ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಶ್ರೀನಿವಾಸ್ ಎಂಬಾತ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಹೀಗಾಗಿ ದಚ್ಚು ಬಳಿ ಸಹಾಯ ಕೇಳಲು ಆ್ಯಂಬುಲೆನ್ಸ್ನಲ್ಲೇ ದರ್ಶನ್ ಮನೆಗೆ ಬಂದಿದ್ದ. ಆದರೆ ದರ್ಶನ್ ಅವರು ಸಿಗದ ಕಾರಣ ನಿರಾಶೆಯಿಂದಲೇ ಮನೆಗೆ ಹಿಂದಿರುಗಿದ.
ಕಿಡ್ನಿ ವೈಫಲ್ಯ: ಆ್ಯಂಬುಲೆನ್ಸ್ನಲ್ಲೇ ದರ್ಶನ್ ಮನೆಗೆ ಬಂದ ಅಭಿಮಾನಿ - ಆಂಬುಲೆನ್ಸ್ನಲ್ಲೆ ದರ್ಶನ್ ಮನೆಗೆ ಬಂದ ರೋಗಿ
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಭಿಮಾನಿ ಶ್ರೀನಿವಾಸ್ ಎಂಬಾತ ದರ್ಶನ್ ಮನೆ ಬಳಿ ಬಂದಿದ್ದ. ಆದ್ರೆ ರಾಬರ್ಟ್ ಚಿತ್ರಕ್ಕೆ ಡಬ್ಬಿಂಗ್ ಮಾಡಲು ದರ್ಶನ್ ಅವರು ಅಭಿಮಾನ್ ಸ್ಟುಡಿಯೋಗೆ ಹೋಗಿದ್ದರು. ಈ ಹಿನ್ನೆಲೆ ಶ್ರೀನಿವಾಸ್ ನಿರಾಶೆಯಿಂದ ತಮ್ಮ ಮನೆಗೆ ತೆರಳುವಂತಾಯಿತು.
ಆಂಬುಲೆನ್ಸ್ನಲ್ಲೆ ದರ್ಶನ್ ಮನೆಗೆ ಬಂದ ರೋಗಿ
ಅಭಿಮಾನಿ ಶ್ರೀನಿವಾಸನು ದರ್ಶನ್ ಮನೆ ಬಳಿ ಬಂದಾಗ ಅವರು ರಾಬರ್ಟ್ ಚಿತ್ರದ ಡಬ್ಬಿಂಗ್ ಮಾಡಲು ಅಭಿಮಾನ್ ಸ್ಟುಡಿಯೋಗೆ ಹೋಗಿದ್ದರು. ಈ ಹಿನ್ನೆಲೆ ಶ್ರೀನಿವಾಸ್ ನಿರಾಶೆಯಿಂದ ತಮ್ಮ ಮನೆಗೆ ತೆರಳಿದ್ದಾನೆ.
ಶ್ರೀನಿವಾಸ್ ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿಯಾಗಿದ್ದು, ಈತನಿಗೆ ಎರಡೂ ಕಿಡ್ನಿಗಳು ವೈಫಲ್ಯವಾಗಿವೆ. ಶ್ರೀನಿವಾಸ್ಗೆ ಅವರ ತಂದೆಯೇ ಕಿಡ್ನಿ ಕೊಡಲು ಮುಂದಾಗಿದ್ದು, ನಾಳೆ ಅಥವಾ ನಾಡಿದ್ದು ಆಪರೇಷನ್ ನಡೆಯಲಿದೆ. ಇನ್ನು, ಅಭಿಮಾನಿಗಳ ಕಷ್ಟಕ್ಕೆ ಹೆಗಲು ಕೊಡುವ ದರ್ಶನ್ ಈ ಅಭಿಮಾನಿಗೆ ಯಾವ ರೀತಿ ಸಹಾಯ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.