ಕರ್ನಾಟಕ

karnataka

ETV Bharat / state

ಉಪಚುನಾವಣೆಗೆ ಒಟ್ಟು 301 ನಾಮಪತ್ರ ಉರ್ಜಿತ, 54 ತಿರಸ್ಕೃತ.. - karnataka by election update

ನಿನ್ನೆ ನಾಮಪತ್ರ ಸಲ್ಲಿಕೆಗೆ ಕಡೆಯದಿನವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇಂದು ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿಗಳು ನಾನಾ ಕಾರಣಗಳಿಗೆ ಒಟ್ಟು 54 ನಾಮಪತ್ರವನ್ನು ತಿರಸ್ಕರಿಸಿದ್ದಾರೆ.

ಉಪಚುನಾವಣೆ

By

Published : Nov 19, 2019, 11:39 PM IST

ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಪರಿಶೀಲನೆ ಇಂದು ನಡೆದಿದ್ದು, ಒಟ್ಟು ಸಲ್ಲಿಕೆಯಾಗಿದ್ದ 355 ನಾಮಪತ್ರಗಳ ಪೈಕಿ 54 ನಾಮಪತ್ರ ತಿರಸ್ಕೃತವಾಗಿದ್ದು, ಸದ್ಯ 301 ನಾಮಪತ್ರಗಳು ಉರ್ಜಿತವಾಗಿವೆ.

ನಿನ್ನೆ ನಾಮಪತ್ರ ಸಲ್ಲಿಕೆಗೆ ಕಡೆಯದಿನವಾಗಿತ್ತು. ಭಾರಿ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇಂದು ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿಗಳು ನಾನಾ ಕಾರಣಗಳಿಗೆ ಒಟ್ಟು 54 ನಾಮಪತ್ರವನ್ನು ತಿರಸ್ಕರಿಸಿದ್ದಾರೆ.

ಕ್ಷೇತ್ರವಾರು ನೋಡುವುದಾದರೆ ಅಥಣಿಯಲ್ಲಿ ಸಲ್ಲಿಕೆಯಾಗಿದ್ದ 25 ನಾಮಪತ್ರಗಳ ಪೈಕಿ 5 ತಿರಸ್ಕೃತವಾಗಿದ್ದು, 20 ನಾಮಪತ್ರಗಳು ಸ್ವೀಕೃತವಾಗಿವೆ. ಕಾಗವಾಡದಲ್ಲಿ ಸಲ್ಲಿಕೆಯಾಗಿದ್ದ 17ರ ಪೈಕಿ 6 ನಾಮಪತ್ರ ತಿರಸ್ಕೃತವಾಗಿದ್ದು, 11 ನಾಮಪತ್ರ ಸ್ವೀಕೃತವಾಗಿದೆ. ಗೋಕಾಕ್​ನಲ್ಲಿ 24ರ ಪೈಕಿ 10 ತಿರಸ್ಕೃತವಾಗಿದ್ದು, 14 ನಾಮಪತ್ರ ಸ್ವೀಕೃತವಾಗಿದೆ. ಯಲ್ಲಾಪುರದಲ್ಲಿ ಸಲ್ಲಿಕೆಯಾದ ನಾಮಪತ್ರಗಳಲ್ಲಿ 1 ಮಾತ್ರ ತಿರಸ್ಕೃತವಾಗಿದ್ದು, 19 ನಾಮಪತ್ರ ಸ್ವೀಕೃತವಾಗಿವೆ. ಹಿರೇಕೇರೂರಿನಲ್ಲಿ ಯಾವ ನಾಮಪತ್ರವೂ ತಿರಸ್ಕೃತವಾಗದೇ ಎಲ್ಲಾ 18 ನಾಮಪತ್ರಗಳು ಸ್ವೀಕೃತವಾಗಿವೆ. ರಾಣೆಬೆನ್ನೂರಿನಲ್ಲಿ ಸಲ್ಲಿಕೆಯಾಗಿದ್ದ 21ರ ಪೈಕಿ ಒಂದು ನಾಮಪತ್ರ ತಿರಸ್ಕೃತವಾಗಿದೆ. 20 ನಾಮಪತ್ರ ಸ್ವೀಕೃತವಾಗಿವೆ. ಯಲ್ಲಾಪುರಲ್ಲಿ 24ರ ಪೈಕಿ 4 ನಾಮಪತ್ರ ತಿರಸ್ಕೃತವಾಗಿದ್ದು, 20 ಉರ್ಜಿತವಾಗಿವೆ.

ಚಿಕ್ಕಬಳ್ಳಾಪುರದಲ್ಲಿ ಸಲ್ಲಿಕೆಯಾಗಿದ್ದ 21 ನಾಮಪತ್ರಗಳ ಪೈಕಿ 7 ನಾಮಪತ್ರ ತಿರಸ್ಕೃತವಾಗಿದ್ದು, 14 ನಾಮಪತ್ರ ಸ್ವೀಕೃತವಾಗಿದೆ. ಕೆಆರ್‌ಪುರದಲ್ಲಿ ಒಟ್ಟು 22 ನಾಮಪತ್ರ ಸಲ್ಲಿಕೆಯಾಗಿತ್ತು. ಇದೀಗ 7 ತಿರಸ್ಕೃತವಾದ ಹಿನ್ನೆಲೆ 15 ನಾಮಪತ್ರ ಸ್ವೀಕೃತವಾದಂತೆ ಆಗಿದೆ. ಯಶವಂತಪುರದಲ್ಲಿ 22ರ ಪೈಕಿ 2 ತಿರಸ್ಕೃತವಾಗಿ, 20 ನಾಮಪತ್ರ ಸ್ವೀಕೃತವಾಗಿವೆ. ಮಹಾಲಕ್ಷ್ಮಿಲೇಔಟನ್‌ನಲ್ಲಿ 26ರ ಪೈಕಿ 3 ತಿರಸ್ಕೃತವಾಗಿದ್ದು, 23 ನಾಮಪತ್ರ ಸ್ವೀಕೃತವಾಗಿವೆ. ಶಿವಾಜಿನಗರದಲ್ಲಿ 36ರ ಪೈಕಿ 33 ಸ್ವೀಕೃತವಾಗಿದ್ದು, 3 ನಾಮಪತ್ರ ತಿರಸ್ಕೃತವಾಗಿದೆ. ಹೊಸಕೋಟೆಯಲ್ಲಿ ಸಲ್ಲಿಕೆಯಾಗಿದ್ದ 33 ನಾಮಪತ್ರಗಳ ಪೈಕಿ 3 ತಿರಸ್ಕೃತಗೊಂಡಿದ್ದು, 30 ನಾಮಪತ್ರ ಸ್ವೀಕೃತವಾಗಿದೆ. ಕೃಷ್ಣರಾಜಪೇಟೆಯಲ್ಲಿ 15 ನಾಮಪತ್ರ ಸಲ್ಲಿಕೆಯಾಗಿದ್ದು, 2 ತಿರಸ್ಕಾರಗೊಂಡು, 13 ಸ್ವೀಕೃತವಾಗಿವೆ. ಹುಣಸೂರಿನಲ್ಲಿ ಸಲ್ಲಿಕೆಯಾಗಿದ್ದ ಎಲ್ಲಾ 31 ನಾಮಪತ್ರಗಳು ಸ್ವೀಕೃತವಾಗಿವೆ.

ಪಕ್ಷವಾರು ಸ್ಥಿತಿಗತಿ ಗಮನಿಸಿದಾಗ ಕಣದಲ್ಲಿರುವ ಅಭ್ಯರ್ಥಿಗಳು 218 ಮಂದಿ. ಬಹುಜನ ಸಮಾಜ ಪಕ್ಷದ 2, ಬಿಜೆಪಿಯ 15, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ಸಿಸ್ಟ್) ಪಕ್ಷದಿಂದ ಯಾವುದೇ ಅಭ್ಯರ್ಥಿ ಕಣದಲ್ಲಿಲ್ಲ. ಕಾಂಗ್ರೆಸ್ ಪಕ್ಷದಿಂದ 15, ಜಾತ್ಯತೀತ ಜನತಾದಳದಿಂದ 14, ಇತರೆ ಪಕ್ಷಗಳಿಂದ 46 ಹಾಗೂ ಸ್ವತಂತ್ರ ಅಭ್ಯರ್ಥಿಗಳು 125 ಮಂದಿ ನಾಮಪತ್ರ ಸ್ವೀಕೃತವಾಗಿದೆ. ಈಗಿನ ಮಾಹಿತಿ ಪ್ರಕಾರ ಒಟ್ಟು 218 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿದೆ.

ABOUT THE AUTHOR

...view details