ಹೈದರಾಬಾದ್: ಪ್ರತಿ ವರ್ಷ ಆಗಸ್ಟ್ 9 ಅನ್ನು ವಿಶ್ವ ಬುಡಕಟ್ಟು ದಿನವಾಗಿ ಆಚರಿಸಲಾಗುವುದು. 1994ರಲ್ಲಿ ವಿಶ್ವ ಸಂಸ್ಥೆ ಆಗಸ್ಟ್ 9 ಅನ್ನು ವಿಶ್ವ ಸ್ಥಳೀಯ ಜನರ ನಿವಾಸ ಎಂದು ಘೋಷಿಸಿತು. ಈ ದಿನದಂದು ಬುಡಕಟ್ಟು ಜನರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಈ ಮೂಲಕ ಬುಡಕಟ್ಟು ಸಮುದಾಯ ಮತ್ತು ಅವರ ಗುರುತು, ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿಯುವ ಪ್ರಯತ್ನದ ಭಾಗವೇ ಈ ವಿಶ್ವ ಬುಡಕಟ್ಟು ದಿನ.
ಬುಡಕಟ್ಟು ಜನರ ಇತಿಹಾಸ: ಬುಡಕಟ್ಟು ಜನರ ಇತಿಹಾಸಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಅವರ ಕಥೆಗಳು ಕೂಡ ರೋಚಕವಾಗಿದೆ. ಜಗತ್ತಿನ 90 ದೇಶಗಳ ಜನರ ಬುಡಕಟ್ಟು ಸಮುದಾಯದಲ್ಲಿ ಜೀವಿಸುತ್ತಿದ್ದಾರೆ. ಜಗತ್ತಿನಲ್ಲಿ ಅವರ ಸಂಖ್ಯೆ 400 ಮಿಲಿಯನ್ ನಷ್ಟಿದೆ. ಭಾರತದಲ್ಲಿ ಅವರ ಸಂಖ್ಯೆ 10 ಕೋಟಿಯಷ್ಟಿದೆ. ಆದಿವಾಸಿಗಳು ಎಂದರೆ ಸ್ಥಳೀಯರು ಎಂದು ಅರ್ಥ. ಬುಡಕಟ್ಟು ಸಮುದಾಯವನ್ನು ಭಾರತದ ಸಂವಿಧಾನದ 5ನೇ ಶೆಡ್ಯೂಲ್ನಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ದೇಶದಲ್ಲಿ 645 ವಿಧದ ಬುಡುಕಟ್ಟು ಜನರು ಇದ್ದಾರೆ. ಅವರಿಗಾಗಿ ಸಂವಿಧಾನದಲ್ಲಿ ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ.
ಬುಡಕಟ್ಟು ಜನರ ಸಂಸ್ಕೃತಿ ಮತ್ತು ನಾಗರಿಕತೆ: ಬುಡಕಟ್ಟು ಜನರು ಶಾಂತಿ ಪ್ರಿಯರು. ಅವರು ಯಾವುದೇ ನಿಯಮವನ್ನು ಉಲ್ಲಂಘಿಸುವುದಿಲ್ಲ. ಅವರು ತಮ್ಮದೇ ಆದ ನೃತ್ಯ ಮತ್ತು ಹಾಡುಗಳನ್ನು ಹೊಂದಿರುತ್ತಾರೆ. ಇದರ ಹೊರತಾಗಿ ಅವರಲ್ಲಿ ನಾಯಕ ಪ್ರಭಾವದ ಕಥೆಗಳು ಇರುತ್ತದೆ. ಅವುಗಳು ಸಮುದಾಯದ ಇತಿಹಾಸವನ್ನು ಹೊಂದಿರುತ್ತದೆ. ಜೊತೆಗೆ ಅವರು ತಮ್ಮ ಆತ್ಮ ಗೌರವ ಮತ್ತು ಹಕ್ಕಿನ ಬಗ್ಗೆ ಇದರಲ್ಲಿ ಧ್ವನಿ ಎತ್ತುತ್ತಾರೆ.
ಆದಿವಾಸಿಗಳಿಗೆ ಸಂವಿಧಾನದಲ್ಲಿ ಪರಿಶಿಷ್ಟ ಬುಡಕಟ್ಟು ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ಇದರ ಹೊರತಾಗಿ ಕೆಲವು ಬುಡಕಟ್ಟು ಸಮುದಾಯದವರು ಪ್ರಾಚೀನ ಬುಡಕಟ್ಟು ಎಂದು ಕೂಡ ವರ್ಗ ಮಾಡಲಾಗಿದೆ. ದೇಶದ ಬಹುತೇಕ ರಾಜ್ಯದಲ್ಲಿ ಈ ಬುಡಕಟ್ಟು ಸಮುದಾಯದವರು ಅಲ್ಪಸಂಖ್ಯಾತ ವರ್ಗಕ್ಕೆ ಬರುತ್ತಾರೆ. ಮಿಜೋರಾಂ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ್, ಛತ್ತೀಸ್ಗಢ್, ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.