ಬೆಂಗಳೂರು: ಈಶ್ವರಪ್ಪ ಅಲ್ಪ ಸಂಖ್ಯಾತರನ್ನು ಬಯ್ಯೋದೇ ದೇಶಭಕ್ತಿ ಅಂದುಕೊಂಡಿದ್ದಾರೆ. ಇದು ಬಹಳ ದಿನ ನಡೆಯೋದಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಅಭಿಪ್ರಾಯ ಪಟ್ಟಿದ್ದಾರೆ.
ಈಶ್ವರಪ್ಪ ಅಲ್ಪ ಸಂಖ್ಯಾತರನ್ನು ಬಯ್ಯೋದೇ ದೇಶಭಕ್ತಿ ಅಂದುಕೊಂಡಿದ್ದಾರೆ: ಖಾದರ್ - Khadar siddu react to eshwarappa state ment
ಕಾಂಗ್ರೆಸ್ ನಾಯಕರ ಬಗ್ಗೆ ಹಿಜಡಾ ಎಂಬ ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಈಶ್ವರಪ್ಪನವರಿಗೆ ಸಂಸ್ಕೃತಿಯಿಲ್ಲ. ಸಂಸ್ಕೃತಿಯಿಲ್ಲದಿರುವ ವ್ಯಕ್ತಿ ಸಾರ್ವಜನಿಕ ಬದುಕಿನಲ್ಲಿರಲು ನಾಲಾಯಕ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಖಾದರ್, ಇದಕ್ಕೆಲ್ಲ ಕಾಲವೇ ಉತ್ತರ ಕೊಡತ್ತೆ. ಸಚಿವ ಈಶ್ವರಪ್ಪ ಡಿಸಿಎಂ ಸ್ಥಾನ ಸಿಗತ್ತೆ, ಪವರ್ ಫುಲ್ ಸ್ಥಾನ ಸಿಗತ್ತೆ ಅನ್ನೋ ಉತ್ಸಾಹದಲ್ಲಿದ್ರು. ಆದರೆ ಅದ್ಯಾವುದೂ ಆಗಿಲ್ಲ. ಹೀಗಾಗಿ ಕೋಪವನ್ನು ಅವರ ಮೇಲೆ ತೋರಿಸುವುದಕ್ಕೆ ಈಶ್ವರಪ್ಪಗೆ ಆಗ್ತಿಲ್ಲ. ಹೀಗಾಗಿ ನಮ್ಮ ಸಮುದಾಯದ ಮೇಲೆ ಕೋಪವನ್ನು ತೋರಿಸ್ತಿದ್ದಾರೆ ಎಂದರು. ಹಿಜಡಾ ಅಂತ ವ್ಯಂಗ್ಯ ಮಾಡಿದ್ದಾರಲ್ಲ, ಹಿಜಡಾಗಳ ಶಕ್ತಿ ಏನು ಅನ್ನೋದನ್ನು ಹಿಜಡಾ ಸಂಘಟನೆಗಳೇ ಈಶ್ವರಪ್ಪಗೆ ತೋರಿಸಲಿ ಅಂತ ಕರೆ ನೀಡ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಕಿಡಿ : ಕಾಂಗ್ರೆಸ್ ನಾಯಕರ ಬಗ್ಗೆ ಹಿಜಡಾ ಎಂಬ ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಈಶ್ವರಪ್ಪನವರಿಗೆ ಸಂಸ್ಕೃತಿಯಿಲ್ಲ. ಸಂಸ್ಕೃತಿಯಿಲ್ಲದಿರುವ ವ್ಯಕ್ತಿ ಸಾರ್ವಜನಿಕ ಬದುಕಿನಲ್ಲಿರಲು ನಾಲಾಯಕ್. ಪಾರ್ಲಿಮೆಂಟರಿ ಭಾಷೆ ಬಳಸಬೇಕು. ಲಕ್ಷಾಂತರ ಜನ ನಮ್ಮನ್ನ ಆರಿಸಿಕಳಿಸಿದ್ದಾರೆ. ಇದನ್ನ ಗಮನದಲ್ಲಿಟ್ಟುಕೊಂಡು ನಾವು ಮಾತನಾಡಬೇಕು ಎಂದಿದ್ದಾರೆ.