ಬೆಂಗಳೂರು: ಕೆ.ಆರ್ ಮಾರ್ಕೆಟ್ನಲ್ಲಿ ನಿಂಬೆ ಹಣ್ಣು ಮಾರಾಟ ಜಾಗಕ್ಕಾಗಿ ನಡೆದ ಭರತ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಕೆ.ಆರ್ ಮಾರ್ಕೆಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿಂಬೆಹಣ್ಣು ವ್ಯಾಪಾರಿಯ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ - undefined
ನಿಂಬೆಹಣ್ಣು ಮಾರಾಟ ಜಾಗಕ್ಕಾಗಿ ಕೆಲ ದಿನಗಳ ಹಿಂದೆ ಭರತ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶರವಣ, ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಪ್ರಮುಖ ಆರೋಪಿ ವೇಲು ಎಂಬಾತ ತಲೆಮರೆಸಿಕೊಂಡಿದ್ದಾನೆ. ಕೆ.ಆರ್ ಮಾರ್ಕೆಟ್ನಲ್ಲಿ ಭರತ್ ನಿಂಬೆ ಹಣ್ಣು ಮಾರಾಟ ಮಾಡ್ತಿದ್ದ. ಭರತ್ ಹಾಗೂ ಮಾರ್ಕೆಟ್ ವೇಲು ನಡುವೆ ನಿಂಬೆ ಹಣ್ಣು ಮಾರೋ ಜಾಗದ ವಿಷಯಕ್ಕೆ ಕೆಲ ದಿನಗಳ ಹಿಂದೆ ಕಿರಿಕ್ ನಡೆದಿತ್ತು. ಈ ಕಿರಿಕ್ನಲ್ಲಿ ವೇಲು ಜೈಲಿಗೂ ಹೋಗಿ ಬಂದಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಇದೇ ತಿಂಗಳ 14ನೇ ತಾರೀಖಿನಂದು ಭರತ್ನನ್ನು ಮಾರ್ಕೆಟ್ ಜಾಗದ ಬಳಿಯೇ ಕೊಚ್ಚಿ ಕೊಲೆ ಮಾಡಲಾಗಿತ್ತು ಎನ್ನಲಾಗಿದೆ.
ಇದೀಗ ತಲೆಮರೆಸಿಕೊಂಡಿದ್ದಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.