ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ಇಲಾಖೆಗಳಲ್ಲಿ ಖಾಲಿ ಇರುವ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ನಲ್ಲಿ ಈ ನೇಮಕಾತಿ ನಡೆಯಲಿದೆ.
ಅಧಿಸೂಚನೆ
ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ:
ಕರ್ನಾಟಕ ನಗರ ನೀರು ಸರಬರಾಜಯ ಮತ್ತು ಒಳಚರಂಡಿ ಮಂಡಳಿ (KUWSDB)
ಹುದ್ದೆ ವಿವರ
ಹುದ್ದೆ ಸಂಖ್ಯೆ
ಸಹಾಯಕ ಇಂಜಿನಿಯರ್
50
ಎಫ್ಡಿಎ (ಗ್ರೂಪ್-ಸಿ)
14
ಒಟ್ಟು ಹುದ್ದೆ
64
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)
ಹುದ್ದೆ ವಿವರ
ಹುದ್ದೆ ಸಂಖ್ಯೆ
ನಿರ್ವಾಹಕ (ಕಂಡಕ್ಟರ್)
2500
ಸಹಾಯಕ ಲೆಕ್ಕಿಗ
1
ಸ್ಟಾಫ್ ನರ್ಸ್
1
ಫಾರ್ಮಸಿಸ್ಟ್
1
ಒಟ್ಟು ಹುದ್ದೆ
2503
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS)
ಹುದ್ದೆ ವಿವರ
ಹುದ್ದೆ ಸಂಖ್ಯೆ
ಸಹಾಯಕ ಗ್ರಂಥಪಾಲಕ
1
ಜೂನಿಯರ್ ಪ್ರೋಗ್ರಾಮರ್
5
ಸಹಾಯಕ ಇಂಜಿನಿಯರ್
1
ಸಹಾಯಕ
12
ಕಿರಿಯ ಸಹಾಯಕ
25
ಒಟ್ಟು ಹುದ್ದೆ
44
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)
ಒಟ್ಟು ಹುದ್ದೆ
ಹುದ್ದೆ ಸಂಖ್ಯೆ
ಸಹಾಯಕ ಆಡಳಿತಾಧಿಕಾರಿ (ದರ್ಜೆ 2)
3
ಸಹಾಯಕ ಲೆಕ್ಕಾಧಿಕಾರಿ
2
ಸಹಾಯಕ ಅಂಕಿ ಸಂಖ್ಯಾಧಿಕಾರಿ
1
ಸಹಾಯಕ ಉಗ್ರಾಣಾಧಿಕಾರಿ
2
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಧಿಕಾರಿ
7
ಸಹಾಯಕ ಕಾನೂನು ಅಧಿಕಾರಿ
7
ಸಹಾಯಕ ಅಭಿಯಂತರು (ಕಾಮಗಾರಿ )
1
ಸಹಾಯಕ ತಾಂತ್ರಿಕ ಶಿಲ್ಪಿ
11
ಸಹಾಯಕ ಸಂಚಾರ ವ್ಯವಸ್ಥಾಪಕ
11
ಕಿರಿಯ ಅಭಿಯಂತರರು (ಕಾಮಗಾರಿ)
5
ಕಿರಿಯ ಅಭಿಯಂತರರು (ವಿದ್ಯುತ್)
8
ಗಣಕ ಮೇಲ್ವಿಚಾರಕ
14
ಸಂಚಾರ ನಿರೀಕ್ಷಕ
18
ಚಾರ್ಜ್ಮನ್
22
ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3)
28
ಕುಶಲ ಕರ್ಮಿ (ದರ್ಜೆ-3)
80
ತಾಂತ್ರಿಕ ಸಹಾಯಕ (ದರ್ಜೆ- 3)
500
ಒಟ್ಟು ಹುದ್ದೆ
723
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ನಲ್ಲಿ ಒಟ್ಟು 38 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)
ಹುದ್ದೆ ವಿವರ
ಹುದ್ದೆ ಸಂಖ್ಯೆ
ಸಹಾಯಕ ಲೆಕ್ಕಿಗ
15
ನಿರ್ವಾಹಕ
1737
ಒಟ್ಟು ಹುದ್ದೆ
1752
ಈ ಹುದ್ದೆಗಳಿಗೆ ಕೆಇಎ ಅಧಿಸೂಚನೆ ಪ್ರಕಟಿಸಿದ್ದು, ಈ ಹುದ್ದೆಗಳ ವಿದ್ಯಾರ್ಹತೆ, ವೇತನ, ಶ್ರೇಣಿ, ಇಲಾಖೆವಾರು, ವೃಂದವಾರು ವರ್ಗೀಕರಣ ಮತ್ತು ಪರೀಕ್ಷೆ ಸೇರಿದಂತೆ ಇತರೆ ಮಾಹಿತಿಗಳನ್ನು ವಿವರವಾದ ಅಧಿಸೂಚನೆಯಲ್ಲಿ ಶೀಘ್ರವೇ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kea.kar.nic.in ಇಲ್ಲಿಗೆ ಭೇಟಿ ನೀಡಬಹುದು.