ಬೆಂಗಳೂರು :ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಸ್ಥೆಗಳಿಂದ ಪರಿಹಾರದ ಚೆಕ್ ನೀಡಲಾಯಿತು.
ಸಿಎಂ ಪರಿಹಾರ ನಿಧಿಗೆ ಕಸಾಪ ಸೇರಿ ಹಲವು ಸಂಘಟನೆಗಳಿಂದ ಸಹಾಯ - Mysore race club
ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪ ಪರಿಹಾರವಾಗಿ ಹಲವಾರು ಸಂಘಟನೆಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ಧನ ಸಹಾಯ ಮಾಡಿದರು.
ಸಿಎಂ ಪರಿಹಾರ ನಿಧಿ
ವಿಧಾನಸೌಧದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದ ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ಡಾ. ನಿತ್ಯಾನಂದ ರಾವ್ ಅವರು 10 ಲಕ್ಷ ರೂ. ಗಳ ಚೆಕ್ ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 34 ಲಕ್ಷ ರೂ. ಗಳ ಚೆಕ್ ನ್ನು ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹಾಗೂ ಶ್ಯಾಂಪುರ್ ಮಧುಸೂದ ಟ್ರಸ್ಟ್ ವತಿಯಿಂದ 2 ಲಕ್ಷ ರೂ. ಗಳ ಚೆಕ್‌ನ್ನು ಸಿಎಂಗೆ ಹಸ್ತಾಂತರಿಸಲಾಯಿತು.