ಕರ್ನಾಟಕ

karnataka

ETV Bharat / state

ನನ್ನನ್ನು ಗೌರವಯುತವಾಗಿ ಪಕ್ಷದಿಂದ ತೆಗೆಯಿರಿ, ಇಲ್ಲವಾದರೆ ಕಾಂಗ್ರೆಸ್​ಗೆ ಹಾನಿಯಾಗುತ್ತೆ: ಕೆಜಿಎಫ್ ಬಾಬು ವಾರ್ನಿಂಗ್​ - ETV Bharath Kannada news

ಕಾಂಗ್ರೆಸ್ ಬ್ಯಾನರ್​ನಿಂದ ಗೆದ್ದು ಬರುವ ಅನಿವಾರ್ಯತೆ ನನಗಿಲ್ಲ - ನಾನು ರೆಬಲ್​ ಆದರೆ ಕಾಂಗ್ರೆಸ್​ಗೆ 10-15 ಸ್ಥಾನ ಹಿನ್ನಡೆ - ಸಲೀಂ ಅಹ್ಮದ್ ನನಗೆ ಗೌರವ ಕೊಟ್ಟಿಲ್ಲ - ಕೆಜಿಎಫ್ ಬಾಬು

kgf babu reaction about verbal skirmish at kpcc office
ಕೆಜಿಎಫ್ ಬಾಬು

By

Published : Jan 6, 2023, 9:12 PM IST

ನನ್ನನ್ನು ಗೌರವಯುತವಾಗಿ ಪಕ್ಷದಿಂದ ತೆಗೆಯಿರಿ ಇಲ್ಲವಾದರೆ ಕಾಂಗ್ರೆಸ್​ಗೆ ಹಾನಿಯಾಗುತ್ತೆ ಎಂದ ಕೆಜಿಎಫ್ ಬಾಬು

ಬೆಂಗಳೂರು:ನನಗೆ ಕಾಂಗ್ರೆಸ್ ಬ್ಯಾನರ್​ನಿಂದ ಗೆದ್ದು ಬರುವ ಅನಿವಾರ್ಯತೆ ಇಲ್ಲ. ಜನ ನನ್ನನ್ನು ಗೆಲ್ಲಿಸುತ್ತಾರೆ. ಪಕ್ಷದಿಂದ ನನ್ನನ್ನು ತೆಗೆದರೆ ಕಾಂಗ್ರೆಸ್​ಗೆ 10-15 ಸ್ಥಾನದಿಂದ ಹಿನ್ನಡೆ ಆಗುತ್ತದೆ. ಕಾಂಗ್ರೆಸ್​ನಿಂದ ತೆಗಿಯಿರಿ, ಆದರೆ ಗೌರವಯುತವಾಗಿ ತೆಗೆಯಿರಿ. ಇಲ್ಲವಾದರೆ ನಾನು ಏನು ಎಂಬುದನ್ನು ತೋರಿಸುತ್ತೇನೆ. ನನ್ನನ್ನು ಪಕ್ಷದಿಂದ ತೆಗೆದರೆ ಪಾರ್ಟಿಗೆ ಡ್ಯಾಮೇಜ್ ಆಗುತ್ತೆ. ಇಲ್ಲ ಎಂದರೆ ಮುಂದೆ ಕೆಜಿಎಫ್ ಬಾಬು ಏನು ಎಂಬುದನ್ನು ತೋರಿಸುತ್ತೇನೆ. ನಾನು ರೆಬೆಲ್ ಅಭ್ಯರ್ಥಿಯಾಗಿ ನಿಂತರೆ 10 ಸ್ಥಾನ ಗೆಲ್ಲಿಸಿ ಕೊಡುತ್ತೇನೆ ಎಂದು ಕೆಜಿಎಫ್ ಬಾಬು ಎಚ್ಚರಿಕೆ ನೀಡಿದರು.

ವಸಂತನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಲೀಂ ಅಹ್ಮದ್​ ವಿರುದ್ಧ ಕೆಂಡಾಮಂಡಲರಾದರು. ಕೆಪಿಸಿಸಿ ಕಚೇರಿಗೆ ನನ್ನನ್ನು ಕರೆದಿದ್ದರು. ರಾಮಲಿಂಗಾ ರೆಡ್ಡಿ, ಅಭಿಷೇಕ್ ದತ್ತ್ ಟೀಂ ಕರೆದಿದ್ದರು. ಅಲ್ಲಿ ಸಂದರ್ಶನ ಮುಗಿಸಿ ಹೊರ ಬಂದೆ. ಮಾಧ್ಯಮದವರಿಗೆ ಬೈಟ್ ಕೊಟ್ಟೆ. ನನ್ನ ಕಡೆಯಿಂದ ಯಾವುದೇ ತಪ್ಪು ಮಾತನಾಡಿಲ್ಲ. ಸಿದ್ದರಾಮಯ್ಯ, ಡಿಕೆಶಿ ರಾತ್ರಿ ಹಗಲು ಹೆಂಡತಿ ಮಕ್ಕಳು ಬಿಟ್ಟು ಕ್ಷೇತ್ರದಾದ್ಯಂತ ಓಡಾಡಿ ಕಷ್ಟ ಪಡುತ್ತಿದ್ದಾರೆ. ಆದರೆ, ಅವರಿಗೆ ಸಪೋರ್ಟ್ ಆಗಿ ನಿಲ್ಲದಿದ್ದರೆ ಕಾಂಗ್ರೆಸ್ 80 ಸ್ಥಾನ ಗೆಲ್ಲಲ್ಲ ಎಂದು ಹೇಳುತ್ತಿದ್ದಾಗ ಗಲಾಟೆಗೆ ಬಂದರು ಎಂದು ಕಿಡಿ ಕಾರಿದರು.

ಕ್ಷೇತ್ರಕ್ಕೆ 350 ಕೋಟಿ ರೂ. ಖರ್ಚು ಮಾಡಲು ಸಿದ್ಧ:ಮನೋಹರ್ ಆರ್.ವಿ.ದೇವರಾಜ್ ಪಟ್ಟ ಶಿಷ್ಯ. ಇಬ್ಬರು ಬಂದು ಗಲಾಟೆ ಮಾಡಿದರು. ಬೇರೆ ಯಾರೂ ಇಲ್ಲ. ಆರ್.ವಿ.ದೇವರಾಜ್​ಗೆ ಓಡಾಡುವುದಕ್ಕೆ ಆಗಲ್ಲ. ಕುಡಿಯುತ್ತಾ ಇರುತ್ತಾನೆ. ಅವನು ಸ್ಪರ್ಧಿಸಿದರೆ ಠೇವಣಿಯೂ ಬರುವುದಿಲ್ಲ. ನನ್ನಂತವನು ದೇಶದಲ್ಲೇ ಯಾರೂ ಸಿಗುವುದಿಲ್ಲ. ಒಂದು ಕ್ಷೇತ್ರಕ್ಕೆ 350 ಕೋಟಿ ರೂ. ಖರ್ಚು ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಸಲೀಂ ಅಹ್ಮದ್​​ರಿಂದ ಅಲ್ಲಿ ದುರ್ಬಳಕೆ ಆಗುತ್ತಿದೆ. ಈ ಪಕ್ಷಕ್ಕೆ ನಾನು ಕೋಟ್ಯಂತರ ರೂಪಾಯಿ ಕಳೆದುಕೊಂಡೆ. ನಾನು ಸಿದ್ದರಾಮಯ್ಯ, ಡಿಕೆಶಿಗೆ ಪ್ರಾಣ ಬೇಕಾದರೂ ಕೊಡುತ್ತೇನೆ. ಕೆಪಿಸಿಸಿಯಲ್ಲಿ ತಪ್ಪು ನಡೆಯುತ್ತಿದೆ. ಯುವಕರು, ಮಹಿಳೆಯರು, ಕಾರ್ಯಕರ್ತರು ಬಂದರೆ ಕೆಪಿಸಿಸಿಯಲ್ಲಿ ಮಾರ್ಯಾದೆ ಕೊಡಲ್ಲ. ನನಗೆ ಕೆಪಿಸಿಸಿ ಕಚೇರಿಗೆ ಬಿಡಬೇಡ ಅಂತ ಸಲೀಂ ಅಹ್ಮದ್​ ಹೇಳಿದ್ದಾರೆ‌. ಅವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಸಲೀಂ ಅಹ್ಮದ್​ ಕೈಯ್ಯಲ್ಲಿ ಏನಾಗುತ್ತದೆ. ಅವರಿಗೆ ನಾಲ್ಕು ಜನರ ಪರಿಚಯ ಇಲ್ಲ. ಅವರನ್ನು ತೆಗೆದು ಹಾಕಿ, ಆಗ ಸರಿಯಾಗುತ್ತದೆ. ನಾನು ಏನೂ ತಪ್ಪಾಗಿ ಮಾತನಾಡಿಲ್ಲ ಎಂದರು.

ಕೆಪಿಸಿಸಿಯಲ್ಲಿ ಮೇಂಟೇನ್ ಮಾಡುವ ಕೆಲವರು ಸರಿ ಇಲ್ಲ. ಸಲೀಂ ಅಹ್ಮದ್​ ಯಾರಿಗೂ ಗೌರವ ಕೊಡಲ್ಲ. ಅವರನ್ನು ಬದಲಾವಣೆ ಮಾಡಿದರೆ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಹೇಳಲು ಹೋದಾಗ ಈ ರೀತಿ ಮಾಡಿದ್ದಾರೆ. ಸಲೀಂ ಅಹ್ಮದ್​ ಮುಸ್ಲಿಂ ಅಲ್ಲ. ಅವರು ಬ್ಯಾರೀಸ್. ಅವರನ್ನು ನೋಡಿ ಅಲ್ಪಸಂಖ್ಯಾತರು ಓಟ್ ಹಾಕಲ್ಲ. ಸಲೀಂ ಅಹ್ಮದ್​ ಬರೇ ಆಕ್ಟಿಂಗ್ ಎಂದು ವಾಗ್ದಾಳಿ ನಡೆಸಿದರು.

ಡಿಕೆಶಿ ನಮಗೆ ವ್ಯಾಪಾರ ಗುರು, ನನ್ನ ದೇವರು:ನಾನು, ತಂದೆ, ತಾತ, ಮುತ್ತಾತ ಕಾಂಗ್ರೆಸ್ ಪಕ್ಷಕ್ಕೆ ಬ್ಲಡ್ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಪ್ರಾಣ ಕೊಡುವವನು. ಪಕ್ಷಕ್ಕೆ ಬೇಡ ಅಂದರೆ ನಾನೇ ಕೈ ಮುಗಿದು ನಿರ್ಗಮಿಸುತ್ತೇನೆ. ನಾನು ಅವರ ಸಾಲಗಾರ. ಮನೋಹರ್ ಅವರು ಸುರ್ಜೇವಾಲಗೆ ಪತ್ರ ಬರೆದಿದ್ದಾರೆ. ನನ್ನ ತಪ್ಪು ಇದ್ದರೆ ನನ್ನನ್ನು ಅಮಾನತು ಮಾಡಿ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಜಾತಿ ನೋಡಿ, ಹಿರಿತನ ನೋಡಿ ಟಿಕೆಟ್ ಕೊಟ್ಟರೆ ಈಗಲೂ 80 ಸೀಟ್ ಬರಲ್ಲ. ಗೆಲ್ಲುವಂಥ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ 150 ಸೀಟ್ ಬರುತ್ತೆ. ಇದನ್ನು ಹೇಳಿದರೆ ನನ್ನ ಮೇಲೆ ಮುಗಿಬಿದ್ದರು. ನಾನು ಸತ್ಯಾಂಶ ಹೇಳುತ್ತೇನೆ. ಅವರು ನನ್ನನ್ನು ತೆಗೆದು ಹಾಕುವುದಾದರೆ ಹಾಕಲಿ. ಪಕ್ಷದಿಂದ ತೆಗೆದರೆ ನನಗೆ ಬೇಸರ ಆಗುತ್ತದೆ. ಇಂದು ನನ್ನ ಬಳಿ ಏನಿದೆ, ಡಿಕೆಶಿ ಹಾಕಿರುವ ಬಿಕ್ಷೆ ಅದು ಎಂದು ಗುಣಗಾನ‌ ಮಾಡಿದ್ದಾರೆ.

ಕಾಂಗ್ರೆಸ್ ‌ಪಕ್ಷಕ್ಕೆ ನನ್ನಿಂದ ನೋವಾಗಿದ್ದರೆ ನಾನು ಕೈ ಮುಗಿದು ಕ್ಷಮೆ ಕೋರುತ್ತೇನೆ. ನನ್ನದೂ ಮತ್ತು ಡಿಕೆಶಿಗೆ ವ್ಯಾಪಾರದಲ್ಲಿ ಸಂಬಂಧ ಇದೆ. ಅವರು ನನಗೆ ವ್ಯಾಪಾರದಲ್ಲಿ ಗುರು. ಅವರು ನನಗೆ ರಾಜಕೀಯದಲ್ಲಿ ಗುರು ಅಲ್ಲ. ಅವರು ನನಗೆ ಬ್ಯುಸಿನೆಸ್ ಗುರು. ಅವರ ಹಾಕೋ ಬಿಕ್ಷೆ ತಿನ್ನುತ್ತಿದ್ದೇನೆ. ಅವರು ಹೇಳಿದರೆ ಪ್ರಾಣ ಕೊಡಲು ರೆಡಿ. ಡಿಕೆಶಿ ಇರುವ ತನಕ ನಾನು ಅಲ್ಲಿ ಗುಲಾಮನಾಗಿ ಇರುತ್ತೇನೆ ಎಂದರು.

ಸಿ.ಎಂ. ಇಬ್ರಾಹಿಂ ಮನೆಗೆ ಬಂದು ಪಕ್ಷಕ್ಕೆ ಬರುವಂತೆ ಹೇಳಿದ್ದರು. ನೀನು ಶಕ್ತಿ ಜೆಡಿಎಸ್​ಗೆ ಬಾ ಎಂದು ಕರೆದಿದ್ದಾರೆ. ಈವರೆಗೂ ನಾಲ್ಕು ತಿಂಗಳಿಂದ ಕರೆ ಮೇಲೆ ಕರೆ ಮಾಡುತ್ತಿದ್ದಾರೆ. ಆದರೆ ನಾನು ಫೋನ್ ಸ್ವೀಕರಿಸುತ್ತಿಲ್ಲ. ನಾನು ಹುಟ್ಟಿರೋದು ಸ್ಲಮ್​ನಲ್ಲಿ. ನನಗೆ ಇರೋದು ಸ್ಲಂ ಬುದ್ಧಿ ನಾನು ಸಾಯುವ ತನಕ ಹಾಗೇ ಇರುತ್ತೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಕೆಜಿಎಫ್ ಬಾಬು ವಿರುದ್ಧ ಕೈ ಕಾರ್ಯಕರ್ತರು‌ ಗರಂ: ಕೆಪಿಸಿಸಿ ಕಚೇರಿಯಲ್ಲಿ ಮಾತಿನ ಚಕಮಕಿ

ABOUT THE AUTHOR

...view details