ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ, ಡಿಕೆಶಿ ಸೇರಿ ಎಲ್ಲಾ ನಾಯಕರು ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ: ಖರ್ಗೆ - ರಾಜ್ಯಸಭಾ ಚುನಾವಣೆ ಆಯ್ಕೆ ವಿಚಾರದ ಬಗ್ಗೆ ಖರ್ಗೆ ಹೇಳಿಕೆ,

ಸಿದ್ದರಾಮಯ್ಯ, ಡಿಕೆಶಿ ಸೇರಿ ಎಲ್ಲಾ ನಾಯಕರು ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Kharge talk about Rajya Sabha election, Rajya Sabha election candidate selection matter, mallikarjun Kharge news, ರಾಜ್ಯಸಭಾ ಚುನಾವಣೆ ಆಯ್ಕೆ ವಿಚಾರ, ರಾಜ್ಯಸಭಾ ಚುನಾವಣೆ ಆಯ್ಕೆ ವಿಚಾರದ ಬಗ್ಗೆ ಖರ್ಗೆ ಹೇಳಿಕೆ, ರಾಜ್ಯಸಭಾ ಚುನಾವಣೆ ಆಯ್ಕೆ ವಿಚಾರ ಸುದ್ದಿ,
ಸಿದ್ದರಾಮಯ್ಯ, ಡಿಕೆಶಿ ಸೇರಿ ಎಲ್ಲಾ ನಾಯಕರು ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದ ಖರ್ಗೆ

By

Published : Jun 5, 2020, 5:40 PM IST

ಬೆಂಗಳೂರು: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ ಸೇರಿ ಎಲ್ಲಾ ನಾಯಕರು ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದ ಖರ್ಗೆ

ಸದಾಶಿವನಗರದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಸಂಬಂಧ ಪ್ರತಿಕ್ರಿಯಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಧನ್ಯವಾದ ತಿಳಿಸುತ್ತೇನೆ. ಪಾರ್ಲಿಮೆಂಟ್​ನಲ್ಲಿ ನನ್ನ ಸೇವೆ ಗುರುತಿಸಿ ನನ್ನನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂದರು.

ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ರಾಜ್ಯಸಭೆಗೆ ಹೋಗಿ ಕೆಲಸ ಮಾಡಲು ಇದೊಂದು ಒಳ್ಳೆಯ ಅವಕಾಶ. 47 ವರ್ಷಗಳ ಕಾಲ ಚುನಾವಣೆಯಲ್ಲಿ ಗೆದ್ದುಕೊಂಡು ಬರುತ್ತಿದ್ದೆ‌. ಆದ್ರೆ ಈ ಬಾರಿ ಬಿಜೆಪಿಯವರು, ಬಿಜೆಪಿ ಕೇಂದ್ರ ನಾಯಕರು ವಿಶೇಷ ಆಸಕ್ತಿ ವಹಿಸಿ ಸೋಲಿಸಿದ್ರು. ಅದು ಈಗ ಮುಗಿದ ಅಧ್ಯಾಯ ಎಂದರು.

ದೇವೇಗೌಡರ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಸ್ಪರ್ಧಿಸೋದು ಅವರ ಪಕ್ಷದ ವಿಚಾರ. ದೇವೇಗೌಡರಿಗೆ ಕಾಂಗ್ರೆಸ್ ಬೆಂಬಲಿಸುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

ABOUT THE AUTHOR

...view details