ಕರ್ನಾಟಕ

karnataka

ETV Bharat / state

Karnataka weather report: ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮನ್ಸೂಚನೆ - ಕರ್ನಾಟಕ ಮಳೆ ಮುನ್ಸೂಚನೆ

ಬಂಗಾಳಕೊಲ್ಲಿಯ ಪೂರ್ವದಿಂದ ಪಶ್ಚಿಮ ಕಡೆಗೆ ತೇವಾಂಶ ಭರಿತ ಮೋಡಗಳು ಚಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಹಗುರದಿಂದ ಕೂಡಿದ ಸಾಧಾರಣ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

karnataka-weather-report
ರಾಜ್ಯ ಹವಾಮಾನ ಇಲಾಖೆ ವರದಿ

By

Published : Dec 14, 2021, 11:28 AM IST

ಬೆಂಗಳೂರು:ತೇವಾಂಶ ಭರಿತ ಮೋಡಗಳು ಇರುವುದರಿಂದ ರಾಜ್ಯದಲ್ಲಿ ಮುಂದಿನ 2 ದಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸೋಮವಾರ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಮಳೆಯಾಗಿದೆ. ಬಂಗಾಳಕೊಲ್ಲಿಯ ಪೂರ್ವದಿಂದ ಪಶ್ಚಿಮ ಕಡೆಗೆ ತೇವಾಂಶ ಭರಿತ ಮೋಡಗಳು ಚಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಹಗುರದಿಂದ ಕೂಡಿದ ಸಾಧಾರಣ ಬೀಳಲಿದೆ ಎಂದು ಮಾಹಿತಿ ನೀಡಿದೆ.

ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಇರುವುದಿಲ್ಲವೆಂದು ಹವಾಮಾನ ಇಲಾಖೆ ತಿಳಿಸಿದೆ.

ತಾಪಮಾನ ಕುಸಿತ:

ಶಿವಮೊಗ್ಗ, ಮೈಸೂರು ಮತ್ತು ಮಡಿಕೇರಿಯಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 4ರಿಂದ 5 ಡಿಗ್ರಿ ಹಾಗೂ ಬೆಂಗಳೂರು, ವಿಜಯನಗರ, ಕಲಬುರಗಿ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಮಂಗಳೂರಿನಲ್ಲಿ 3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಆ ಜಿಲ್ಲೆಗಳಲ್ಲಿ ಹೆಚ್ಚು ಚಳಿ ಕಾಣಿಸಿಕೊಂಡಿದೆ. ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿಯೂ ಸರಾಸರಿ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ ಎಂದಿದೆ.

ಇದನ್ನೂ ಓದಿ:Council election result: ಬೀದರ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್​ಗೆ ಗೆಲುವು

ABOUT THE AUTHOR

...view details