ಕರ್ನಾಟಕ

karnataka

ETV Bharat / state

ಕರ್ನಾಟಕ-ಕಾಸರಗೋಡು ಗಡಿ ನಿರ್ಬಂಧ ತೆರವುಗೊಳಿಸಲು ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ - ಕೇರಳ ಹೈಕೋರ್ಟ್

ಕಾಸರಗೋಡು ಮತ್ತು ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಧಿಸಿರುವ ಸಂಚಾರ ನಿರ್ಬಂಧವನ್ನು ತೆರವುಗೊಳಿಸಲು ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೇರಳ ಹೈಕೋರ್ಟ್‌ಗೆ ಅಲ್ಲಿನ ವಕೀಲರ ಸಂಘವು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿತ್ತು.

kerala
kerala

By

Published : Apr 2, 2020, 11:41 AM IST

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರ ಕಾಸರಗೋಡು ಸೇರಿದಂತೆ ಕೇರಳ ಗಡಿ ಭಾಗದ ರಸ್ತೆಗಳ ಸಂಚಾರಕ್ಕೆ ವಿಧಿಸಿರುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಕೂಡಲೇ ತೆರವುಗೊಳಿಸಬೇಕು ಎಂದು ಕೇರಳ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಕೇರಳದ ಕಾಸರಗೋಡು ಮತ್ತು ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಧಿಸಿರುವ ಸಂಚಾರ ನಿರ್ಬಂಧವನ್ನು ತೆರವುಗೊಳಿಸಲು ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೇರಳ ಹೈಕೋರ್ಟ್‌ಗೆ ಅಲ್ಲಿನ ವಕೀಲರ ಸಂಘವು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿತ್ತು.

ಮಂಗಳವಾರ ಮತ್ತು ಬುಧವಾರ ಕೇರಳ ಸರ್ಕಾರದ ಅಡ್ವೋಕೇಟ್ ಜನರಲ್ ಮತ್ತು ಕರ್ನಾಟಕ ರಾಜ್ಯ ಅಡ್ವೋಕೇಟ್ ಜನರಲ್ ಅವರ ವಾದ ಪ್ರತಿವಾದವನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ಆಲಿಸಿತ್ತು. ಬುಧವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಷಾಜಿ ಪಿ.ಚಳೈ ಅವರಿದ್ದ ಪೀಠ ನಿರ್ಬಂಧ ತೆರವು ಮಾಡುವಂತೆ ಕೇಂದ್ರಕ್ಕೆ ಮಧ್ಯಂತರ ಆದೇಶ ನೀಡಿದೆ.

ಕೇರಳ-ಕರ್ನಾಟಕ ಗಡಿಭಾಗದಲ್ಲಿ ಮುಚ್ಚಿರುವ ರಸ್ತೆಗಳನ್ನು ತೆರೆಯದೇ ಹೋದರೆ ಕಾಸರಗೋಡಿನಲ್ಲಿ ಕೊರೊನಾ ವೈರಸ್ ಸೋಂಕಿನಿಂದ ನರಳುತ್ತಿರುವ ಕೇರಳದ ಪ್ರಜೆಗಳು ಚಿಕಿತ್ಸೆ ಲಭ್ಯವಾಗದೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಮಂಗಳೂರು ಹಾಗು ಕಾಸರಗೋಡನ್ನು ಸಂಪರ್ಕಿಸುವ ರಸ್ತೆ ರಾಜ್ಯ ಹೆದ್ದಾರಿ ಅಲ್ಲ. ಬದಲಿಗೆ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದೆ. ಆ ರಸ್ತೆಯಲ್ಲಿ ವಿಧಿಸಲಾಗಿರುವ ಸಂಚಾರ ನಿರ್ಬಂಧವನ್ನು ವೈದ್ಯಕೀಯ ತುರ್ತು ಸೇವೆಗಳಿಗಾಗಿ ಕೇಂದ್ರ ಸರ್ಕಾರವು ತಕ್ಷಣವೇ ತೆರವುಗೊಳಿಸಬೇಕು ಮತ್ತು ತಡೆ ರಹಿತ ಸುಗಮ ಸಂಚಾರವನ್ನು ಕೇಂದ್ರ ಸರ್ಕಾರ ಖಾತರಿಪಡಿಸಬೇಕು ಎಂದು ಕೋರ್ಟ್​ ನಿರ್ದೇಶಿಸಿದೆ.

ಕರ್ನಾಟಕ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ಅವರು ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಂಡಿಸಿ, ಕಾಸರಗೋಡಿನಲ್ಲಿ 106 ಕೊರೋನಾ ಸೋಂಕಿತರಿದ್ದಾರೆ. ಮಂಗಳೂರಿನಲ್ಲಿ ಕೇವಲ 9 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಹೆದ್ದಾರಿಯನ್ನು ತೆರೆದರೆ ಮಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಕೇರಳ-ಕರ್ನಾಟಕ ನಡುವೆ ರಸ್ತೆ ಸಂಚಾರಕ್ಕೆ ಹೇರಲಾಗಿರುವ ನಿರ್ಬಂಧವನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ABOUT THE AUTHOR

...view details