ಬೆಂಗಳೂರು: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಂದು ಸಿಕ್ಕಿದೆ. ಎಂದೋ ಕಂಡ ಕನಸು ನನಸಾಗಿದೆ ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ 167ನೇ ರ‍್ಯಾಂಕ್ ಪಡೆದ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ಕೀರ್ತನಾ ಎಚ್.ಎಸ್ ಹೇಳಿದ್ದಾರೆ.
ಎಂದೋ ಕಂಡ ಕನಸಿಂದು ನನಸು: ಯುಪಿಎಸ್ಸಿ ಪರೀಕ್ಷೆಯಲ್ಲಿ 167ನೇ ರ‍್ಯಾಂಕ್ ಪಡೆದ ಕೀರ್ತನಾ - Civil service Officers fromKrnataka
ನನ್ನ ಕನಸು ನನಸು ಮಾಡಿದ ಆ ದೇವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಬಂದಿರುವ ರ‍್ಯಾಂಕ್‌ಗೆ ಐಎಎಸ್ ಹುದ್ದೆ ಸಿಗುವ ವಿಶ್ವಾಸವಿದೆ. ಫಲಿತಾಂಶದಿಂದ ತುಂಬಾ ಖುಷಿಯಾಗಿದೆ. ಶಿಕ್ಷಣ, ಮಹಿಳಾ ಮಕ್ಕಳ ವಲಯದಲ್ಲಿ ಕೆಲಸ ಮಾಡಲು ಹೆಚ್ಚು ಆಸಕ್ತಿ ಇದೆ ಎಂದು ಕೀರ್ತನಾ ತಿಳಿಸಿದರು.
ಯುಪಿಎಸ್ಸಿ 167ನೇ ರ‍್ಯಾಂಕ್ ಪಡೆದ ಕೀರ್ತನಾ
2015ರಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದ ಕೀರ್ತನಾ ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು. ಬಳಿಕ ಬಿಬಿಎಂಪಿಯ ಸ್ಪೆಷಲ್ ಆಫೀಸರ್, ಕೋವಿಡ್ ನೋಡಲ್ ಆಫೀಸರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.