ಕರ್ನಾಟಕ

karnataka

ETV Bharat / state

ನಕಲಿ ಗನ್ ತೋರಿಸಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರನ್ನು ಬಂಧಿಸಿದ ರೈಲ್ವೆ ಪೊಲೀಸ್​

ನಕಲಿ ಗನ್ ತೋರಿಸಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಬೆಂಗಳೂರಿನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ರೈಲ್ವೆ ಪೊಲೀಸರು
ರೈಲ್ವೆ ಪೊಲೀಸರು

By

Published : Sep 9, 2021, 10:40 AM IST

ಬೆಂಗಳೂರು:ನಕಲಿ ಗನ್ ತೋರಿಸಿ ರೈಲು ಪ್ರಯಾಣಿಕರಿಂದ ಚಿನ್ನಾಭರಣ ದೋಚುತ್ತಿದ್ದ ಉತ್ತರ ಭಾರತೀಯ ಮೂಲದ ಇಬ್ಬರು ದರೋಡೆಕೋರರನ್ನು ಬೆಂಗಳೂರು ರೈಲ್ವೆ ನಗರ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ರವಿಚಂದ್ (27) ಹಾಗೂ ಉತ್ತರಪ್ರದೇಶ ಮೂಲದ ಸಂದೀಪ್ (32) ಬಂಧಿತರು. ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ನಕಲಿ ಗನ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಇಬ್ಬರು ಆರೋಪಿಗಳು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಹಣದ ಆಸೆಗಾಗಿ ಅಕ್ರಮ ಹಾದಿ ಹಿಡಿದ ಆರೋಪಿಗಳು, ರೈಲ್ವೆ ನಿಲ್ದಾಣದಲ್ಲಿ ದರೋಡೆಗಿಳಿದರು. ಹೊರ ರಾಜ್ಯಗಳಿಂದ ಬರುವ ರೈಲುಗಳು ಕ್ರಾಸಿಂಗ್​​ಗಾಗಿ ನಿಲ್ಲಿಸಿರುವಾಗ ಸುಲಿಗೆಕೋರರು ರೈಲು ಹತ್ತುತ್ತಿದ್ದರು. ನಕಲಿ ಗನ್ ತೋರಿಸಿ ಚಿನ್ನಾಭರಣ ನೀಡುವಂತೆ ಧಮ್ಕಿ ಹಾಕಿ ಅವರಿಂದ ನಗ - ನಾಣ್ಯ ದೋಚುತ್ತಿದ್ದರು.‌‌ ಕಳೆದೊಂದು ತಿಂಗಳಿಂದ ಇವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ:ಪಾರ್ಟಿ ಮುಗಿಸಿ ಹಿಂತಿರುವಾಗ ಭೀಕರ ರಸ್ತೆ ಅಪಘಾತ: ಬೆಳಗಾವಿಯ ಇಬ್ಬರು ಯುವಕರ ಸಾವು

ಪ್ರಕರಣ ದಾಖಲಿಸಿಕೊಂಡ ಇನ್​ಸ್ಪೆಕ್ಟರ್ ಶಿವಕುಮಾರ್, ಆರೋಪಿಗಳನ್ನು ಬಂಧಿಸಿದ್ದಾರೆ.

ABOUT THE AUTHOR

...view details