ಕರ್ನಾಟಕ

karnataka

ETV Bharat / state

ದೇವರ ನಾಡು ಈಗ ವೆಡ್ಡಿಂಗ್ ಡೆಸ್ಟಿನೇಷನ್, ಹನಿಮೂನರ್ಸ್​ ಹೆವೆನ್: ಕನ್ನಡಿಗರನ್ನು ಆಹ್ವಾನಿಸಿದ ಕೇರಳ..! - kerala tourism department

ಕೇರಳ, ದೇಶದ ಮುಂಚೂಣಿ ವೆಡ್ಡಿಂಗ್ ಡೆಸ್ಟಿನೇಷನ್ - ಹನಿಮೂನರ್​ಗಳ ಸ್ವರ್ಗವಾಗಿಸಲು ಕೇರಳದ ಪ್ರವಾಸೋಧ್ಯಮ ಇಲಾಖೆ ಸಜ್ಜು - ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಯೋಜನೆ.

kerala-tourism-partnership-meet
ದೇವರ ನಾಡೀಗ ವೆಡ್ಡಿಂಗ್ ಡೆಸ್ಟಿನೇಷನ್, ಹನಿಮೂನರ್ಸ್​ ಹೆವೆನ್: ಕನ್ನಡಿಗರನ್ನು ಆಹ್ವಾನಿಸಿದ ಕೇರಳ..!

By

Published : Mar 2, 2023, 9:29 PM IST

ಬೆಂಗಳೂರು: ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿರುವ ದೇವರನಾಡು ಕೇರಳವನ್ನು ದೇಶದ ಮುಂಚೂಣಿಯ ವೆಡ್ಡಿಂಗ್ ಡೆಸ್ಟಿನೇಷನ್ ಆಗಿ ರೂಪುಗೊಳಿಸಲಾಗುತ್ತಿದ್ದು, ಹನಿಮೂನರ್‌ಗಳ ಸ್ವರ್ಗವಾಗಿಸಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ ಮೊಹಮದ್ ರಿಯಾಸ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅದು ತಾಳೆಮರಗಳ ಹಿಂದಿರುವ ಹಿನ್ನೀರಿನ ಪ್ರಶಾಂತ ವಾತಾವರಣವಿರಲಿ, ಆಕರ್ಷಕ ಸಮುದ್ರ ತೀರಗಳಿರಲಿ ಅಥವಾ ವಿಸ್ತಾರವಾದ ಚಹಾ ತೋಟಗಳನ್ನು ಒಳಗೊಂಡ ಗಿರಿಧಾಮಗಳಿರಲಿ ಈ ರಾಜ್ಯವು ಜೀವನದ ಹೊಸ ಪ್ರಾರಂಭಕ್ಕೆ ಅಣಿಯಾಗಲು ಅತ್ಯುತ್ತಮ ತಾಣವಾಗಿದೆ ಹಾಗಾಗೀ ಕೇರಳವನ್ನು ಜಾಗತಿಕ ವಿವಾಹದ ತಾಣವನ್ನಾಗಿಸಲು ಮತ್ತು ಹನಿಮೂನರ್‌ಗಳ ಸ್ವರ್ಗವಾಗಿಸಲು ಸರಣಿ ಮಾರ್ಕೆಟಿಂಗ್ ಚಟುವಟಿಕೆಗಳನ್ನು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ದೇವರ ನಾಡೀಗ ವೆಡ್ಡಿಂಗ್ ಡೆಸ್ಟಿನೇಷನ್, ಹನಿಮೂನರ್ಸ್​ ಹೆವೆನ್: ಕನ್ನಡಿಗರನ್ನು ಆಹ್ವಾನಿಸಿದ ಕೇರಳ..!

ಕೇರಳಕ್ಕೆ ಆದರ್ಶ ವಿವಾಹದ ತಾಣವಾಗಿ ವಿಕಾಸಗೊಳ್ಳುವ ಅಪಾರ ಸಾಮರ್ಥ್ಯವಿರುವ ಕಾರಣ ನಾವು ಈ ಆಲೋಚನೆ ಮಾಡಿದ್ದೇವೆ. ಅಲ್ಲದೆ ನಮ್ಮ ಪ್ರವಾಸೋದ್ಯಮದಲ್ಲಿ ಅದು ಪ್ರಮುಖ ವಲಯವಾಗಲಿದೆ ಎಂದು ಪ್ರಾಜೆಕ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಕುರಿತು ಕೇರಳದ ಸಚಿವರು ವಿವರ ನೀಡಿದರು. ಸರಿಸಾಟಿ ಇರದ ತನ್ನ ನೈಸರ್ಗಿಕ ಸೌಂದರ್ಯ, ಆಕರ್ಷಕ ತಾಣಗಳು, ಅತ್ಯುತ್ತಮ ವಸತಿ ಮತ್ತು ಬ್ಯಾಂಕ್ವೆಟ್ ಸೌಲಭ್ಯ ಹಾಗೂ ಕನೆಕ್ಟಿವಿಟಿಯಿಂದ ಕೇರಳ ಅತ್ಯುತ್ತಮ ವಿವಾಹದ ತಾಣವಾಗುವತ್ತ ದಾಪುಗಾಲು ಹಾಕುತ್ತಿದೆ ಎಂದರು.

ಇದಕ್ಕೆ ಸಾಕ್ಷಿಯಂತೆ ಹೆಚ್ಚಿನ ಸಂಖ್ಯೆಯ ಡೆಸ್ಟಿನೇಷನ್ ವೆಡ್ಡಿಂಗ್‌ ಕಾರ್ಯಕ್ರಮಗಳು ಕೇರಳದಲ್ಲಿ ಆಯೋಜನೆಯಾಗುತ್ತಿವೆ. ಕೇವಲ ಸಮುದ್ರತೀರಗಳು, ಹಿನ್ನೀರು ಮತ್ತು ಗಿರಿಧಾಮಗಳಿಗೆ ಸೀಮಿತವಾಗಿರದೇ, ನಾವು ಈಗ ಇಡೀ ಕೇರಳವನ್ನು ಪರಸ್ಪರ ಸಂಪರ್ಕಿತ ಪ್ರವಾಸೋದ್ಯಮ ಸ್ವರ್ಗವಾಗಿಸಲು ಬಯಸಿದ್ದೇವೆ ಆ ನಿಟ್ಟಿನಲ್ಲಿಯೇ ನಮ್ಮ ಪ್ರವಾಸೋದ್ಯಮದ ಚಟುವಟಿಕೆಗಳನ್ನು ಆಯೋಜನೆ ಮಾಡುತ್ತಿದ್ದೇವೆ,

ನಮ್ಮ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಶಕರಿಗೆ ಅಸಂಖ್ಯಾತ ಆಯ್ಕೆಗಳು ಮತ್ತು ವಿಸ್ತಾರ ಅನುಭವಗಳು ದೊರೆಯಬೇಕು ಎನ್ನುವುದು ನಮ್ಮ ಅಪೇಕ್ಷೆ ಅದಕ್ಕೆ ತಕ್ಕಂತೆ ಎಲ್ಲ ವ್ಯವಸ್ಥೆ ಮಾಡುತ್ತಿದ್ದೇವೆ. ದೋಣಿಮನೆ ಅಥವಾ ಕಾರಾವಾನ್ ವಾಸವಾಗಿರಲಿ, ಪರಿಸರಿಕ ಜವಾಬ್ದಾರಿಯುತ ಸಾಹಸ ಚಟುವಟಿಕೆಗಳಾಗಲಿ ಅಥವಾ ಪರಂಪರೆ ಹಾಗೂ ಸಾಂಸ್ಕೃತಿಕ ಕೇಂದ್ರಗಳ ಭೇಟಿಯಾಗಿರಲಿ ಅದನ್ನು ಸಮಗ್ರ ಅನುಭವವಾಗಿಸುತ್ತವೆ ಎಂದರು.

ವೆಡ್ಡಿಂಗ್ ಡೆಸ್ಟಿನೇಷನ್ ಟೂರಿಸಂ ಕಾನ್ಸಪ್ಟ್: ನಂತರ ಮಾತನಾಡಿದ ಕೇರಳ ಪ್ರವಾಸೋದ್ಯಮದ ಮಾಹಿತಿ ಅಧಿಕಾರಿ ಸಂಜೀವ್‌, ಕೇರಳದ ಹೊಸ ಯೋಜನೆಯಾದ ಕಾರವಾನ್ ಟೂರಿಸಂನ “ಕಾರವಾನ್ ಕೇರಳ ಪರಿಕಲ್ಪನೆ ಕುರಿತು ಪ್ರಸ್ತಾಪಿಸಿದರು. ಕಾರವಾನ್ ಕೇರಳ ಪ್ರದರ್ಶಿಸಲು ಮತ್ತು ಅದರ ಪ್ರಮುಖ ಸಂಪತ್ತಾದ ಸಮುದ್ರತೀರಗಳು, ಗಿರಿಧಾಮಗಳು, ದೋಣಿಮನೆಗಳು ಮತ್ತು ಹಿನ್ನೀರಿನ ವಲಯವು ಸಂದರ್ಶಕರ ಅನುಭವದ ಸಂಪೂರ್ಣತೆಯನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡುವ ವಿಸ್ತಾರ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ವೆಡ್ಡಿಂಗ್ ಡೆಸ್ಟಿನೇಷನ್ ಟೂರಿಸಂ ಕಾನ್ಸಪ್ಟ್ ಕುರಿತು ಮಾಹಿತಿ ಹಂಚಿಕೊಂಡರು.

ಪರಿಸರಕ್ಕೆ ಪೂರಕ ಮತ್ತು ಸುಸ್ಥಿರತೆಗೆ ಬದ್ಧವಾಗಿವೆ:ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ಹಲವು ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಆದರೆ ನಮ್ಮ ಹೊಸ ಯೋಜನೆಗಳು ಪರಿಸರಕ್ಕೆ ಪೂರಕ ಮತ್ತು ಸುಸ್ಥಿರತೆಗೆ ಬದ್ಧವಾಗಿವೆ. ಈ ವಿಚಾರದಲ್ಲಿ ಕೇರಳ ಸರ್ಕಾರ ರಾಜಿಯಾಗಲ್ಲ ಎಂದರು. ಕೋವಿಡ್​ನಿಂದ ಕುಂಠಿತಗೊಂಡಿದ್ದ ನಮ್ಮ ಪ್ರವಾಸೋದ್ಯಮ ಈಗ ಬದಲಾಗಿ ಮತ್ತೆ ಗಳಿಕೆಯತ್ತ ಸಾಗಿದೆ, ಕೇರಳದ ದೋಣಿಮನೆಗಳು, ಕಾರವಾನ್ ವಾಸಗಳು, ಜಂಗಲ್ ಲಾಡ್ಜ್​ಗಳು, ಪ್ಲಾಂಟೇಷನ್ ಭೇಟಿಗಳು, ಹೋಮ್‌ಸ್ಟೇ, ಆಯುರ್ವೇದ-ಆಧರಿತ ಸ್ವಾಸ್ಥ್ಯ ಪರಿಹಾರಗಳು, ಹಳ್ಳಿ ಪ್ರದೇಶದ ನಡೆದಾಟ ಮತ್ತು ಬೆಟ್ಟಗಳ ಚಾರಣದ ಸಾಹಸ ಚಟುವಟಿಕೆಗಳು ಸಂದರ್ಶಕರಿಗೆ ವಿಶಿಷ್ಟ ಅನುಭವ ನೀಡುತ್ತವೆ ಹಾಗಾಗಿ ದೇವರನಾಡಿನ ಪ್ರವಾಸಿ ತಾಣಗಳಿಗೆ ಕರ್ನಾಟಕದ ಜನರು ಆಗಮಿಸಬೇಕು ಎಂದು ಆಹ್ವಾನ ನೀಡಿದರು.

ಈ ವೇಳೆ ಕೇರಳ ಸಂಸ್ಕೃತಿ ಪ್ರತಿಬಿಂಬಿಸುವ ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಲಾಯಿತು. ದೇವರನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಲಾಯಿತು.

ಇದನ್ನೂ ಓದಿ:ಹಾಸ್ಯನಟ ಸಾಧುಕೋಕಿಲಗೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಸ್ಥಾನ

ABOUT THE AUTHOR

...view details