ಕರ್ನಾಟಕ

karnataka

ETV Bharat / state

ದಿವ್ಯಾಂಗರಿಗೆ ನೀಡುವ ತ್ರಿಚಕ್ರ ವಾಹನದಲ್ಲಿ ಗೋಲ್ ಮಾಲ್: ಎಸಿಬಿಗೆ ದೂರು - complains to ACB

ಬೃಹತ್ ಮಹಾನಗರ ಪಾಲಿಕೆಯ ಪಶ್ಚಿಮ ವಲಯದಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ತ್ರಿಚಕ್ರ ವಾಹನ ವಿತರಣೆಯಲ್ಲಿ 3 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಬಿಎಂಪಿ ವಿರುದ್ದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಎಸಿಬಿಗೆ ದೂರು ನೀಡಿದ್ದಾರೆ.

ಅಂಗವಿಕಲರಿಗೆ ನೀಡುವ ತ್ರಿಚಕ್ರ ವಾಹನದಲ್ಲಿ ಗೋಲ್ ಮಾಲ್: ಎಸಿಬಿಗೆ ದೂರು

By

Published : Nov 12, 2019, 7:08 PM IST

ಬೆಂಗಳೂರು: ಬೃಹತ್ ಮಹಾನಗರ ಪಾಲಿಕೆಯ ಪಶ್ಚಿಮ ವಲಯದಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ತ್ರಿಚಕ್ರ ವಾಹನ ವಿತರಣೆಯಲ್ಲಿ 3 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಬಿಎಂಪಿಯ ಪಶ್ವಿಮ ವಿಭಾಗದ ಜಂಟಿ ಆಯುಕ್ತ ಚಿದಾನಂದ್ ಹಾಗೂ ಕಲ್ಯಾಣ ಅಧಿಕಾರಿ ಟಿ. ಲಲಿತಾ ಹಾಗೂ , ವಿಜಯ ರಾಜ, ಅರುಣ್, ಚಂದ್ರು ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಎಸಿಬಿಗೆ ದೂರು ನೀಡಿದ್ದಾರೆ.

ದಿವ್ಯಾಂಗ ನೀಡುವ ತ್ರಿಚಕ್ರ ವಾಹನದಲ್ಲಿ ಗೋಲ್ ಮಾಲ್: ಎಸಿಬಿಗೆ ದೂರು

2016 ,17,18,19ನೇ ಸಾಲಿನಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಸ್ವಾವಲಂಬಿಯಾಗಿ ಬದುಕಲು ಬಿಬಿಎಂಪಿಯಿಂದ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಲಾಗ್ತಿತ್ತು‌. 221 ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳು ಮಂಜೂರಾಗಿದ್ದವು. ಆದರೆ, ನಿಜವಾದ ಫಲಾನುಭವಿಗಳಿಗೆ ನೀಡದೇ ತಮಗಿಷ್ಟ ಬಂದ ಹಾಗೆ ಬೇಕಾದವರಿಗೆ ಅರ್ಹತೆಯೇ ಇಲ್ಲದವರ ಪಟ್ಟಿ ತಯಾರಿಸಿ‌ ತ್ರಿಚಕ್ರ ವಾಹನಗಳನ್ನ ಹಂಚಿಕೆ ಮಾಡ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ABOUT THE AUTHOR

...view details