ಕರ್ನಾಟಕ

karnataka

ETV Bharat / state

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್​​ ಮೇಲುಗೈ... ಫಲಿತಾಂಶದ ಸಂಪೂರ್ಣ ವಿವರ ಇಲ್ಲಿದೆ! - ಕಾಂಗ್ರೆಸ್​

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಯಾವ ವಾರ್ಡ್​​ನಲ್ಲಿ ಯಾವ ಪಕ್ಷ ಗೆಲುವು ದಾಖಲು ಮಾಡಿದೆ ಎಂಬುದರ ಮಾಹಿತಿ ಇಂತಿದೆ.

ಸ್ಥಳೀಯ ಸಂಸ್ಥೆ ಚುನಾವಣೆ

By

Published : Nov 14, 2019, 7:09 PM IST

Updated : Nov 14, 2019, 7:18 PM IST

ಬೆಂಗಳೂರು:ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸಂಪೂರ್ಣವಾಗಿ ಪ್ರಕಟಗೊಂಡಿದ್ದು, 151 ಸ್ಥಾನ ಕಾಂಗ್ರೆಸ್​ ಪಾಲಾಗಿದ್ದು, ಭಾರತೀಯ ಜನತಾ ಪಾರ್ಟಿ 125 ಹಾಗೂ ಜೆಡಿಎಸ್​​​ 63 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದೆ.

ಮಂಗಳೂರು ಮಹಾನಗರ ಪಾಲಿಕೆ
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. 60 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದ ಬಿಜೆಪಿ, ಹಲವು ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್​ಅನ್ನು ಸೋಲಿಸಿ ಗೆಲುವಿನ ನಗೆ ಬೀರಿದೆ.

ದಾವಣಗೆರೆ ಮಹಾನಗರ ಪಾಲಿಕೆ
ಒಟ್ಟು 45 ವಾರ್ಡ್​ಗಳ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 22 ಸ್ಥಾನ ಗಳಿಸಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 17 ಸ್ಥಾನದಲ್ಲಿ ಬಿಜೆಪಿ ಗೆಲುವು ದಾಖಲು ಮಾಡಿದೆ. ಉಳಿದಂತೆ ಜೆಡಿಎಸ್​ 1 ಸ್ಥಾನ ಹಾಗೂ 5 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

ಫಲಿತಾಂಶದ ಸಂಪೂರ್ಣ ಮಾಹಿತಿ
  • ಗೌರಿಬಿದನೂರು:
  • ಒಟ್ಟು ವಾರ್ಡ್: 31
  • ಬಿಜೆಪಿ 3, ಕಾಂಗ್ರೆಸ್ 15, ಜೆಡಿಎಸ್ 6, ಪಕ್ಷೇತರರು 7
  • ಕೋಲಾರ:
  • ಒಟ್ಟು ವಾರ್ಡ್: 35
  • ಬಿಜೆಪಿ 3, ಕಾಂಗ್ರೆಸ್ 12, ಜೆಡಿಎಸ್ 8, ಪಕ್ಷೇತರ 8, ಇತರೆ 1
  • ಚಿಂತಾಮಣಿ:
  • ಒಟ್ಟು ವಾರ್ಡ್ 31
  • ಬಿಜೆಪಿ 0, ಕಾಂಗ್ರೆಸ್ 1, ಜೆಡಿಎಸ್ 14, ಪಕ್ಷೇತರ 2, ಇತರರು 14
  • ಕೆಜಿಎಫ್:
  • ಒಟ್ಟು ವಾರ್ಡ್: 35
  • ಬಿಜೆಪಿ 3, ಕಾಂಗ್ರೆಸ್ 13, ಜಡಿಎಸ್ 2, ಪಕ್ಷೇತರ 14, ಇತರೆ 3
    ಫಲಿತಾಂಶದ ಸಂಪೂರ್ಣ ಮಾಹಿತಿ
  • ಮುಳಬಾಗಿಲು:
  • ಒಟ್ಟು ವಾರ್ಡ್: 31
  • ಬಿಜೆಪಿ 2, ಕಾಂಗ್ರೆಸ್ 7, ಜೆಡಿಎಸ್ 10, ಪಕ್ಷೇತರ 11, ಇತರೆ 1
  • ಕನಕಪುರ:
  • ಒಟ್ಟು ವಾರ್ಡ್: 31
  • ಬಿಜೆಪಿ 1, ಕಾಂಗ್ರೆಸ್ 26, ಜೆಡಿಎಸ್ 4
  • ಪುರಸಭೆ:
    ಒಟ್ಟು ವಾರ್ಡ್ 23
    ಬಿಜೆಪಿ 13, ಕಾಂಗ್ರೆಸ್ 10
  • ಕಂಪ್ಲಿ:
  • ಬೀರೂರು:
  • ಒಟ್ಟು ವಾರ್ಡ್ 23
  • ಬಿಜೆಪಿ 10, ಕಾಂಗ್ರೆಸ್ 9, ಜೆಡಿಎಸ್ 2, ಪಕ್ಷೇತರ 2
  • ಮಾಗಡಿ:
  • ಒಟ್ಟು ವಾರ್ಡ್ 23
  • ಬಿಜೆಪಿ 1, ಕಾಂಗ್ರೆಸ್ 10, ಜೆಡಿಎಸ್ 12
  • ತಾಲೂಕು ಪಂಚಾಯಿತಿ
  • ಕೂಡ್ಲಿಗಿ:
  • ಒಟ್ಟು ವಾರ್ಡ್ 20
  • ಬಿಜೆಪಿ 7, ಕಾಂಗ್ರೆಸ್ 6, ಜೆಡಿಎಸ್ 4, ಪಕ್ಷೇತರ 3
  • ಕುಂದಗೋಳ
  • ಒಟ್ಟು ವಾರ್ಡ್ 19
  • ಬಿಜೆಪಿ 12, ಕಾಂಗ್ರೆಸ್ 5, ಪಕ್ಷೇತರ 2
  • ಜೋಗ:
  • ಒಟ್ಟು ವಾರ್ಡ್ 11
  • ಬಿಜೆಪಿ 9, ಕಾಂಗ್ರೆಸ್ 1, ಪಕ್ಷೇತರ 1

ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್‍ಗಳ ಪೈಕಿ 386ರಲ್ಲಿ ಕಾಂಗ್ರೆಸ್, 363ರಲ್ಲಿ ಬಿಜೆಪಿ, 233ರಲ್ಲಿ ಜೆಡಿಎಸ್, 475 ಪಕ್ಷೇತರರು ಸೇರಿ ಒಟ್ಟು 1587 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

Last Updated : Nov 14, 2019, 7:18 PM IST

ABOUT THE AUTHOR

...view details