ಕರ್ನಾಟಕ

karnataka

ETV Bharat / state

ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ನಿಷೇಧಿಸಿದ ರಾಜ್ಯ ವಕ್ಫ್​ ಮಂಡಳಿ! - ಹಜಾ ಸುದ್ದಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಾಕೀತು ಹಿನ್ನೆಲೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ರಾಜ್ಯದ ಎಲ್ಲಾ ಮಸೀದಿ ಮತ್ತು ದರ್ಗಾಗಳಲ್ಲಿ ಧ್ವನಿವರ್ಧಕ ಬಳಸದಂತೆ ರಾಜ್ಯ ವಕ್ಫ್​ ಮಂಡಳಿ ನಿರ್ಣಯ ಕೈಗೊಂಡು ಸುತ್ತೋಲೆ ಹೊರಡಿಸಿದೆ.

Karnataka Wakf prohibits  Karnataka Wakf prohibits use of loudspeakers  Karnataka Wakf prohibits use of loudspeakers between 10 pm and 6 am  azaan  azaan news  ಲೌಡ್ ಸ್ಪೀಕರ್ ನಿಷೇಧ  ರಾಜ್ಯದ ಮಸೀದಿ ಮತ್ತು ದರ್ಗಾಗಳಲ್ಲಿ ಲೌಡ್​ ಸ್ಪೀಕರ್​ ನಿಷೇಧ  ರಾಜ್ಯದ ಮಸೀದಿ ಮತ್ತು ದರ್ಗಾಗಳಲ್ಲಿ ಲೌಡ್​ ಸ್ಪೀಕರ್​ ನಿಷೇಧ ಸುದ್ದಿ  ಹಜಾ  ಹಜಾ ಸುದ್ದಿ
ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ನಿಷೇಧಿಸಿದ ವಕ್ಫ್

By

Published : Mar 17, 2021, 10:32 AM IST

Updated : Mar 17, 2021, 11:55 AM IST

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಿಗೆ ಅಳವಡಿಸಿರುವ ಧ್ವನಿವರ್ಧಕಗಳನ್ನ ನಿಷೇಧಿಸಬೇಕೆಂಬ ಮಾತು ಆಗಾಗ ಕೇಳಿ ಬರುತ್ತಿತ್ತು. ಈಗ ಕರ್ನಾಟಕ ವಕ್ಫ್​ ಮಂಡಳಿ ಇದರ ಕುರಿತು ಮಹತ್ವದ ನಿರ್ಣಯ ಕೈಗೊಂಡಿದೆ.

ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ನಿಷೇಧಿಸಿದ ವಕ್ಫ್

ರಾಜ್ಯದ ಎಲ್ಲಾ ಮಸೀದಿ ಮತ್ತು ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಆಜಾನ್ ವೇಳೆ ಲೌಡ್ ಸ್ಪೀಕರ್ ಬಳಕೆಯನ್ನು ನಿಷೇಧಿಸಿ ಕರ್ನಾಟಕ ವಕ್ಫ್ ಮಂಡಳಿ ಆದೇಶ ಹೊರಡಿಸಿದೆ.

ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಸೀದಿ ಮತ್ತು ದರ್ಗಾಗಳಲ್ಲಿ ಧ್ವನಿವರ್ಧಕ ನಿಷೇಧಿಸಿದ ವಕ್ಫ್ ಮಂಡಳಿ

ಲೌಡ್ ಸ್ಪೀಕರ್ ಬಳಸಲು ಜನರೇಟರ್​​ಗಳನ್ನು ಬಳಸಲಾಗುತ್ತಿದೆ. ಇದರಿಂದ ಮಸೀದಿ ಮತ್ತು ದರ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಆಜಾನ್​​ ವೇಳೆ ಲೌಡ್ ಸ್ಪೀಕರ್ ನಿಷೇಧಿಸಲಾಗಿದೆ ಎಂದು ವಕ್ಫ್ ಮಂಡಳಿ ವಿವರಿಸಿದೆ.

ಶಾಲೆ, ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳ 100 ಮೀ. ವ್ಯಾಪ್ತಿಯನ್ನು ನಿಶಬ್ದದ ಝೋನ್ ಎಂದು ಈಗಾಗಲೇ ಘೋಷಿಸಲಾಗಿದೆ. ಸೈಲೆನ್ಸ್ ಝೋನ್ ಗಳಲ್ಲಿ ದೊಡ್ಡ ಶಬ್ದದ ಪಟಾಕಿ ಹೊಡೆಯುವುದು, ಲೌಡ್ ಸ್ಪೀಕರ್ ಬಳಸುವುದು 1986ರ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆಯಲ್ಲಿ ನಿಷೇಧಿಸಲಾಗಿದೆ ಎಂದು ಮಂಡಳಿ ಹೇಳಿದೆ.

ಶಬ್ದ ಮಾಲಿನ್ಯದ ಮಾನದಂಡಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ಆಜಾನ್​, ಸಾವು, ಸಮಾಧಿ ಮಾಡುವ ಸಮಯ, ಚಂದ್ರನನ್ನು ನೋಡುವುದು..ಹೀಗೆ ಪ್ರಮುಖ ಘೋಷಣೆಗಳ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಸಬಹುದು ಎಂದು ವಕ್ಫ್​ ಮಂಡಳಿ ಆದೇಶದಲ್ಲಿ ತಿಳಿಸಿದೆ.

ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಸೀದಿ ಮತ್ತು ದರ್ಗಾಗಳಲ್ಲಿ ಧ್ವನಿವರ್ಧಕ ನಿಷೇಧಿಸಿದ ವಕ್ಫ್ ಮಂಡಳಿ

ಮಸೀದಿಗಳು ಮತ್ತು ದರ್ಗಾಗಳ ಸುತ್ತ - ಮುತ್ತ ಶಬ್ದ ಮಟ್ಟವನ್ನು ಹೆಚ್ಚಿಸುವುದರಿಂದ ಜನರ ಆರೋಗ್ಯ ಮತ್ತು ಅವರ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಧಾರ್ಮಿಕ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ಸುತ್ತುವರಿದ ಧ್ವನಿ ಮಟ್ಟವನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಒತ್ತಿ ಹೇಳಿದ ಹಿನ್ನೆಲೆ ವಕ್ಫ್ ಮಂಡಳಿ ಈ ಆದೇಶ ಹೊರಡಿಸಿದೆ.

Last Updated : Mar 17, 2021, 11:55 AM IST

ABOUT THE AUTHOR

...view details