ಕರ್ನಾಟಕ

karnataka

ETV Bharat / state

ಡ್ರಿಂಕ್​ ಆ್ಯಂಡ್​ ಡ್ರೈವ್​.. ಬೆಂಗಳೂರಲ್ಲಿ ಪ್ರಾಣಾಪಾಯದಿಂದ ಪಾರಾದ ಕೇರಳ ಯುವತಿ - ಡ್ರಿಂಕ್​ ಆ್ಯಂಡ್​ ಡ್ರೈವ್

ಕಾಮಗಾರಿ ನಡೆಯುತ್ತಿದ್ದ ಮೇಲ್ಸೇತುವೆ ಮೇಲೆ ಯುವತಿಯೊಬ್ಬರು ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Kerala young woman car drive fast  car drive fast on construction bridge  construction bridge in Bengaluru  ಮದ್ಯದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿದ ಯುವತಿ  ಪ್ರಾಣಾಪಾಯದಿಂದ ಪಾರಾದ ಕೇರಳ ಗರ್ಲ್  ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಘಟನೆ  ಡ್ರಿಂಕ್ ಆ್ಯಂಡ್ ಡ್ರೈವ್ ಆರೋಪದಡಿ ಪ್ರಕರಣ
ಮದ್ಯದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿದ ಯುವತಿ

By

Published : Sep 12, 2022, 12:33 PM IST

ಬೆಂಗಳೂರು : ಮದ್ಯದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿದ ಯುವತಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತಡರಾತ್ರಿ ಓಕಳಿಪುರಂನ ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ನಡೆದಿದೆ.

ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದನ್ನು ಅರಿಯದೇ ಯುವತಿ ಕಾರು ಚಲಾಯಿಸಿಕೊಂಡು ವೇಗವಾಗಿ ಬಂದಿದ್ದಾರೆ. ಸೇತವೆ ಅರ್ಧ ಕಡಿತಗೊಂಡಿರುವುದನ್ನು ಯುವತಿ ಗಮನಿಸದೆ ಮುಂದೆ ನುಗ್ಗಿದ್ದಾರೆ. ಈ ವೇಳೆ ಕಾರು ಕೆಳಗೆ ಬಿಳದೇ ಮೇಲೆಯೇ ನಿಂತುಕೊಂಡಿದೆ. ಹೀಗಾಗಿ ಯುವತಿ ಬದುಕುಳಿದಿದ್ದಾರೆ.

ಮದ್ಯದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿದ ಯುವತಿ

ಕಾಮಗಾರಿ ನಡೆಯುತ್ತಿದ್ದರೂ ಮೇಲ್ಸೇತುವೆ ಪ್ರವೇಶಿಸುವ ಜಾಗದಲ್ಲಿ ಯಾವುದೇ ಬ್ಯಾರಿಕೇಡ್ ಹಾಕಿರಲಿಲ್ಲ. ಪರಿಣಾಮ ಮದ್ಯದ ಅಮಲಿನಲ್ಲಿದ್ದ ಕೇರಳ ಮೂಲದ ಈ ಯುವತಿ ತಡರಾತ್ರಿ ಓಕಳಿಪುರಂನ ನಿರ್ಮಾಣ ಹಂತದ ಸೇತುವೆಯ ಮೇಲೆ ಕಾರು ಚಲಾಯಿಸಿದ್ದಾರೆ. ಈ ವೇಳೆ ಕಾರು ಕೆಳಗೆ ಬಿಳದೇ ಸೇತುವೆಯ ಮೇಲೆಯೇ ನಿಂತುಕೊಂಡಿದೆ.

ಮದ್ಯದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿದ ಯುವತಿ

ಒಂದು ವೇಳೆ ಕಾರು ಕೆಳ ಮುಖ ಮಾಡಿ ಬಿದ್ದಿದ್ದರೆ ದೊಡ್ಡ ದುರಂತ ಸಂಭವಿಸಿತ್ತಿತ್ತು. ಸಂಭವಿಸಬೇಕಾದ ದುರ್ಘಟನೆಯಿಂದ ಬಚಾವಾದ ಯುವತಿಯ ವಿರುದ್ಧ ಚಿಕ್ಕಪೇಟೆ ಸಂಚಾರ ಪೊಲೀಸ್​ ಠಾಣೆಯಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ:ಉದ್ಯಮಿ ಮಿಸ್ತ್ರಿ ಕಾರು ಅಪಘಾತಕ್ಕೂ ಕೆಲ ನಿಮಿಷಗಳ ಹಿಂದಿನ ಸಿಸಿಟಿವಿ ವಿಡಿಯೋ

ABOUT THE AUTHOR

...view details