ಬೆಂಗಳೂರು: ಕೇಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣಲ್ಲಿ ಜೀವ ಬೆದರಿಕೆ ಹಾಕಿದ ಆರೋಪಿ ವಿಜೇಶ್ ಪಿಳ್ಳೈ ವಿರುದ್ಧದ ತನಿಖೆಗೆ ಅನುಮತಿ ಕೋರಿ ಪೊಲೀಸರು ಸಲ್ಲಿಸಿರುವ ಮನವಿಯನ್ನು ಹೊಸದಾಗಿ ವಿಚಾರಣೆ ನಡೆಸಿ ಆದೇಶಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸ್ವಪ್ನ ಸುರೇಶ್ ಎಂಬುವರು ನೀಡಿರುವ ದೂರಿಗೆ ಸಂಬಂಧಿಸಿದಂತೆ ತನ್ನ ವಿರುದ್ಧದ ತನಿಖೆಗೆ ಅನುಮತಿ ನೀಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಕೇರಳದ ಕಣ್ಣೂರಿನ ವಿಜೇಶ್ ಪಿಳೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ನೀಡಿದ್ದ ಆದೇಶ ರದ್ದು ಪಡಿಸಿದೆ.
ಅಲ್ಲದೇ, ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಿಂದಿರುಗಿಸಿದ್ದು, ಹೊಸದಾಗಿ ವಿಚಾರಣೆ ನಡೆಸಿ ಆದೇಶ ನೀಡುಬೇಕು ಎಂದು ಸೂಚನೆ ನೀಡಿದೆ. ಈ ರೀತಿಯ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಜತೆಗೆ, ಜೀವ ಬೆದರಿಕೆ(ಐಪಿಸಿ 506)ರ ಆರೋಪ ಸಂಬಂಧ ಪ್ರಾಥಮಿಕ ಕಾರಣವನ್ನು ದಾಖಲಿಸಿಕೊಳ್ಳದೇ, ಅಸಂಜ್ಞೆಯ ಪ್ರಕರಣ ಕುರಿತು ಎಫ್‌ಐಆರ್ ದಾಖಲಿಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ ತನಿಖೆಗೆ ಅನುಮತಿ ನೀಡಿರುವ ಪ್ರಕ್ರಿಯೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಪ್ಪಾಗಿ ಆದೇಶಿಸಿದೆ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರಾದ ವಿಜೇಶ್ ಪಿಳೈಯವರು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ 2023ರ ಮಾರ್ಚ ತಿಂಗಳಲ್ಲಿ ತನ್ನನ್ನು ಭೇಟಿಯಾಗಿದ್ದು, ಕೇರಳದ ನಮ್ಮ ಪಕ್ಷ್ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು ಕಳುಹಿಸಿರುವುದಾಗಿ ತಿಳಿಸಿದ್ದರು. ಅಲ್ಲದೇ, ಕೇರಳ ಮುಖ್ಯಮಂತ್ರಿ ಮತ್ತು ಕುಟುಂಬಸ್ಥರು ಭಾಗಿಯಾಗಿರುವ ಪ್ರಕರಣ ಇತ್ಯರ್ಥಪಡಿಸಲು 30 ಕೋಟಿ ನೀಡುವುದಾಗಿ ತಿಳಿಸಿ 1 ವಾರದಲ್ಲಿ ಬೆಂಗಳೂರು ಬಿಟ್ಟು ಹೋಗುವಂತೆ ಸೂಚನೆ ನೀಡಿದ್ದರು.
ಇಲ್ಲವಾದಲ್ಲಿ ಸುಳ್ಳು ಪ್ರಕರಣ ದಾಖಲಿಸುವುದು ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರು ಕೆ.ಆರ್.ಪುರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಸಂಬಂಧದ ಪೊಲೀಸರು ತನಿಖೆಗೆ ಅನುಮತಿ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಆಲಿಸಿದ್ದ ನ್ಯಾಯಾಲಯ ತನಿಖೆಗೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ವಿಜೇಶ್ ಪಿಳ್ಳೈ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಾರ್ಗಸೂಚಿಗಳು:ಹೈಕೋರ್ಟ್ ಹಲವು ವರ್ಷಗಳಿಂದ ಪದೇ ಪದೇ ನಿರ್ದೇಶನ ನೀಡುತ್ತಿದ್ದರೂ, ಪ್ರಾರ್ಥಮಿಕ ಕಾರಣವನ್ನು ಉಲ್ಲೇಖಿಸಿದೆ ಪ್ರಕರಣಗಳಲ್ಲಿ ತನಿಖೆಗೆ ಅನುಮತಿ ನೀಡುವುದು ಇಲ್ಲವೇ ತಿರಸ್ಕರಿಸಿವ ಕಾರ್ಯವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಮಾಡುತ್ತಿವೆ. ಈ ಧೋರಣೆಯಿಂದ ಹೈಕೋರ್ಟ್‌ನಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಪೀಠ ತಿಳಿಸಿದೆ.
ಕ್ರಿಮಿನಲ್ ಜೀವ ಬೆದರಿಕೆಯಂತಹ ಪ್ರಕರಣಗಳು ಅಸಂಜ್ಞೆಯ(ನಾನ್ ಕಾಗ್ನಿಜಬಲ್) ಅಡಿ ಬರಲಿದ್ದು, ಈ ಸಂಬಂಧ ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಪ್ರಾಥಮಿಕ ಕಾರಣ ನೀಡದಿದ್ದಲ್ಲಿ ಸಂತ್ರಸ್ಥರಿಗೆ ನ್ಯಾಯ ಸಿಗುವುದಕ್ಕೆ ಅವಕಾಶವಿರುವುದಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟು ಮಾರ್ಗ ಸೂಚಿಗಳನ್ನು ನೀಡಿದೆ.
ಎಫ್‌ಐ ದಾಖಲಿಸುವುದು ಮತ್ತು ತನಿಖೆಗೆ ಅನುಮತಿ ಕೋರಿ ಸಲ್ಲಿಕೆಯಾಗುವ ಪ್ರಕರಣಗಳಲ್ಲಿ ಅನುಮತಿ ನೀಡಲಾಗಿದೆ, ಪರಿಶೀಲಿಸಲಾಗಿದೆ, ಅನುಮತಿಸಲಾಗಿದೆ ಎಂಬುದಾಗಿ ಒಂದು ಸಾಲಿನಲ್ಲಿ ಆದೇಶಿಸುವುದನ್ನು ನಿಲ್ಲಿಸಬೇಕು. ಅಲ್ಲದೆ, ಮನವಿ ತನಿಖೆಗೆ ಅನುಮತಿ ನೀಡುವುದು ಅಥಾವ ತಿರಸ್ಕರಿಸಬೇಕೇ ಎಂಬುದರ ಕುರಿತು ಸೂಕ್ತವೇ ಎಂಬುದನ್ನು ತಿಳಿಸಬೇಕು.
ಜತೆಗೆ, ಮನವಿ ಸಲ್ಲಿಸಿರುವವರು ಪೊಲೀಸರೇ ಅಥಾವ ಮಾಹಿತಿದಾರರೇ ಎಂಬುದುನ್ನು ತಿಳಿಸಬೇಕು. ತನಿಖೆಗೆ ಸಲ್ಲಿಸುವ ಮನವಿಯೊಂದಿಗೆ ದೂರು ನೀಡಿರುವ ಪ್ರತಿ ಲಗತ್ತಿಸದಿದ್ದಲ್ಲಿ ಯಾವುದೇ ಆದೇಶ ನೀಡಬಾರದು. ಈ ನಿಯಮಗಳನ್ನು ಪಾಲಿಸಿದ್ದಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಕೆಇಆರ್‌ಸಿ ಮತ್ತು ಎಸ್‌ಎಲ್‌ಡಿಸಿಗಳಿಗೆ ಅಂತಾರಾಜ್ಯ ವಿದ್ಯುತ್ ಪ್ರಸರಣ ನಿಯಂತ್ರಣ ಅಧಿಕಾರವಿಲ್ಲ: ಹೈಕೋರ್ಟ್