ಕರ್ನಾಟಕ

karnataka

ETV Bharat / state

ಕೇಂದ್ರ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್​ಗೆ ಕಾಸಿಯಾ ಅಧ್ಯಕ್ಷರು ಖುಷ್​​ - Kasia President Raju

ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ಎಂಎಸ್‌ಎಂಇಗಳಿಗೆ ಘೋಷಿಸಿರುವ 20,000 ಕೋಟಿ ರೂ.ಗಳ ನೆರವನ್ನ ಸ್ವಾಗತಿಸುತ್ತೇವೆ ಎಂದು ಕಾಸಿಯಾ ಅಧ್ಯಕ್ಷ ರಾಜು ತಿಳಿಸಿದ್ದಾರೆ.

Kasia president happy to help the central government's special economic package
ಕೇಂದ್ರ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್​ಗೆ ಸಂತಸ ವ್ಯಕ್ತಪಡಿಸಿದ ಕಾಸಿಯಾ ಅಧ್ಯಕ್ಷ

By

Published : May 14, 2020, 11:48 AM IST

ಬೆಂಗಳೂರು:ಎಂಎಸ್‌ಎಂಇ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್​ ಅನ್ನು ಕಾಸಿಯಾ (ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ಸ್ವಾಗತಿಸುತ್ತದೆ ಎಂದು ಕಾಸಿಯಾ ಅಧ್ಯಕ್ಷ ರಾಜು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್​ಗೆ ಸಂತಸ ವ್ಯಕ್ತಪಡಿಸಿದ ಕಾಸಿಯಾ ಅಧ್ಯಕ್ಷ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಎಂಎಸ್‌ಎಂಇಗಳಿಗೆ ಘೋಷಿಸಿರುವ 20,000 ಕೋಟಿ ರೂ.ಗಳ ನೆರವು ಎನ್​ಪಿಎ ಖಾತೆಗಳಿಗೆ ಸಹಕಾರಿಯಾಗಲಿದೆ. ಇಲ್ಲದಿದ್ದರೆ ಅವುಗಳ ಕಾರ್ಯಾಚರಣೆ ಕಷ್ಟಸಾಧ್ಯವಾಗುತ್ತಿತ್ತು. ಇದರಿಂದ ಸುಮಾರು 2 ಲಕ್ಷ ಎಂಎಸ್​ಎಂಇಗಳಿಗೆ ಪ್ರಯೋಜನವಾಗಲಿದೆ ಮತ್ತು ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಅರ್ಹ ಘಟಕಗಳಿಗೆ ಈಕ್ವಿಟಿ ಬೆಂಬಲವನ್ನು ಒದಗಿಸುವ ನಿಧಿಯಾಗಿದೆ. ಇಪಿಎಫ್​ ಕೊಡುಗೆಯನ್ನ ಇನ್ನೂ 3 ತಿಂಗಳು ವಿಸ್ತರಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಟೆಂಡರ್ ನಿಯಮಗಳನ್ನ ಸಡಿಲಿಸಿರುವುದು ಮತ್ತು ಎನ್​ಬಿಎಫ್​ಸಿಗಳಲ್ಲಿ ಈಕ್ವಿಟಿಯನ್ನು ಸೇರಿಸಿರುವುದರಿಂದ ಸರ್ಕಾರದ ಖರೀದಿ ವಿಷಯದಲ್ಲಿ ಎಂಎಸ್‌ಎಂಇಗಳಿಗೆ ಸಹಾಯ ಮಾಡುವ ಸರ್ಕಾರದ ನಡೆಗಳು ಆಶಾದಾಯಕವಾಗಿವೆ.

ಎಂಎಸ್‌ಎಂಇ ಹೊಸ ವ್ಯಾಖ್ಯಾನದ ಘೋಷಣೆಯನ್ನ ನಾವು ಸ್ವಾಗತಿಸುತ್ತೇವೆ ಮತ್ತು ಎಂಎಸ್‌ಎಂಇಗಳಿಗೆ ಸರ್ಕಾರ ಮತ್ತು ಅಧೀನ ಸಂಸ್ಥೆಗಳಿಂದ ಬಾಕಿ ಇರುವ ಪಾವತಿಗಳನ್ನ 45 ದಿನಗಳಲ್ಲಿ ಬಿಡುಗಡೆ ಮಾಡುವ ಸರ್ಕಾರದ ಘೋಷಣೆಯನ್ನು ಸಹ ನಾವು ಸ್ವಾಗತಿಸುತ್ತೇವೆ ಎಂದರು.

ABOUT THE AUTHOR

...view details