ಬೆಂಗಳೂರು:ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ವಿಜಯನಗರದ ಮನುವನ ಪಾರ್ಕ್ ಬಳಿ ನಡೆದಿದೆ.
ಸಿನಿಮೀಯ ರೀತಿಯಲ್ಲಿ ಯುವಕನ ಕಿಡ್ನ್ಯಾಪ್: ಪೊಲೀಸರಿಂದ ಆರೋಪಿಗಳಿಗಾಗಿ ಶೋಧ - ವಿಜಯನಗರ ಪೊಲೀಸ್ ಠಾಣೆ
ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಯುವಕನನ್ನು ಅಪಹರಿಸಲಾಗಿದೆ. ಈ ಘಟನೆ ವಿಜಯನಗರದ ಮನುವನ ಪಾರ್ಕ್ ಬಳಿ ನಡೆದಿದೆ. ಈ ಘಟನೆಯಿಂದ ಬೆಂಗಳೂರಿನ ಜನ ಬೆಚ್ಚಿ ಬಿದ್ದಿದ್ದಾರೆ.
ಅಜಯ್ (19) ವರ್ಷದ ಯುವಕ ಕಿಡ್ನ್ಯಾಪ್ ಆದ ಯುವಕ. ವಿಜಯನಗರದ ಪಾರ್ಕ್ ಬಳಿ ಹಣ್ಣಿನ ಗಾಡಿ ಇಟ್ಟುಕೊಂಡು ತಂದೆ, ಮಗ ವ್ಯಾಪಾರ ಮಾಡ್ತಿದ್ರು. ಆದ್ರೆ ಇಂದು ಮಧ್ಯಾಹ್ನ 4 ಜನ ಯುವಕರ ತಂಡ ಏಕಾಏಕಿ ನುಗ್ಗಿ ಜನರ ಮಧ್ಯದಲ್ಲೆ ಯುವಕನ ಅಪಹರಣ ಮಾಡಿದ್ದಾರೆ.
ಪಾರ್ಕ್ ಬಳಿ ಇರುವ ತಂದೆಯ ಹಣ್ಣಿನ ಅಂಗಡಿಗೆ ಹಣ್ಣು ಸರಬರಾಜು ಮಾಡುತ್ತಿರುವಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನೋಡ ನೋಡುತ್ತಿದ್ದಂತೆ ಜನರ ಸಮ್ಮುಖದಲ್ಲೆ ಅಪಹರಣ ಮಾಡಿದ್ದಾರೆ. ಬಳಿಕ ತಂದೆಗೆ ಕರೆ ಮಾಡಿ 30 ನಿಮಿಷದಲ್ಲಿ ಕಳಿಸಿಕೊಡುವುದಾಗಿ ತಿಳಿಸಿದ್ದಾರೆ. ಸದ್ಯ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.