ಆನೇಕಲ್ :ಕಳೆದ ಕೆಲ ದಿನಗಳಿಂದ ತಮಿಳುನಾಡು ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳ ಹಿಂಡು ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿವೆ. ಇತ್ತೀಚೆಗೆ ಸುರಿದ ಮಳೆಗೆ ಹಸಿರು ಹಾಗು ನೀರನ್ನು ಹುಡುಕುತ್ತಾ ನಾಡಿನತ್ತ ಆನೆ ಹಿಂಡು ದಾಪುಗಾಲಿಡುತ್ತಿವೆ.
ಕಾಡಾನೆಗಳ ಪುಂಡಾಟ... ದೃಶ್ಯ ಮೊಬೈಲ್ನಲ್ಲಿ ಸೆರೆ - wild elephant attack
ಗಡಿನಾಡಿನ ಭಾಗದಲ್ಲಿ ಕಾಡನೆಗಳ ಪುಂಡಾಟ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಗಳು ನಾಶವಾಗುತ್ತಿವೆ.

ಗಡಿನಾಡಿನ ಭಾಗದಲ್ಲಿ ಕಾಡನೆಗಳ ಪುಂಡಾಟ
ಸೂಳಗಿರಿ ಬಳಿ ಬೆಳೆ ಮತ್ತು ನೀರಿನ ತೋಟ್ಟಿಯಲ್ಲಿ ನಿರ್ಭಿತಿಯಿಂದ ಸುಳಿದಾಡುತ್ತಿದ್ದ ಆನೆಗಳನ್ನು ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಕಾಡಿಗಟ್ಟಲು ಹರಸಾಹಸ ಪಟ್ಟಿದ್ದಾರೆ.
ಗಡಿನಾಡಿನ ಭಾಗದಲ್ಲಿ ಕಾಡನೆಗಳ ಪುಂಡಾಟ
ಗಡಿ ಭಾಗದ ಪ್ಯಾರಂಡಪಲ್ಲಿ ಬಳಿ 12 ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ. ಇದೇ ವೇಳೆ ಹೊಲದಲ್ಲಿ ಮೇಯುತ್ತಿದ್ದ ಜಾನುವಾರಗಳ ಮೇಲೆ ಕಾಡಾನೆ ಪುಂಡಾಟ ಮೆರೆದಿವೆ. ದಾಳಿ ಮಾಡಲು ಮುಂದಾದ ದೃಶ್ಯಗಳು ಊರಿನ ಗ್ರಾಮಸ್ಥರ ಮೊಬೈಲ್ನಲ್ಲಿ ಸೆರೆಯಾಗಿದೆ.