ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಪರೀಕ್ಷೆ 10:30 ಕ್ಕೆ ಶುರುವಾಗಲಿದ್ದರೂ, ವಿದ್ಯಾರ್ಥಿಗಳು ಎರಡು ಗಂಟೆ ಮುಂಚಿತವಾಗಿಯೇ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ.
ಇತ್ತ ಕೋವಿಡ್ ಪಾಲನೆಗಾಗಿ ನೇಮಿಸಿರುವ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಗೈಡ್ ಮಾಡುತ್ತಿದ್ದಾರೆ.. ಇಂದು ಗಣಿತ, ಸಮಾಜಶಾಸ್ತ್ರ, ವಿಜ್ಞಾನ ಪರೀಕ್ಷೆಯು ನಡೆಯಲಿದ್ದು, ಒಂದೊಂದು ಪೇಪರ್ಗೂ ಒಂದೊಂದು ಬಣ್ಣ ಇರಲಿದೆ. ಗಣಿತ ಪಿಂಕ್, ವಿಜ್ಞಾನ ಆರೆಂಜ್, ಸಮಾಜ ವಿಜ್ಞಾನ ಗ್ರೀನ್ ಕಲರ್ನಲ್ಲಿರಲಿದೆ. ಮೂರು ಗಂಟೆ ಕಾಲ ನಡೆಯುವ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧರಾಗಿದ್ದು, ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ಕೋವಿಡ್ ದೃಢಪಟ್ಟಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು
ಕೊರೊನಾ ಸೋಂಕು ದೃಢಪಟ್ಟವರಿಗೂ ಪರೀಕ್ಷೆ ಬರೆಯಲು ಅವಕಾಶವಿದ್ದು, ರಾಜ್ಯಾದ್ಯಂತ 23 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇವರಿಗೆ ಸ್ಥಳೀಯ ಕೋವಿಡ್ ಕೇರ್ ಸೆಂಟರ್ನಲ್ಲಿ ವ್ಯವಸ್ಥೆ ಮಾಡಲಾಗಿದೆ..