ಯಲಹಂಕ/ಬೆಂಗಳೂರು :ಸಾಮಾನ್ಯವಾಗಿ ದಂಟಿನ ಸೊಪ್ಪನ್ನು ತರಕಾರಿಯಾಗಿ ಬಳಕೆ ಮಾಡಲಾಗುತ್ತಿದೆ. ಆದರೆ, ಜಿಕೆವಿಕೆ ಬಿಡುಗಡೆಗೊಳಿಸಿರುವ ನೂತನ ಕೆಬಿಜಿಎ-15 ದಂಟಿನ ತಳಿಯ ಬೀಜಗಳು(kbga -15 amaranth leaves seeds) ಆಹಾರ ಧಾನ್ಯವಾಗಿ (food grains)ಬಳಕೆಯಾಗುತ್ತಿದೆ.
ಹೇರಳ ಪೌಷ್ಠಿಕಾಂಶವನ್ನ(nutrients) ಒಳಗೊಂಡಿರುವ ದಂಟಿನ ಸೊಪ್ಪಿನ ತಳಿ ರಾಗಿ,ಗೋಧಿ, ಸಿರಿಧಾನ್ಯಗಳಿಗಿಂತ ಶೇ.15ರಷ್ಟು ಪೌಷ್ಟಿಕಾಂಶವನ್ನ ಒಳಗೊಂಡಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ) ಈ ಬಾರಿ ಬಿಡುಗಡೆಗೊಳಿಸಿರುವ ಕೆಬಿಜಿಎ-15 ತಳಿಯ ಬೀಜದ ದಂಟು ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ.
90 ರಿಂದ 95 ದಿನಗಳಿಗೆ ಕೊಯ್ಲುಗೆ ಬರುವ ಕೆಜಿಪಿಎ-15 ತಳಿಯ ದಂಟಿನ ಬೀಜದ ತಳಿಯು ಎಕರೆಗೆ 6 ರಿಂದ 7 ಕ್ವಿಂಟಲ್ ಇಳುವರಿಯನ್ನ ಕೊಡುತ್ತೆ. ಮಿಶ್ರ ಹಾಗೂ ಅಂತರ ಬೆಳೆಯಾಗಿ ಬೆಳೆಯಬಹುದು.
ಹೂ ಗೊಂಚಲು ಗೋಳಾಕಾರದ ಕುಂಕುಮ ಮಿಶ್ರಿತ ಹಸಿರು ಬಣ್ಣವನ್ನು ಹೊಂದಿದ್ದು, ಎಲೆ ತುಕ್ಕು ರೋಗ, ಫಿಲ್ಲೋಡಿ ಮತ್ತು ಎಲೆ ಚುಕ್ಕೆ ರೋಗಗಳು ಮತ್ತು ಕೀಟಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿರುವುದು ಈ ತಳಿಯ ವಿಶೇಷತೆ.
ಪ್ರಮುಖ ಆಹಾರ ಧಾನ್ಯವಾಗಿ ಕೆಬಿಜಿಎ-15 ದಂಟಿನ ಬೀಜದ ತಳಿಯನ್ನ ಬಳಸಬಹುದು. ರಾಗಿ,ಗೋಧಿ ಮತ್ತು ಸಿರಿಧಾನ್ಯಗಳಿಗೆ ಹೋಲಿಸಿದ್ದಾರೆ. ಈ ತಳಿ ಶೇ.15ರಷ್ಟು ಹೆಚ್ಚು ಪೌಷ್ಟಿಕಾಂಶವನ್ನ ಒಳಗೊಂಡಿದೆ.
ಕ್ಯಾಲ್ಸಿಯಂ,ಸತು, ಪೋಟ್ಯಾಶಿಯಂ ಮತ್ತು ರಂಜಕದ(Phosphorus) ಪ್ರಮಾಣ ಇದರಲ್ಲಿ ಹೇರಳವಾಗಿದೆ. ಯಾವುದೇ ಏಕದಳ ಧಾನ್ಯಗಳಲ್ಲಿ ಇರದ ಲೈಸಿನ್ ಎಂಬ ಅಮೈನೋ ಆಮ್ಲ ಈ ಬೀಜದ ದಂಟಿನಲ್ಲಿರುವುದು ವಿಶೇಷವಾಗಿದೆ.