ಕರ್ನಾಟಕ

karnataka

ETV Bharat / state

'ಇದು ನಾಚಿಕೆಗೇಡು' ಬೆಂಗಳೂರಿನ ರಸ್ತೆ ದುರವಸ್ಥೆ ಬಗ್ಗೆ ಕಿರಣ್ ಮಜುಂದಾರ್ ಷಾ ಕಿಡಿ - ಬಯೋಕಾನ್​​ ಮುಖ್ಯಸ್ಥೆ ಕಿರಣ್​​ ಮಜುಂದಾರ್​ ಷಾ

ಬೆಂಗಳೂರಿನ ಹದಗೆಟ್ಟ ರಸ್ತೆಗಳ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಉದ್ಯಮಿ ಕಿರಣ್ ಮಜುಂದಾರ್ ಷಾ ಇದೀಗ ಮತ್ತೊಮ್ಮೆ ಟ್ವೀಟ್‌ ಮೂಲಕ ರಾಜಕಾರಣಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Kiran mazumdar shaw tweets on Road
Kiran mazumdar shaw tweets on Road

By

Published : Jun 8, 2022, 3:08 PM IST

Updated : Jun 9, 2022, 6:21 AM IST

ಬೆಂಗಳೂರು:ರಾಜಧಾನಿಯಹದಗೆಟ್ಟ ರಸ್ತೆಗಳ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ ಮೂಲಕ ಬೇಸರ ಹೊರಹಾಕಿದ್ದ ಬಯೋಕಾನ್​​ ಮುಖ್ಯಸ್ಥೆ ಕಿರಣ್​​ ಮಜುಂದಾರ್​ ಷಾ, ಇದೀಗ ಮತ್ತೊಮ್ಮೆ ಅದೇ ವಿಚಾರವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು-ಮೈಸೂರು ನಡುವಿನ ರಸ್ತೆಯ ನೈಸ್​​ ರಸ್ತೆ ಜಂಕ್ಷನ್​ ಸಮೀಪದಲ್ಲಿ ಹತ್ತಾರು ಗುಂಡಿಗಳು ಕಾಣಿಸಿಕೊಂಡಿರುವ ವಿಡಿಯೋ ತುಣುಕನ್ನು ಶ್ರೀರಾಮ್‌ ಬಿಎನ್‌ ಎನ್ನುವವರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಷಾ, 'ಇದು ಆಘಾತಕಾರಿ ಮತ್ತು ನಾಚಿಕೆಗೇಡು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ರಸ್ತೆಗಳ ದುಃಸ್ಥಿತಿ ಆನೇಕಲ್​ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಬಯೋಕಾನ್ ಮುಖ್ಯಸ್ಥೆ, ಸರ್ಜಾಪುರ ಸುತ್ತಮುತ್ತಲಿನ ಕೆಟ್ಟ ರಸ್ತೆಗಳ ಬಗ್ಗೆ ಟ್ವೀಟ್ ಮಾಡಿದ್ದರು. ಆನೇಕಲ್ ತಾಲೂಕಿನ ಹುಸೂರು-ಸರ್ಜಾಪುರ ರಸ್ತೆ ಸಂಚಾರ ಮಾಡದಿರುವಷ್ಟು ಹದಗೆಟ್ಟಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತಮ ರಸ್ತೆ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ ಸರ್ಕಾರ ಬಸ್ ಡಿಪೋ, ವಸತಿ ಗೃಹಗಳನ್ನು ಇಲ್ಲಿ ಯಾಕೆ ನಿರ್ಮಿಸಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದರು.

ಇದನ್ನೂ ಓದಿ:ಆನೇಕಲ್ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು: ಬಯೋಕಾನ್ ಮುಖ್ಯಸ್ಥೆ ಕೆಂಡಾಮಂಡಲ

Last Updated : Jun 9, 2022, 6:21 AM IST

ABOUT THE AUTHOR

...view details