ಬೆಂಗಳೂರು: ಕರ್ನಾಟಕ ವುಮೆನ್ ಅಚಿವರ್ಸ್ ಅವಾರ್ಡ್ ಮೂರನೇ ಆವೃತ್ತಿ ಮಂಗಳವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ವಿಶೇಷವಾಗಿ ಜರುಗಿತು. ಕಾರ್ಯಕ್ರಮದಲ್ಲಿ 20 ಮಹಿಳೆಯರಿಗೆ ಕರ್ನಾಟಕ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಈ ವೇಳೆ ತಡರಾತ್ರಿಯಾದರೂ ಸಾಧಕಿಯರು ಱಂಪ್ ವಾಕ್ ಮಾಡುತ್ತಾ ಬಂದು ಪ್ರಶಸ್ತಿ ಸ್ವೀಕರಿಸಿದರು.
ಸಂಭ್ರಮದಿಂದ ನೆರವೇರಿದ ಕರ್ನಾಟಕ ವುಮೆನ್ ಅಚಿವರ್ಸ್ ಅವಾರ್ಡ್ಸ್ 2020 ಮೂರನೇ ಆವೃತಿ ಕಾರ್ಯಕ್ರಮವನ್ನು ಡಿಸಿಪಿ ಇಶಾಪಂತ್ ಹಾಗೂ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿ. ವಿನೋದ್ ಹಯಗ್ರೀವ ಉದ್ಘಾಟಿಸಿದರು. ವುಮೆನ್ ಅಚಿವರ್ ಅವಾರ್ಡ್ಸ್ ಕಾರ್ಯಕ್ರಮವನ್ನು ಸ್ಫೂರ್ತಿ ವಿಶ್ವಾಸ್ ಅಯೋಜಿಸಿ, ತೇಜಸ್ ಕಾಲ್ರ ಸಂಯೋಜನೆ ಮಾಡಿದರು.
ಕಾರ್ಯಕ್ರಮದ ನಂತರ ಡಿಸಿಪಿ ಇಶಾ ಪಂಥ್ ಮಾಧ್ಯಮದವರೊಂದಿಗೆ ಮಾತನಾಡಿ, ಇಂದು ವುಮೆನ್ ಅಚಿವರ್ ಅವಾರ್ಡ್ ಫೌಂಡೇಶನ್ ಕರ್ನಾಟಕದಿಂದ 20 ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಪತ್ರಿಕೋದ್ಯಮ, ನಾಯಕತ್ವ, ಸಾಮಾಜಿಕ ಕೆಲಸ ಕಾರ್ಯಗಳು, ಕಲಾ ವಿಭಾಗ ಸೇರಿದಂತೆ ಇನ್ನೂ ಹಲವಾರು ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಸಂಭ್ರಮದಿಂದ ನೆರವೇರಿದ ಕರ್ನಾಟಕ ವುಮೆನ್ ಅಚಿವರ್ಸ್ ಅವಾರ್ಡ್ಸ್ 2020 ಮೂರನೇ ಆವೃತಿ ಈ ವೇಳೆ ಸಿ. ಕ್ರಿಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ನ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿ. ವಿನೋದ್ ಹಯಗ್ರೀವ ಮಾತನಾಡಿ, ಸಮಾಜಮುಖಿಯಾಗಿ ಯಾರು ಕೆಲಸ ಮಾಡುತ್ತಾರೋ ಅವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ನಾವು ಮಾಡುತ್ತೇವೆ. 12 ಜನ ತೀರ್ಪುಗಾರರು 1400 ಮಂದಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಿಳೆಯರಲ್ಲಿ 20 ಜನರನ್ನು ಆರಿಸಿ ಪ್ರಶಸ್ತಿ ನೀಡಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ 20 ಸಾಧಕಿಯರನ್ನು ಆರಿಸಿದ್ದು, ಜಾತಿ, ಬಣ್ಣ, ಧರ್ಮ ಯಾವುದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಪತ್ರಿಕೋದ್ಯಮ, ಶಿಕ್ಷಣ, ಸಾಮಾಜಿಕ ಸೇವೆ, ಯುವತಿಯರ ಸಾಧನೆ ಈ ತರಹ ಎಲ್ಲಾ ವಿಭಾಗಗಳಲ್ಲಿ ಪ್ರಶಸ್ತಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಪ್ರಶಸ್ತಿ ಪಡೆದ ಸಾಧಕಿಯರು ಇವರು:
ನಾಯಕತ್ವ ಪ್ರಶಸ್ತಿ - ಒಟ್ಟಿಲೀನ್‌ಬನ್ ಕುಮಾರ್
ಯುವ ಐಕಾನ್ ಪ್ರಶಸ್ತಿ- ಅಲೀನಾ ಆಲಂ
ಉದ್ಯಮಿ ಪ್ರಶಸ್ತಿ- ಅನಿತಾ ಸ್ವಾಮಿ
ಸಾಹಿತ್ಯ ಪ್ರಶಸ್ತಿ- ಡಾ.ರೇಷ್ಮಾ ರಮೇಶ್
ಅತ್ಯುತ್ತಮ ಪರಿಸರ ಬದಲಾವಣೆ - ದಿವ್ಯಾ ಶೆಟ್ಟಿ
ಅತ್ಯುತ್ತಮ ಪ್ರಭಾವಶಾಲಿ ಬ್ಲಾಗರ್ ಪ್ರಶಸ್ತಿ - ಎರುಮ್ ಸಯೀದ್ ಖಾನ್
ವೃತ್ತಿಪರ ಮಹಿಳಾ ಸಾಧಕ ಪ್ರಶಸ್ತಿ -ಡಾ. ಶಾಂತದೇವಿ ಸನ್ನೆಲಪ್ಪನವರ್
ವಿಭಿನ್ನವಾಗಿ ಸಮರ್ಥ ಮಹಿಳಾ ಸಾಧಕ ಪ್ರಶಸ್ತಿ -ಹಿತಾ ಪ್ರೇಮ್
ಹಿರಿಯ ನಾಗರಿಕ ಪ್ರಶಸ್ತಿ - ಡಾ. ನಿಕಿತಾ ಸುರೇಶ್
ಅತ್ಯುತ್ತಮ ತಾಯಿ ಪ್ರಶಸ್ತಿ -ಸ್ವರ್ಣ ಹೊನಮ್ಮ
ಶ್ರೇಷ್ಠ ಚಲನಚಿತ್ರ ನಟಿ -ಐ. ವಿ. ಮನೋಹರ
ಶ್ರೇಷ್ಠ ಟಿವಿ ನಟಿ- ಆಶಾ ಲತಾ
ಶ್ರೇಷ್ಠ ರೇಡಿಯೋ ಜಾಕಿ-ಆರ್. ಜೆ. ಸೌಜನ್ಯ
ಪತ್ರಿಕೋದ್ಯಮ ಪ್ರಶಸ್ತಿ -ಪಿಂಕಿರಾಜ್‌ಪುರೋಹಿತ್
ಫ್ಯಾಷನ್ ಪ್ರಶಸ್ತಿ-ವಿದ್ಯಾ ವಿವೇಕ್
ಕಲೆ / ಸಂಸ್ಕೃತಿ ಪ್ರಶಸ್ತಿ - ಹಿಮಾ ಬಿಂದು
ಕ್ರೀಡೆ / ಫಿಟ್‌ನೆಸ್- ಶ್ರುತಿ ಕೀರ್ತಿ
ಸಾಮಾಜಿಕ ಸೇವಾ ಪ್ರಶಸ್ತಿ -ಚಂದ್ರಕಲಾ ಬಾಯಿ ಎಲ್.
ಕೃಷಿ ಪ್ರಶಸ್ತಿ-ನಾಗರತ್ನಮ್ಮ ಕೆ.
ಜೀವಮಾನ ಸಾಧನೆ ಪ್ರಶಸ್ತಿ -ಡಾ ಉಷಾ ಕಿಣಿ