ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ನಲ್ಲಿ ಖಾಲಿ ಇರುವ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಬೆಂಗಳೂರಿನ ಕಚೇರಿಯಲ್ಲಿ ನೇಮಕಾತಿ ನಡೆಯಲಿದೆ. ಒಟ್ಟು 14 ಹುದ್ದೆಗಳಿವೆ. ಆಸಕ್ತ, ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
- ಎಕ್ಸಿಕ್ಯುಟಿವ್ ಕಂಪನಿ ಸೆಕ್ರೆಟರಿ- 1 ಹುದ್ದೆ
- ಆಫೀಸರ್/ ಬ್ಯುಸಿನೆಸ್ ಡೆವಲಪ್‌ಮೆಂಟ್ ಆಫೀಸರ್ 4
- ಇಂಜಿನಿಯರ್ 2
- ಬ್ಯುಸಿನೆಸ್ ಡೆವಲಪ್‌ಮೆಂಟ್ ಆಫೀಸರ್ 3
- ಸಂಪರ್ಕ ಅಧಿಕಾರಿ 1
- ಆಫೀಸರ್ 1
- ಎಕ್ಸಿಕ್ಯೂಟಿವ್ ಆಫೀಸರ್ ಪಿಎ 1
- ಆಫೀಸರ್ ಟ್ರೈನಿ 1
ವಿದ್ಯಾರ್ಹತೆ:
- ಎಕ್ಸಿಕ್ಯುಟಿವ್ ಕಂಪನಿ ಸೆಕ್ರೆಟರಿ - ಪದವಿ
- ಆಫೀಸರ್/ ಬ್ಯುಸಿನೆಸ್ ಡೆವಲ್ಮೆಂಟ್ ಆಫೀಸರ್ ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ, ಎಂಬಿಎ
- ಇಂಜಿನಿಯರ್ ಬಿಇ ಅಥವಾ ಬಿಟೆಕ್
- ಬ್ಯುಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಬಿಕಾಂ, ಬಿಬಿಎಂ, ಬಿಬಿಎ, ಬಿಸಿಎ
- ಸಂಪರ್ಕ ಅಧಿಕಾರಿ ಸ್ನಾತಕೋತ್ತರ ಪದವಿ
- ಆಫೀಸರ್ ಪದವಿ
- ಎಕ್ಸಿಕ್ಯೂಟಿವ್ ಆಫೀಸರ್ ಪಿಎ ಡಿಪ್ಲೊಮಾ
- ಆಫೀಸರ್ ಟ್ರೈನಿ ಎಂಬಿಎ
ವಯೋಮಿತಿ: ಗರಿಷ್ಠ ವಯೋಮಿತಿ 35 ವರ್ಷ. ಸಂಪರ್ಕ ಅಧಿಕಾರಿಗೆ ವಯೋಮಿತಿ 45 ವರ್ಷ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
ವೇತನ: ಮಾಸಿಕ 30 ರಿಂದ 70 ಸಾವಿರ ರೂಪಾಯಿ.