ಕರ್ನಾಟಕ

karnataka

ETV Bharat / state

ಸದಸ್ಯರ ಆಸ್ತಿ ಘೋಷಣೆ ವಿಚಾರ: ಕಾಲಾವಕಾಶ ಕೇಳಿದ ಬಿಬಿಎಂಪಿ - undefined

ಆಸ್ತಿ ಘೋಷಣೆ ಮಾಡಿಕೊಳ್ಳದವರನ್ನು ಅನರ್ಹಗೊಳಿಸುವಂತೆ ಕೋರಿ ಕೆ.ಅನಿಲ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿದೆ.

ಹೈಕೋರ್ಟ್

By

Published : Jul 11, 2019, 5:39 AM IST

ಬೆಂಗಳೂರು:ನಿಯಮದಂತೆಆಸ್ತಿ ಘೋಷಣೆ ಮಾಡಿಕೊಳ್ಳದ 34 ಸದಸ್ಯರನ್ನ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಸದಸ್ಯರ ಮಾಹಿತಿ ನೀಡಲು ಬಿಬಿಎಂಪಿ ಎರಡು ವಾರ ಕಾಲಾವಕಾಶ ಕೇಳಿದೆ.

ಈ ಕುರಿತು ಸಾಮಾಜಿಕ ಹೋರಾಟಗಾರ ಕೆ.ಅನಿಲ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಬಿಬಿಎಂಪಿ ಪರ ವಾದಿಸಿದ ವಕೀಲರು, ನಿಯಮದ ಪ್ರಕಾರ ಆಸ್ತಿ ಘೋಷಣೆ ಮಾಡಿಕೊಳ್ಳದ ಬಿಬಿಎಂಪಿ ಸದಸ್ಯರ ಕುರಿತು ಮಾಹಿತಿ ನೀಡಲು ಎರಡು ವಾರ ಕಾಲಾವಕಾಶ ಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಕಳೆದ ವಿಚಾರಣೆ ವೇಳೆ ಸದಸ್ಯರ ಕುರಿತು ವರದಿ ಸಲ್ಲಿಸಲು ಬಿಬಿಎಂಪಿಗೆನ್ಯಾಯ ಪೀಠ ಸೂಚಿಸಿತ್ತು. ಬಿಬಿಎಂಪಿ ವಕೀಲರು ಕಾಲಾವಕಾಶ ಕೇಳಿದ ಹಿನ್ನೆಲೆ ಹೈಕೋರ್ಟ್ ಜುಲೈ 25ಕ್ಕೆ ವಿಚಾರಣೆ ಮುಂದೂಡಿದೆ.

For All Latest Updates

TAGGED:

ABOUT THE AUTHOR

...view details