ಕರ್ನಾಟಕ

karnataka

ETV Bharat / state

ಮಾರಕಾಸ್ತ್ರಗಳಿಂದ ವಾಹನಗಳ ಜಖಂ: ಆರೋಪಿಗಳ ಬಂಧನ - kannada news

ಕಾರು ಹಾಗು ದ್ವಿಚಕ್ರ ವಾಹನಗಳನ್ನು ಮಾರಕಾಸ್ತ್ರಗಳಿಂದ ಪುಡಿಗಟ್ಟಿದ್ದ ಆರೋಪಿಗಳನ್ನು ನಗರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕಾರು ಜಖಂ ಮಾಡಿದ್ದ ಆರೋಪಿಗಳ

By

Published : May 14, 2019, 5:01 PM IST

ಬೆಂಗಳೂರು:ಶಾಸ್ತ್ರಿ ನಗರದಲ್ಲಿ ಮಾರಕಾಸ್ತ್ರಗಳಿಂದ ವಾಹನಗಳನ್ನು ಜಖಂಗೊಳಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರಕಾಸ್ತ್ರಗಳಿಂದ ವಾಹನಗಳನ್ನು ಜಖಂಗೊಳಿಸಿರುವುದು

ಸೂರ್ಯ ಅಲಿಯಾಸ್ ಜೋಗಿ,ಸಂತೋಷ್ ಅಲಿಯಾಸ್ ಏಲಕ್ಕಿ,ಟೈಟಾಸ್,ಪ್ರಶಾಂತ್ ಹಾಗು ಅಲೆಕ್ಸ್ ಬಂಧಿತರು.

ಇದೇ ತಿಂಗಳ 11ನೇ ತಾರೀಖಿನಂದು ರಾತ್ರಿ 2 ಗಂಟೆ ಸುಮಾರಿಗೆ, ರಸ್ತೆ ಬಳಿ ಪಾರ್ಕ್‌ ಮಾಡಲಾಗಿದ್ದ ಆಟೋರಿಕ್ಷಾ ಸೇರಿದಂತೆ 1 ಕಾರು, 16 ದ್ವಿಚಕ್ರ ವಾಹನಗಳನ್ನು ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಜಖಂಗೊಳಿಸಿತ್ತು. ಪರಿಣಾಮ ವಾಹನದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು.

ABOUT THE AUTHOR

...view details