ಬೆಂಗಳೂರು:ಇಡೀ ರಾಜ್ಯದ ಜನರು ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಸ್ಫೂರ್ತಿ ಎಂಬಂತೆ ಮೈಸೂರಿನಲ್ಲಿ ನಡೆಯುವಂತೆಯೇ ಇತ್ತ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ದಸರಾ ಹಬ್ಬ ಆಚರಿಸಲಾಗುತ್ತಿದೆ.
ಅಕ್ಟೋಬರ್ 01ರಿಂದ 03, 2019ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 8.30ರವರೆಗೆ ದಸರಾ ಉತ್ಸವ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ದಸರಾವನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿರುವ ಕೆಐಎಎಲ್ ನಾಳೆಯಿಂದ 5ನೇ ಆವೃತ್ತಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಳೆಯಿಂದ ಅದ್ದೂರಿ ದಸರಾ ಉತ್ಸವ.. - ಬೃಹತ್ ಆನೆಯ ಬೊಂಬೆ
ಇಡೀ ರಾಜ್ಯದ ಜನರು ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಸ್ಫೂರ್ತಿ ಎಂಬಂತೆ ಮೈಸೂರಿನಲ್ಲಿ ನಡೆಯುವಂತೆಯೇ ಇತ್ತ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ.
ಮೂರು ದಿನಗಳ ಈ ಸಂಭ್ರಮ ಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ನಡೆಯಲಿದ್ದು, ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣಕ್ಕೆ ಆಗಮಿಸುವ ಜನರಿಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಿದೆ. ಕರ್ನಾಟಕದ ಎಲ್ಲೆಡೆಯ ಖ್ಯಾತ ಕಲಾವಿದರು ತಮ್ಮ ಸಂಗೀತ, ನೃತ್ಯ, ವಾದ್ಯ ಸಂಗೀತದಿಂದ ಮನರಂಜನೆ ನೀಡಿದ್ರೆ, ವಿಮಾನ ನಿಲ್ದಾಣದ ಮುಂದೆ ಯುದ್ಧ ಕಲೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇದರ ಜೊತೆಯಲ್ಲಿ ಬೊಂಬೆ ಹಬ್ಬ ಎನ್ನಲಾಗುವ ಸಾಂಪ್ರದಾಯಿಕ ಜಾನಪದ ಶೈಲಿಯ ಬೊಂಬೆಗಳ ಪ್ರದರ್ಶನವನ್ನು ವಿಮಾನ ನಿಲ್ದಾಣದ ರಸ್ತೆಗಳ ಪಕ್ಕದ ಹುಲ್ಲು ಹಾಸಿನ ಮೇಲೆ ಆಯೋಜಿಸಲಾಗುತ್ತಿದೆ.
ದಸರಾ ಉತ್ಸವದ ಭಾಗವಾಗಿರುವ ಬೃಹತ್ ಆನೆಯ ಬೊಂಬೆಯನ್ನು ಕೂಡ ಪ್ರದರ್ಶಿಸಲಾಗುತ್ತಿದೆ. ದಸರಾ ತಿರುಳಿನ ವರ್ಚುವಲ್ ರಿಯಾಲಿಟಿ ಗೇಮ್‌ನ ಕೂಡ ಗ್ರಾಹಕರು ಅನುಭವಿಸಬಹುದಾಗಿದ್ದು, ಈ ಹೊಳಪಿಗೆ ಮತ್ತೊಂದು ಸೇರ್ಪಡೆಯಾಗಿ ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊಳಪಿನ ಬೆಳಕಿನೊಂದಿಗೆ ಅಲಂಕರಿಸಲಾಗುತ್ತಿದೆ.
ಬಿಐಎಎಲ್ ದತ್ತು ಪಡೆದಿರುವ ಅರದೇಶನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಸಂಭ್ರಮದಲ್ಲಿ ತೊಡಗಿಸಿಕೊಳ್ಳಲು ಶಾಲೆಯಲ್ಲಿ ಗ್ರಾಮೋತ್ಸವವನ್ನು ಆಯೋಜಿಸಿದ್ದು, ಈ ಮೂಲಕ ಡೊಳ್ಳುಕುಣಿತ, ಸೂತ್ರದ ಬೊಂಬೆಯಾಟ ಪ್ರದರ್ಶನ ಮತ್ತು ಗಾರುಡಿ ಗೊಂಬೆ ನೃತ್ಯಗಾರರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.