ಬೆಂಗಳೂರು : ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಅಸ್ತಿತ್ವದಲ್ಲಿರುವ ಸ್ವತ್ತು ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಲು ಹಾಗೂ ಸರಳೀಕೃತ ಸ್ವತ್ತು ತೆರಿಗೆ ಮೂಲಾಧಾರವನ್ನು ಉಪಬಂಧಿಸಲು, ಕರ್ನಾಟಕ ಸ್ಟಾಂಪುಗಳ ಅಧಿನಿಯಮ 1957ರ ಅಡಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಮಾರ್ಗಸೂಚಿ ಮೌಲ್ಯಗಳಿಗೆ ತೆರಿಗೆ ಮೂಲಾಧಾರವನ್ನು ಜೋಡಿಸುವ ಮೂಲಕ ಪಾಲಿಕೆಗಳ ರಾಜ್ಯಸ್ವಗಳನ್ನು ಸುಧಾರಿಸಲು ಮತ್ತು ನಗರಪಾಲಿಕೆಗಳ ಸಬಲೀಕರಣದ ಉದ್ದೇಶಕ್ಕಾಗಿ ತೆರಿಗೆ ಸುಧಾರಣೆಯನ್ನು ತರುವುದು ಅಪೇಕ್ಷಣೀಯವಾಗಿದೆ.
2020-21ನೇ ವರ್ಷಕ್ಕಾಗಿ ನಿವ್ವಳ ರಾಜ್ಯ ದೇಶೀಯ ಉತ್ಪನ್ನದ (ಜಿಎಸ್ಡಿಪಿ) ಶೇ. 0.25 ಹೆಚ್ಚುವರಿ ಸಾಲ ಪಡೆಯುವ ಮಿತಿಗೆ ಅರ್ಹವಾಗುವಂತೆ ರಾಜ್ಯ ಸರ್ಕಾರವನ್ನು ಸಶಕ್ತಗೊಳಿಸಲು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಸರ್ಕಾರ ಹೇಳಿದೆ.
ಓದಿ : ಖಾಸಗಿ ವಿವಿ ಐದು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ
ಈ ವಿಷಯವು ತುರ್ತು ಸ್ವರೂಪದ್ದಾಗಿದ್ದರಿಂದ ಮತ್ತು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳು ಅಧಿವೇಶನದಲ್ಲಿ ಇಲ್ಲದಿದ್ದುದ್ದರಿಂದ ಮೇಲಿನ ಉದ್ದೇಶವನ್ನು ಸಾಧಿಸಲು ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಅಧ್ಯಾದೇಶ 2021 ಪ್ರಸ್ತಾಪಿಸಲಾಗಿತ್ತು. ಈ ವಿಧೇಯಕವು ಅಧ್ಯಾದೇಶದ ಬದಲಿ ವಿಧೇಯಕವಾಗಿದೆ ಎಂದು ಉಲ್ಲೇಖಿಸಲಾಗಿದೆ.