ಬೆಂಗಳೂರು :ಲಾಕ್‌ಡೌನ್ ಜಾರಿ ಮಾಡಿದ ಬಳಿಕ ನಗರದಲ್ಲಿರುವ ಅಸಂಘಟಿಕ ಕಾರ್ಮಿಕರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ. ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಕಾರ್ಮಿಕರ ಸಂಕಟವನ್ನು ಕಡಿಮೆ ಮಾಡಲು ಮುಂದಾಗಿರುವ ನಾಡಿನ ಖ್ಯಾತ ಕಿಕ್ ಬಾಕ್ಸರ್ ಶರಣಪ್ಪ ನಿತ್ಯವೂ ಸಾವಿರಾರು ಜನರಿಗೆ ಆಹಾರ ಪೂರೈಸುವ ಕೆಲಸ ಮಾಡುತ್ತಿದ್ದಾರೆ.
ಲಾಕ್‌ಡೌನ್ ನಡುವೆ ಅಸಂಘಟಿತ ಕಾರ್ಮಿಕರಿಗೆ ನೆರವಾಗುತ್ತಿರುವ ಕಿಕ್ ಬಾಕ್ಸರ್..
ರಷ್ಯಾದಲ್ಲಿ ನಡೆದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪದಕ ಗೆದ್ದು ಕನ್ನಡ ಕಂಪನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಡಿದ್ದ ಕಿಕ್ ಬಾಕ್ಸರ್ ಶರಣಪ್ಪ ಲಾಕ್‌ಡೌನ್ ಆದ ಬಳಿಕ ಅಸಂಘಟಿತ ಕಾರ್ಮಿಕರು ಮತ್ತು ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.
ಲಾಕ್‌ಡೌನ್ ಜಾರಿ ಮಾಡಿದ ಬಳಿಕ ಅಸಂಘಟಿತ ಕೂಲಿ ಕಾರ್ಮಿಕರು ಆಹಾರವಿಲ್ಲದೆ ಪರಿತಪಿಸುತ್ತಿರುವ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನೋಡಿ ತೀವ್ರ ದುಃಖಿತರಾದ ಇವರು ಕೂಡಲೇ ಪೊಲೀಸರಿಂದ ತಮ್ಮ ವಾಹನಕ್ಕೆ ಪಾಸ್ ಪಡೆದು, ತಮ್ಮದೇ ಫಿಟ್‌ನೆಸ್ ಸೆಂಟರ್‌ನಲ್ಲಿ ಕಸರತ್ತು ಮಾಡಲು ಬರುತ್ತಿದ್ದ ಮೂರ್ನಾಲ್ಕು ಯುವಕರನ್ನು ಒಗ್ಗೂಡಿಸಿ ಸ್ವಂತ ದುಡ್ಡಿನಿಂದ ಊಟ ತಯಾರಿಸಿ ಹಂಚಲು ಪ್ರಾರಂಭಿಸಿದ್ದಾರೆ.
ಶರಣಪ್ಪ ಅವರ ಸೇವೆ ಗುರುತಿಸಿದ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರು ಊಟ ತಿಂಡಿ ಜತೆಗೆ ಪಡಿತರವನ್ನೂ ಹಂಚಲು ನೆರವು ನೀಡಿದ್ದಾರೆ. ಅದರಂತೆ ಶರಣಪ್ಪ ಮತ್ತವರ ತಂಡ ಬೊಮ್ಮನಹಳ್ಳಿ ಸುತ್ತಮುತ್ತ ಹಾಗೂ ಬನ್ನೇರುಘಟ್ಟ ರಸ್ತೆ ಸುತ್ತಮುತ್ತ ವಾಸಿಸುತ್ತಿರುವ ಕೂಲಿ ಕಾರ್ಮಿಕರಿಗೆ ನಿತ್ಯವೂ ತಿಂಡಿ, ಊಟದ ಜತೆಗೆ ಅಕ್ಕಿ-ಬೇಳೆ ಮತ್ತಿತರ ಪಡಿತರವನ್ನು ಹಂಚುತ್ತಿದ್ದಾರೆ.
TAGGED:
ಕಿಕ್ ಬಾಕ್ಸರ್ ಶರಣಪ್ಪ