ಬೆಂಗಳೂರು: ಸಮವಸ್ತ್ರದಲ್ಲಿ ವಿಧಾನಸಭೆಗೆ ಬಂದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ನಡೆಗೆ ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮವಸ್ತ್ರದಲ್ಲೇ ವಿಧಾನಸಭೆಗೆ ಭಾಸ್ಕರ್ ರಾವ್ ಎಂಟ್ರಿ: ಕೆರಳಿದ ಖಾದರ್ - ಬಾಸ್ಕರ್ ರಾವ್ ವಿರುದ್ಧ ಖಾದರ್ ಆಕ್ರೋಶ
ಸಮವಸ್ತ್ರದಲ್ಲಿ ವಿಧಾನಸಭೆಗೆ ಬಂದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ನಡೆಗೆ ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಸ್ಕರ್ ರಾವ್ ವಿರುದ್ಧ ಖಾದರ್ ಆಕ್ರೋಶ
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿಯಮ ಬಾಹಿರವಾಗಿ ವಿಧಾನಸಭೆ ಒಳಗೆ ಎಂಟ್ರಿ ಕೊಟ್ಟ ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ಕುರಿತು ಮಾತನಾಡಿ, ಅವರು ಯಾಕೆ ಈ ರೀತಿ ನಡೆದು ಕೊಂಡ್ರೋ ಗೊತ್ತಿಲ್ಲ. ಸಭಾಧ್ಯಕ್ಷರು ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ವಿಧಾನಸಭೆ ಗೌರವ ಕಾಪಾಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಗಮನ ಹರಿಸಬೇಕು. ನಾವು ಪ್ರತಿಪಕ್ಷವಾಗಿ ಈ ಆಗ್ರಹ ಮಾಡುತ್ತೇವೆ ಎಂದು ತಿಳಿಸಿದರು.