಲ. ಆದ್ರೂ 1998 ರಿಂದ ಈವರೆಗೂ, ಸುಮಾರು ಇಪ್ಪತ್ತು ವರ್ಷಗಳಿಂದಲೂ ಲಿಂಗರಾಜು ಮಾಲೀಕತ್ವದ ಈ ಕ್ಯಾಂಟಿನ್ ಮುಂದುವರೆದುಕೊಂಡು ಬಂದಿದೆ.