ಕರ್ನಾಟಕ

karnataka

ETV Bharat / state

ಜಿಂದಾಲ್​​​​ ಕಂಪನಿಗೆ ಭೂಮಿ ಮಾರಾಟ: ಸರ್ಕಾರದ ನಿರ್ಧಾರಕ್ಕೆ ಜಾರ್ಜ್​ ಏನಂದ್ರು? - KJ George

ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಕುರಿತು ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಜಿಂದಲ್​ಗೆ ಭೂಮಿ ಕೊಡುವ ಕಡತ ಮರು ಪರಿಶೀಲನೆಗೆ ಮುಂದಾಗಿರುವುದಾಗಿ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಬೃಹತ್ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್

By

Published : Jun 12, 2019, 5:24 PM IST

ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಕುರಿತು ಕೆಲವು ಸಂಶಯಗಳು ಮೂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡಲಾಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಜಿಂದಾಲ್​ಗೆ ಜಮೀನು ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹಾಗಾಗಿ, ಈ ವಿಚಾರ ಮತ್ತೆ ಸಂಪುಟ ಸಭೆಯಲ್ಲೇ ಚರ್ಚೆಯಾಗಬೇಕು. ಸಂಪುಟ ಸಭೆ ಸುಪ್ರೀಂ ಆಗಿದೆ. ಅದರ ನಿರ್ಧಾರವೇ ಅಂತಿಮ ಆಗಲಿದೆ ಎಂದರು.

ಜಿಂದಾಲ್​ಗೆ ಜಮೀನು ನೀಡುವ ತೀರ್ಮಾನದ ವಿಚಾರದಲ್ಲಿ ಸಂಶಯಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ ಪುನರ್ ಪರಿಶೀಲನೆಗಾಗಿ ಮತ್ತೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್

ಮಾಜಿ ಸಚಿವ ಹೆಚ್​.ಕೆ.ಪಾಟೀಲ್ ಅಸಮಾಧಾನದಿಂದ ಮರು ಪರಿಶೀಲನೆ ಮಾಡುತ್ತಿಲ್ಲ. ಹೆಚ್​.ಕೆ.ಪಾಟೀಲ್, ಪ್ರತಿಪಕ್ಷದವರು ಸೇರಿದಂತೆ ಹಲವರಿಗೆ ಜಿಂದಾಲ್​ಗೆ ಜಮೀನು ನೀಡುವ ವಿಷಯದಲ್ಲಿ ಕೆಲವೊಂದು ಸಂಶಯ ಮೂಡಿದೆ. ಆ ಸಂಶಯ ಪರಿಹಾರ ಮಾಡುವ ಕೆಲಸ ಮಾಡಬೇಕಿದೆ. ಹಾಗಾಗಿ, ಮರು ಪರಿಶೀಲನೆಗೆ ಮುಂದಾಗಿದ್ದೇವೆ ಎಂದರು.

2004-05, 2006-07ರಲ್ಲಿ ಲೀಸ್ ಕಮ್ ಸೇಲ್ ಮಾಡಲಾಗಿದೆ. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ಜನರಲ್ಲಿ ಸಂಶಯ, ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಅದರ ಪರಿಹಾರಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಸಚಿ ಸಂಪುಟ ಸಭೆ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಸಾರ್ವಜನಿಕರಿಗೆ ಸರ್ಕಾರದ ನಿರ್ಧಾರ ಅನುಮಾನ ಮೂಡಿಸಿದಾಗ ಅದನ್ನು ಬಗೆಹರಿಸುವ ಕೆಲಸ ಸರ್ಕಾರ ನಡೆಸುತ್ತಿರುವವರು ಮಾಡಬೇಕು. ಅದು ಪ್ರಜಾಪ್ರಭುತ್ವದಲ್ಲಿ ಮಾಡಬೇಕಾದ ಕೆಲಸ. ಹೀಗಾಗಿ ಜಿಂದಲ್​ಗೆ ಭೂಮಿ ಕೊಡುವ ಕಡತ ಮರು ಪರಿಶೀಲನೆಗೆ ಮುಂದಾಗಿದ್ದೇವೆ ಎಂದರು.

ABOUT THE AUTHOR

...view details