ಬೆಂಗಳೂರು: ಬಿಜೆಪಿಯವರು ಅಲ್ಪಸಂಖ್ಯಾತ, ದಲಿತರು ಹಾಗೂ ರೈತರನ್ನು ಸರ್ವನಾಶ ಮಾಡುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಸಾಮಾಜಿಕ ನ್ಯಾಯ ಬಿಜೆಪಿಯವರ ಪ್ರಣಾಳಿಕೆ ಮತ್ತು ನಡವಳಿಕೆಯಲ್ಲೂ ಇಲ್ಲ: ಖರ್ಗೆ - ಸಾಮಾಜಿಕ ನ್ಯಾಯ ಬಿಜೆಪಿಯಲ್ಲಿ ಇಲ್ಲ ಖರ್ಗೆ
ಬಿಜೆಪಿಯವರು ಎಂದಿಗೂ ದೇಶವನ್ನು ಅಭಿವೃದ್ಧಿ ಮಾಡಲ್ಲ. ನಾವು ದೇಶದಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಅವರು ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಇಲ್ಲವೆಂದು ಜರಿದಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಸಾಮಾಜಿಕ ನ್ಯಾಯ ಬಿಜೆಪಿ ಸರ್ಕಾರದಲ್ಲಿ, ಆರ್ಎಸ್ಎಸ್ ನೇತೃತ್ವದಲ್ಲಿ ಸಿಗುತ್ತೆ ಅನ್ನುವ ನಂಬಿಕೆ ನನಗಿಲ್ಲ. ಪ್ರಮಾಣವಚನ ಸ್ವೀಕರಿಸಿರುವ ಸಚಿವರ ಲಿಸ್ಟ್ ನೋಡಿದ್ರೆ ಅದು ಗೊತ್ತಾಗುತ್ತೆ. ಯಾವ್ಯಾವ ಭಾಗಕ್ಕೆ ಏನು ಸ್ಥಾನಮಾನ ಕೊಟ್ಟಿದ್ದಾರೆ ಅನ್ನೋದು ತಿಳಿಯುತ್ತೆ. ಸಾಮಾಜಿಕ ನ್ಯಾಯ ಬಿಜೆಪಿಯವರ ಮ್ಯಾನಿಫೆಸ್ಟೋ(ಪ್ರಣಾಳಿಕೆ) ಮತ್ತು ಅವರ ನಡವಳಿಕೆಯಲ್ಲೂ ಇಲ್ಲ. ಈ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಯವರು ಗ್ರೇಟ್ ಅಂತ ಸುಮ್ಮನೆ ಹೇಳ್ತಾರೆ. ಮೋದಿ ದೇಶಕ್ಕೆ ಏನು ಮಾಡಿದ್ದಾರೆ ತೋರಿಸಲಿ. ರೈತರು, ಬಡವರ ಬಗ್ಗೆ ನಾವು ಕಾಳಜಿ ಇಟ್ಟಕೊಂಡಿದ್ದೆವು. ಅಲ್ಲದೆ ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು, ನಾವು ದೇಶದ ಅಭಿವೃದ್ಧಿಯನ್ನ ಮಾಡಿದವರು. ಅವರು, ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡ್ತಾರೆ. ಮೊದಲ ಬಾರಿ ಮೋದಿ ತಲೆಬಾಗಿ ಸಂಸತ್ತಿಗೆ ಕಾಲಿಟ್ಟಿದ್ದರು. ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿ ಹೋಗಿದ್ದಾರೆ. ಆದ್ರೆ ಅವರು ಸಂದರ್ಭಕ್ಕೆ ತಕ್ಕಂತೆ ನಾಟಕವಾಡ್ತಾರೆ ಎಂದು ಪ್ರಧಾನಿ ಮತ್ತು ಬಿಜೆಪಿಯನ್ನು ಖರ್ಗೆ ಟೀಕಿಸಿದ್ರು.