ಕರ್ನಾಟಕ

karnataka

By

Published : Oct 5, 2020, 3:36 PM IST

ETV Bharat / state

ಮಾಸ್ಕ್ ಧರಿಸದವರಿಗೆ ದುಬಾರಿ ದಂಡ ಹಾಕಬೇಡಿ: ಸರ್ಕಾರಕ್ಕೆ ಕೆ‌.ಸಿ. ಕೊಂಡಯ್ಯ ಪತ್ರ

ದಂಡದ ಪ್ರಮಾಣ ದುಬಾರಿಯಾಗಿದ್ದು, ಅದರಲ್ಲೂ ಕೂಲಿಕಾರ್ಮಿಕರಿಗೆ ಅಂದಿನ ದುಡಿಮೆಯೇ ಅವರಿಗೆ ಜೀವನಾಧಾರವಾಗಿದೆ. ಕೊರೊನಾ ಬಂದಾಗಿನಿಂದ ಉದ್ಯೋಗದ ಅವಕಾಶಗಳು ಕೂಡ ಕಡಿತಗೊಂಡಿವೆ. ಹಾಗಾಗಿ ದಂಡದ ಶುಲ್ಕವನ್ನು ಕಡಿಮೆ ಮಾಡುವಂತೆ ತಿಳಿಸಿದ್ದಾರೆ.

ಮಾಸ್ಕ್
ಮಾಸ್ಕ್

ಬೆಂಗಳೂರು: ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಮಾಸ್ಕ್ ಧರಿಸದೇ ಓಡಾಡುವವರಿಗೆ ಸರ್ಕಾರ ದುಬಾರಿ ದಂಡ ವಿಧಿಸುತ್ತಿದೆ. ಈ‌ ಸಂಬಂಧ ಸಾರ್ವಜನಿಕ ವಲಯದಲ್ಲೂ ವಿರೋಧ ವ್ಯಕ್ತವಾಗಿದ್ದು,‌ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ ದಂಡ ಕಡಿತಗೊಳಿಸುವಂತೆ ಪತ್ರ ಬರೆದಿದ್ದಾರೆ.

ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಮಾಸ್ಕ್ ಧರಿಸದಿದ್ದರೆ ಪಾಲಿಕೆ ವ್ಯಾಪ್ತಿಯಲ್ಲಿ 1,000 ರೂ. ಹಾಗೂ ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ 500 ರೂ. ದಂಡ‌ ವಿಧಿಸಲಾಗಿದೆ. ಆದರೆ ದಂಡದ ಪ್ರಮಾಣ ದುಬಾರಿಯಾಗಿದ್ದು, ಅದರಲ್ಲೂ ಕೂಲಿಕಾರ್ಮಿಕರಿಗೆ ಅಂದಿನ ದುಡಿಮೆಯೇ ಅವರಿಗೆ ಜೀವನಾಧಾರವಾಗಿದೆ. ಕೊರೊನಾ ಬಂದಾಗಿನಿಂದ ಉದ್ಯೋಗದ ಅವಕಾಶಗಳು ಕೂಡ ಕಡಿತಗೊಂಡಿವೆ. ಆದ್ದರಿಂದ ದಂಡದ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ ಪರಿಷತ್ ಸದಸ್ಯ ಕೆ‌.ಸಿ. ಕೊಂಡಯ್ಯ ಬರೆದಿರುವ ಪತ್ರ

ಹಿಂದೆ ಕೊರೊನಾ ಸಾಂಕ್ರಾಮಿಕ ಆರಂಭದಲ್ಲಿ ಸಾಮಾಜಿಕ ಸಂಘ ಸಂಸ್ಥೆಗಳು ಪ್ರಮುಖ ರಸ್ತೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಉಚಿತವಾಗಿ‌ ವಿತರಣೆ ಮಾಡುತ್ತಿದ್ದರು. ಇಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸಿ‌ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳನ್ನು ಪೂರೈಸಬೇಕೆಂದು ಮನವಿ ಮಾಡಿದ್ದಾರೆ‌‌.

ABOUT THE AUTHOR

...view details