ಕರ್ನಾಟಕ

karnataka

ETV Bharat / state

ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಸ್ಪೆಷಲ್ ಫೋಟೋ ಶೂಟ್​ನಲ್ಲಿ ಮಿಂಚಿದ ಕಾರುಣ್ಯ... - ಸ್ಪೆಷಲ್ ಫೋಟೋ ಶೂಟ್​ನಲ್ಲಿ ಮಿಂಚಿದ ಕಾರುಣ್ಯ

ಬಿಗ್​ಬಾಸ್ ಖ್ಯಾತಿಯ ನಟಿ ಕಾರುಣ್ಯ ರಾಮ್ ಕೂಡ 73 ನೇ ಸ್ವಾತಂತ್ರ ದಿನವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

karunya ram special photo shoot
ಸ್ಪೆಷಲ್ ಫೋಟೋ ಶೂಟ್​ನಲ್ಲಿ ಮಿಂಚಿದ ಕಾರುಣ್ಯ

By

Published : Aug 12, 2020, 9:50 PM IST

73 ನೇ ಸ್ವಾತಂತ್ರೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದೇಶಾದ್ಯಂತ ಸಂಭ್ರಮದ ಈ ದಿನವನ್ನು ಸೆಲೆಬ್ರೇಟ್ ಮಾಡಲು ಸಿದ್ಧತೆ ಜೋರಾಗಿದೆ. ಅದೇ ರೀತಿ ಬಿಗ್​ಬಾಸ್ ಖ್ಯಾತಿಯ ನಟಿ ಕಾರುಣ್ಯ ರಾಮ್ ಕೂಡ 73 ನೇ ಸ್ವಾತಂತ್ರ ದಿನವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಸ್ಪೆಷಲ್ ಫೋಟೋ ಶೂಟ್​ನಲ್ಲಿ ಮಿಂಚಿದ ಕಾರುಣ್ಯ

ಸದಾ ಶೂಟಿಂಗ್ ಅಲ್ಲಿ ಬಿಝಿ ಇರ್ತಿದ್ದ ನಟಿ ಕಾರುಣ್ಯ ಕೊರೊನಾದಿಂದ ಶೂಟಿಂಗ್ ಇಲ್ಲದ ಕಾರಣ ಈ ಬಾರಿ ಸ್ವಾತಂತ್ರ ದಿನವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ಪ್ಲಾನ್ ಮಾಡಿಕೊಂಡು, ಇದೀಗ ಢಿಫರೆಂಟ್ ಕಾಸ್ಟ್ಯೂಮ್​ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಅಲ್ಲದೇ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಹೋರಾಟಗಾರರಿಗೆ ನಮನ ಸಲ್ಲಿಸಿದ್ದಾರೆ. ಅಲ್ಲದೇ ನಾಡಿನ ಜನತೆಗೆ ಸ್ವಾತಂತ್ರೋತ್ಸವಕ್ಕೆ ಶುಭಕೋರಿದ್ದಾರೆ.

ಇನ್ನು ಈ ಫೋಟೋ ಶೂಟ್​​ನ ವಿಶೇಷ ಅಂದ್ರೆ ಕಾರುಣ್ಯ ತೊಟ್ಟಿರುವ ಕಾಸ್ಟ್ಯೂಮ್. ಅದೇನಪ್ಪ ಅಂದ್ರೆ ಕಾರುಣ್ಯ ಫೋಟೋ ಶೂಟ್​ಗಾಗಿ ಸ್ಪೆಷಲ್ ಕೋಟ್ ತೊಟ್ಟು ಕಂಗೊಳಿಸಿದ್ದಾರೆ. ಸ್ಯಾಂಡಲ್ ವುಡ್​ನ ಸ್ಪೆಷಲ್ ಕಾಸ್ಟ್ಯೂಮ್ ಡಿಸೈನರ್ ಆದ ಲಕ್ಷ್ಮೀ ಕೃಷ್ಣ ನಮ್ಮ ನಾಡಿನ ವೀರ ಯೋಧರಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಕರ್ನಾಟಕದ ವೀರ ಯೋಧರ ಫೋಟೋಗಳು ಇರುವ ಕೋಟ್ ಡಿಸೈನ್ ಮಾಡಿದ್ದಾರೆ.

ಇನ್ನು ಆ ಕೋಟ್​ನಲ್ಲಿ ಕರ್ನಾಟಕದ ವೀರ ಯೋಧರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಉನ್ನಿ ಕೃಷ್ಣ, ಮೇಜರ್ ಅದಿತಿ ಮೋಹನ್, ಜಿತೇಂದ್ರ ಮೋಹನ್, ಮೇಜರ್ ಶಫೀಕ್ ಗೋರಿ ಸೇರಿದಂತೆ 19 ವೀರ ಯೋಧರ ಭಾವಚಿತ್ರವನ್ನು ಆ ಕೋಟ್ ಮೇಲೆ ಪ್ರಿಂಟ್ ಮಾಡಿಸಿದ್ದಾರೆ. ಇನ್ನು ಆ ಕೋಟ್ ಮೇಲೆ ದೇಶ ಭಕ್ತಿಯ ಬರಹಗಳನ್ನು ಕಾಣಬಹುದಾಗಿದೆ.

ABOUT THE AUTHOR

...view details