ಕರ್ನಾಟಕ

karnataka

ETV Bharat / state

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್​​! - ಕಿಚ್ಚ ಸುದೀಪ್​​

ಆರ್ ಟಿ ನಗರದಲ್ಲಿರುವ, ಸಿಎಂ ಮನೆಗೆ ಭೇಟಿ ನೀಡಿದ ಸುದೀಪ್​​, ಅವರ ಜೊತೆ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಸೌಹಾರ್ದತೆಯ ಮಾತುಕತೆ ಎನ್ನಲಾಗಿದೆ.

ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್
ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್

By

Published : Aug 31, 2021, 4:17 PM IST

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿರುವ ನಟ ಕಿಚ್ಚ ಸುದೀಪ್​. ಸದ್ಯ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿರುವ ಕಿಚ್ಚ ಇಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಸಿಎಂ ಆಗುವುದಕ್ಕಿಂತ ಮುಂಚೇನು, ನಟ ಸುದೀಪ್ ಜೊತೆ ಒಳ್ಳೆ ಒಡನಾಟ ಹಾಗೂ ಸ್ನೇಹತ್ವವನ್ನ ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ. ಈ ಸ್ನೇಹ, ಸಂಬಂಧದಿಂದ, ಬೊಮ್ಮಾಯಿ, ಸುದೀಪ್ ಅವರನ್ನು ಭೇಟಿ ಮಾಡೋದಕ್ಕೆ ಆಹ್ವಾನ ಕೊಟ್ಟಿದ್ದರಂತೆ.

ಮತ್ತೊಂದು ಕಡೆ ಸುದೀಪ್ ಕೂಡ, ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿ ಆದಾಗಿನಿಂದ, ಅವ್ರಿಗೆ ಶುಭಾಶಯ ಹೇಳಲು ಆಗಿರಲಿಲ್ಲ. ಹೀಗಾಗಿ ಆರ್ ಟಿ ನಗರದಲ್ಲಿರುವ, ಸಿಎಂ ಮನೆಗೆ ಭೇಟಿ ನೀಡಿ, ಅವರ ಜೊತೆ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಸೌಹಾರ್ದ ಮಾತುಕತೆ ಎನ್ನಲಾಗಿದೆ.

ಇನ್ನು ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟು ಹಬ್ಬ ಕೂಡ ಇರುವ ಕಾರಣ, ಅಡ್ವಾನ್ಸ್ ಆಗಿ ರಾಜ್ಯದ ಮುಖ್ಯಮಂತ್ರಿಗಳು ಸುದೀಪ್​​​ಗೆ ಶುಭಾಶಯ ಹೇಳಿದ್ದಾರೆ ಎನ್ನಲಾಗಿದೆ. ಈ ವರ್ಷ ಕೊರೊನಾ ಇರುವ ಕಾರಣ, ಈ ವರ್ಷವು ಸುದೀಪ್ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದರೂ ಅಭಿಮಾನಿಗಳ, ಆರೋಗ್ಯ ದೃಷ್ಟಿಯಿಂದ ಸುದೀಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸದ್ಯ ಮಿನಿ ಬಿಗ್ ಬಾಸ್ ಶೋನಲ್ಲಿ ಬ್ಯುಸಿಯಾಗಿದ್ದಾರೆ ಸುದೀಪ್‌.

ಇದನ್ನೂ ಓದಿ : ರಾತ್ರಿ ವೇಳೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷತೆಗೆ ಆದ್ಯತೆ ನೀಡಿ: ಸಿಎಂ ಸಲಹೆ

ABOUT THE AUTHOR

...view details