ಕರ್ನಾಟಕ

karnataka

ETV Bharat / state

ಜನತಾ ಕರ್ಫ್ಯೂ Live ಅಪ್ಡೇಟ್ಸ್: ರಾಜ್ಯದ 9 ಜಿಲ್ಲೆಗಳು ಮಾರ್ಚ್​ 31ರವರೆಗೆ ಲಾಕ್​ಡೌನ್​! - karnataka The Janata curfew live

ಜನತಾ ಕರ್ಫ್ಯೂ
ಜನತಾ ಕರ್ಫ್ಯೂ

By

Published : Mar 22, 2020, 11:33 AM IST

Updated : Mar 22, 2020, 9:15 PM IST

21:09 March 22

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತಿಬ್ಬರು ಕೊರೊನಾ ಸೋಂಕಿತರು

  • ಗೌರಿಬಿದನೂರು ತಾಲೂಕಿನ ಅಲಿಪುರದ ಹಿರೇಬಿದನೂರು ಗ್ರಾಮದ ಇಬ್ಬರಿಗೆ ಸೊಂಕು ದೃಢ
  • ತಾಯಿ ಮಗ ಇಬ್ಬರೂ ಮೆಕ್ಕಾದಿಂದ ಹಿಂತಿರುಗಿದ್ದರು
  • ನಿನ್ನೆ ಮಗ ಮತ್ತು ಇಂದು ತಾಯಿಗೆ ಸೊಂಕು ದೃಡ
  • ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್ ಬಿಡುಗಡೆ
  • ಇವರ ಸಂಪರ್ಕದಲ್ಲಿ ಇದ್ದ 22 ಜನರಿಗೆ ತಪಾಸಣೆ

20:11 March 22

ಪ್ರಹ್ಲಾದ್​ ಜೋಶಿಯಿಂದ ಗೌರವ

ಪ್ರಹ್ಲಾದ್​ ಜೋಶಿಯಿಂದ ಗೌರವ
  • ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಕರೆ ನೀಡಿದಂತೆ ಸಾರ್ವಜನಿಕರು ಸಾಮೂಹಿಕವಾಗಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.
  • ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಇಂದು ಸಂಜೆ ದೆಹಲಿ ನಿವಾಸದಲ್ಲಿ ತಮ್ಮ ಪತ್ನಿ ಶ್ರೀಮತಿ ಜ್ಯೋತಿ ಜೋಶಿ, ಹಾಗೂ ಆಪ್ತ ಸಿಬ್ಬಂಸಿಯೊಂದಿಗೆ ಚಪ್ಪಾಳೆ ತಟ್ಟುವ ಮುಲಕ  ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರು ಹಾಗೂ ಅರೋಗ್ಯ ಇಲಾಖೆ ಸಿಬಂದಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.
  • ಹುಬ್ಬಳ್ಳಿಯ ನಿವಾಸದಲ್ಲಿ ವಿಧಾನ‌ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ದಂಪತಿ ಚಪ್ಪಾಳೆ ತಟ್ಟುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಗೌರವ ಸಲ್ಲಿಸಿದರು.

20:07 March 22

  • ಜನತಾ ಕರ್ಫ್ಯೂ ಬಾಗಲಕೋಟೆ ‌ಜಿಲ್ಲೆಯಲ್ಲಿ ಯಶಸ್ಸುಗೊಂಡಿದೆ.
  • ಸಂಜೆ ಸಮಯದಲ್ಲಿ ಹೊರಗೆ ಬಂದು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಬೆಂಬಲ ಸೂಚಿಸಿದರು.

19:16 March 22

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26ಕ್ಕೇರಿಕೆ

  • ರಾಜ್ಯದಲ್ಲಿ ಇಂದು ಹೊಸ 6 ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಒಟ್ಟು ಕೊರೊನಾ ಬಾಧಿತರ ಸಂಖ್ಯೆ 26ಕ್ಕೇರಿಕೆ
  • ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 17ಕ್ಕೇರಿಕೆ
  • ಉತ್ತರ ಕನ್ನಡದಲ್ಲಿ ಪತ್ತೆಯಾದ ಹೊಸ ಸೋಂಕಿತನಿಗೆ ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

18:52 March 22

ಸುಮಲತಾ ಅಂಬರೀಶ್, ಶ್ರೀಕಂಠೇಗೌಡ, ನಟ ಅನಿರುದ್ಧ್​ರಿಂದ ಚಪ್ಪಾಳೆ

ಪ್ರಧಾನಿ ಮನವಿಗೆ ಓಗೊಟ್ಟು ಸಂಸದೆ ಸುಮಲತಾ ಅಂಬರೀಶ್, ಜೆಡಿಎಸ್ ಎಂಎಲ್‌ಸಿ‌ ಶ್ರೀಕಂಠೇಗೌಡ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ನಟ ಅನಿರುದ್ಧ ಹಾಗೂ ಕುಟುಂಬ ಸದಸ್ಯರು ಚಪ್ಪಾಳೆ ಹೊಡೆಯುವ ಮೂಲಕ ಧನ್ಯವಾದ ಅರ್ಪಿಸಿದರು.

18:52 March 22

ಕಲಬುರಗಿ, ತುಮಕೂರು, ಹಾಸನ, ಹುಬ್ಬಳ್ಳಿಯ ಜನತೆಯಿಂದ ಚಪ್ಪಾಳೆ ಗೌರವ

  • ಪ್ರಾಣದ ಹಂಗು ತೊರೆದು ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್ ಹಾಗೂ ಕೊರೊನಾ ಕೊಲ್ಲಲು ಹೋರಾಡುತ್ತಿದ್ದವರಿಗೆ ಕಲಬುರಗಿ ಜನತೆ ಚಪ್ಪಾಳೆ, ತಮಟೆ ಬಾರಿಸಿ ಕೃತಜ್ಞತೆ ಸಲ್ಲಿಸಿದ್ರು.
  • ಚಪ್ಪಾಳೆ ತಟ್ಟುವ ಮೂಲಕ ತುಮಕೂರಿಗರಿಂದ ಕೃತಜ್ಞತೆ
  • ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದ ಜನತಾ ಕರ್ಪೂ‌ಗೆ ಜಿಲ್ಲೆಯಲ್ಲಿ ಯಶಸ್ವಿಯಾದ ಹಿನ್ನೆಲೆ ವೈದ್ಯರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿದಂತೆ ಕೊರೊನಾ ತಡೆಗೆ ಸಹಕಾರ ನೀಡಿದವರಿಗೆ ಹಾಸನ ಜಿಲ್ಲೆಯ ಜನತೆ ಚಪ್ಪಾಳೆ ತಟ್ಟುವ ಗೌರವಿಸಿದ್ದಾರೆ.
  • ವೈದ್ಯರು, ಪೊಲೀಸರು, ಸೈನಿಕರು, ಪತ್ರಕರ್ತರು ಮತ್ತು ಪೌರಕಾರ್ಮಿಕರಿಗೆ ಹುಬ್ಬಳ್ಳಿಯ ಕೆಎಸ್​ಆರ್​ಟಿಸಿ ಸಿಬ್ಬಂದಿ ವರ್ಗದವರು ನಗರದ ಹಳೆ ಬಸ್ ನಿಲ್ದಾಣದಲ್ಲಿ ಚಪ್ಪಾಳೆ ತಟ್ಟಿ‌ ಗೌರವ ಸಮರ್ಪಣೆ ಮಾಡಿದರು.

18:51 March 22

ಗದಗ, ಪುತ್ತೂರಿನಲ್ಲಿ ಜನತೆಯಿಂದ ಚಪ್ಪಾಳೆ

  • ಮುದ್ರಣಕಾಶಿ ಗದಗದಲ್ಲಿ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದ ಜನರು‌
  • ಕೊರೊನಾ ವೈರಸ್ ಸೊಂಕು ತಡೆಗಟ್ಟುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಜನತಾ ಕರ್ಫ್ಯೂ ಕರೆಗೆ ಬೆಂಬಲಿಸಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಕುಟುಂಬವು ಚಪ್ಪಾಳೆ ಸಂಭ್ರಮಿಸಿ ಧನ್ಯವಾದ ಹೇಳಿದರು
  • ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮೋದಿಯವರ ಆಶಯದಂತೆ ಸಂಜೆ 5 ಗಂಟೆ ಹೊತ್ತಿಗೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಪುರದ ಎದುರು ಜಾಗಟೆ ಸದ್ದಿನೊಂದಿಗೆ, ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಲಾಯಿತು.

18:51 March 22

ಚಿಕ್ಕಬಳ್ಳಾಪುರ, ಹಾವೇರಿ, ಹಾನಗಲ್ ಜನತೆಯಿಂದಲೂ ಚಪ್ಪಾಳೆ ಗೌರವ

  • ಚಪ್ಪಳೆ ಹೊಡೆದು ಜನತಾ ಕರ್ಫ್ಯೂಗೆ ಸಾಥ್ ನೀಡಿದ ಗುಡಿಬಂಡೆ ತಾಲೂಕು ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗ
  • ಚಿಕ್ಕಬಳ್ಳಾಪುರದಲ್ಲೂ ಸಾರ್ವಜನಿಕರಿಂದ ಚಪ್ಪಾಳೆ ತಟ್ಟಿ ಗೌರವ ಸಲ್ಲಿಕೆ
  • ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಳ್ಳಿಗಳು ಸೇರಿದಂತೆ ನಗರದ ದತ್ತಾತ್ರೆಯ ದೇವಸ್ಥಾನದಲ್ಲಿ ವೈರಸ್ ತಡಗಟ್ಟಲು ಶ್ರಮಿಸುತ್ತಿರುವ ವೈದ್ಯರು ಹಾಗೂ ಪೊಲೀಸ್ ಭದ್ರತಾ ಸಿಬ್ಬಂದಿಗಳಿಗೆ ಚಪ್ಪಾಳೆ ತಟ್ಟುವುದರ ಮೂಲಕ ಧನ್ಯವಾದಗಳನ್ನ ಸಲ್ಲಿಸಿದರು.

17:58 March 22

ಸಿಎಂ ಬಿಎಸ್​ವೈ ಚಪ್ಪಾಳೆ ಗೌರವ

  • ಜನತಾ ಕರ್ಪ್ಯೂ ಬೆಂಬಲಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ನಿವಾಸದ ಎರಡನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿದರು.
  • ಇಡೀ ದಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿಯೇ ಇದ್ದ ಸಿಎಂ
  • ಸಂಜೆ  5 ಗಂಟೆ ಆಗುತ್ತಿದ್ದಂತೆ ಕುಟುಂಬ ಸದಸ್ಯರ ಜೊತೆ ಬಂದು ಭಿತ್ತಿಪತ್ರ ಪ್ರದರ್ಶನ ಮಾಡಿ ಚಪ್ಪಾಳೆ ಹೊಡೆದರು.

17:58 March 22

ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ..‌.

  • ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪತ್ರಿಕೆಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಮರು ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು
  • ಶಿಕ್ಷಣ ಸಚಿವ ಸುರೇಶ್‌ ಕುಮಾರ್​ಂದ ಸೂಚನೆ

17:53 March 22

ರಾಜ್ಯದಾದ್ಯಂತ ಚಪ್ಪಾಳೆ ಗೌರವ

  • ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಸಿಬ್ಬಂದಿಗೆ ಕರುನಾಡ ಜನತೆಯ ಅಭಿನಂದನೆ
  • ದಾವಣಗೆರೆಯಲ್ಲೂ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ ಜನತೆ.
  • ವಿಜಯಪುರದಲ್ಲೂ ಕೊರೊನಾ ಹೋಗಲಾಡಿಸಲು ಶ್ರಮಿಸುತ್ತಿರುವವರಿಗೆ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.
  • ದಾವಣಗೆರೆಯಲ್ಲಿ ಐದು ನಿಮಿಷಗಳ ಕಾಲ ಚಪ್ಪಾಳೆ
  • ಕೊಡಗು  ಜಿಲ್ಲೆಯಲ್ಲಿ ಚಪ್ಪಾಳೆ ತಟ್ಟಿ, ಪಟಾಕಿ ಸಿಡಿಸಿ, ಕೊರೊನಾ ತಡೆಗೆ ಕೇಂದ್ರ ಸರ್ಕಾರದ ಕರೆಗೆ ಜಿಲ್ಲೆಯ ಜನತೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದರು
  • ಧಾರವಾಡದ ಪ್ರಮುಖ‌ ನಗರದಲ್ಲಿನ ಅಪಾರ್ಟ್​ಮೆಂಟ್​ನಲ್ಲಿನ‌ ಜನರು ಸ್ವಯಂಪ್ರೇರಿತವಾಗಿ ಹೊರಗೆ ಬಂದು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು
  • ಶಿವಮೊಗ್ಗದಲ್ಲೂ ಕೊರೊನಾ ವಿರುದ್ಧ ಯಾವುದೇ ರಜೆ ಇಲ್ಲದೆ ಹೋರಾಡುತ್ತಿರುವ ಪೊಲೀಸರು, ವೈದ್ಯರು, ಪೌರಕಾರ್ಮಿಕರು ಹಾಗೂ ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಎಲ್ಲರೂ ಐದು ನಿಮಿಷ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು
  • ಬಳ್ಳಾರಿಯಲ್ಲಿ ಚಪ್ಪಾಳೆ ತಟ್ಟಿ ಪೊಲೀಸರು, ಸಿಬ್ಬಂದಿ, ವೈದ್ಯರು, ಪೌರ ಕಾರ್ಮಿಕರು ಹಾಗೂ  ಪತ್ರಕರ್ತರಿಗೆ ಅಭಿನಂದನೆ ಸಲ್ಲಿಕೆ
  • ಕೊರೊನಾ ಸೋಂಕಿನ ವಿರುದ್ಧ ತಮ್ಮ ಪ್ರಾಣವನ್ನು ಲೆಕ್ಕಿಸದೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಮಂಗಳೂರಿನ ಜನತೆ ತಮ್ಮ ಬಾಲ್ಕನಿಗಳನ್ನು ಏರಿ ಚಪ್ಪಾಳೆ ತಟ್ಟಿ ನಮನ ಸಲ್ಲಿಸಿದರು.
  • ಕೊರೊನಾ ಸೋಂಕಿತರ ಸೇವೆ ಮಾಡುತ್ತಿರುವ ವೈದ್ಯರಿಗೆ, ಶುಶ್ರೂಶಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಕೊಪ್ಪಳದ ಜನರು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು.
  • ಉತ್ತರಕನ್ನಡ ಜಿಲ್ಲೆಯಲ್ಲಿ ಜನತಾ ಕರ್ಪ್ಯೂ ಯಶಸ್ವಿಯಾದ ಬೆನ್ನಲ್ಲೆ ದೇಶದಾದ್ಯಂತ ಕೊರೊನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು, ಶೂಶ್ರುಕಿಯರು, ಪೌರಕಾರ್ಮಿಕರು, ಪೊಲೀಸರಿಗೆ ಜನರು ಗಂಟೆ ಭಾರಿಸಿ, ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
  • ದೇಶದೆಲ್ಲೆಡೆ ಕೊರೊನಾ ಹೆಚ್ಚಿರುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ತಮ್ಮ ಜೀವದ ಹಂಗು ತೊರೆದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕುಂದಾನಗರಿ ಜನತೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.

17:39 March 22

ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಸಿಬ್ಬಂದಿಗೆ ಕರುನಾಡ ಜನತೆಯ ಅಭಿನಂದನೆ

ಕರುನಾಡ ಜನತೆಯಿಂಧ ಚಪ್ಪಾಳೆಯ ಗೌರವ
  • ಬೆಂಗಳೂರು ನಗರದ ಚಿಕ್ಕಪೇಟೆ, ಕಾಟನ್ ಪೇಟೆ, ಅಕ್ಕಿ ಪೇಟೆ ಸುತ್ತಮುತ್ತಲಿನ ನಿವಾಸಿಗಳು 4- 45ಕ್ಕೆ ಚಪ್ಪಾಳೆ ತಟ್ಟಿ ಕೊರೊನಾ ವಿರುದ್ಧ ಹೊರಾಡುತ್ತಿರುವ ವೈದ್ಯರು, ಪೊಲೀಸರು, ಪೌರಕಾರ್ಮಿಕರನ್ನು ಅಭಿನಂದಿಸಿದರು.
  • ತಟ್ಟೆ, ಸೌಟು ಹಿಡಿದು ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟಿದರು.
  • ಕೋರಮಂಗಲದ ಹಲವು ಬಡಾವಣೆಗಳಲ್ಲಿ ಸ್ಥಳೀಯರು ಸಂಜೆವರೆಗೂ ಮನೆಯೊಳಗಿದ್ದರು.
  • 5 ಗಂಟೆಯಾಗುತ್ತಿದ್ದಂತೆ ಹೊರಬಂದು ಚಪ್ಪಾಳೆ ಹೊಡೆಯುವ ಮೂಲಕ ವೈದ್ಯರು ಹಾಗೂ ಕೊರೊನಾ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರಿಗೆ ಚಪ್ಪಾಳೆ ಮೂಲಕ ಧನ್ಯವಾದ ಅರ್ಪಿಸಿದರು.
  • ಅಥಣಿ ಜನರಿಂದಲೂ ಚಪ್ಪಾಳೆ ಮೂಲಕ ಕೃತಜ್ಞತೆ
  • ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಜನತೆಯಿಂದ ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದನೆ
  • ಚಾಮರಾಜನಗರದಲ್ಲೂ ವೈದ್ಯರು, ದಾದಿಯರಿಗೆ ಚಪ್ಪಾಳೆಯ ಗೌರವ

17:17 March 22

ವೈದ್ಯರಿಗೆ ಅಭಿನಂದನೆ

  • ಚಪ್ಪಳೆ ಹೊಡೆದು ಜನತಾ ಕರ್ಫ್ಯೂಗೆ ಸಾಥ್ ನೀಡಿದ ಸಾಂಸ್ಕೃತಿಕ ನಗರಿ ಜನತೆ
  • ಮನೆಗಳ ಮುಂದೆ ಚಪ್ಪಳೆ ತಟ್ಟಿ ವೈದ್ಯರು, ಪೊಲೀಸರು, ಪೌರಕಾರ್ಮಿಕರಿಗೆ ಅಭಿನಂದನೆ

17:12 March 22

ವೈದ್ಯರಿಗೆ ಚಪ್ಪಾಳೆ ಹೊಡೆದು ಗೌರವ ಸಲ್ಲಿಸಿದ ಪೊಲೀಸ್ ಕಮೀಷನರ್

  • ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಚಪ್ಪಾಳೆ ಮೂಲಕ ಗೌರವ
  • ಕನ್ನಿಂಗ್ ಹ್ಯಾಮ್​ನಲ್ಲಿರುವ ಪೊಲೀಸ್ ಕಮೀಷನರ್ ಕಚೇರಿ
  • ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ರಿಂದ ಗೌರವ ಸಲ್ಲಿಕೆ
  • ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಾಥ್​

16:46 March 22

ಜನತಾ ಕರ್ಪ್ಯೂ ಕರೆಗೆ ಗಣಿಜಿಲ್ಲೆ ಸ್ತಬ್ಧ!

ಗಣಿಜಿಲ್ಲೆ ಸ್ತಬ್ಧ
  • ಜನತಾ ಕರ್ಪ್ಯೂಗೆ ಗಣಿ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ
  • ಇಂದು ಬೆಳಿಗ್ಗೆಯಿಂದಲೇ ರಸ್ತೆಗಳೆಲ್ಲಾ ಖಾಲಿ ಖಾಲಿ
  • ತರಕಾರಿ, ಹಾಲು, ನಾನ್ ವೆಜ್ ಅಂಗಡಿಗಳು ಕೂಡ ಸಂಪೂರ್ಣ ಬಂದ್
  • ಮುಂಜಾನೆಯಿಂದಲೂ ಜನಜಂಗುಳಿ ಇಲ್ಲದೆ ಬಿಕೋ ಎನ್ನುತ್ತಿರುವ ರಸ್ತೆಗಳು

16:37 March 22

ಶಿವಮೊಗ್ಗ ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ

  • ಶಿವಮೊಗ್ಗ ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತ
  • ಬಣಗುಡುತ್ತಿರುವ ನಗರದ ಪ್ರಮುಖ ರಸ್ತೆಗಳು
  • ಜನ ಹಾಗೂ ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿರುವ ರಸ್ತೆಗಳು
  • ಕೆಎಸ್ಆರ್​ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲು ನಿಲ್ದಾಣ ಸ್ತಬ್ಧ

16:14 March 22

ಪ್ರಧಾನಿ ಕರೆಗೆ ಧಾರವಾಡ ಸಂಪೂರ್ಣ ಸ್ತಬ್ಧ

ಧಾರವಾಡ ಸಂಪೂರ್ಣ ಸ್ತಬ್ಧ
  • ಜನನಿಬಿಡ ರಸ್ತೆಗಳೆಲ್ಲ ಖಾಲಿ ಖಾಲಿ
  • ಜ್ಯೂಬ್ಲಿ ಸರ್ಕಲ್​, ಬೆಳಗಾವಿ ರಸ್ತೆ, ಸೂಪರ್​ ಮಾರುಕಟ್ಟೆ, ವಿಶ್ವವಿದ್ಯಾಲಯ ರಸ್ತೆ
  • ಸುಭಾಷ್​ ರಸ್ತೆ, ಮಾಳಾಪುರ, ಸೈದಾಪುರ, ಕೋಟೆ ಪ್ರದೇಶ ಸೇರಿದಂತೆ ಧಾರವಾಡ ಸಂಪೂರ್ಣ ಸ್ತಬ್ಧ

16:06 March 22

ಸಕಲೇಶಪುರದಲ್ಲೂ ಬಂದ್​ಗೆ ಸಂಪೂರ್ಣ ಬೆಂಬಲ

ಸಕಲೇಶಪುರದಲ್ಲೂ ಬಂದ್​ಗೆ ಬೆಂಬಲ
  • ಜನತಾ ಕರ್ಫ್ಯೂಗೆ ಸಕಲೇಶಪುರ ಜನತೆಯಿಂದ ಬೆಂಬಲ
  • ಬಂದ್​ನಿಂದ ಬಿಕೋ ಎನ್ನುತ್ತಿರುವ ಪಟ್ಟಣ
  • ಮುಂಜಾನೆಯಿಂದಲೇ ಎಲ್ಲಾ ಅಂಗಡಿ-ಮುಂಗಟ್ಟುಗಳು, ಹೊಟೇಲ್‌ಗಳು, ಬೇಕರಿಗಳು, ದಿನಸಿ ಅಂಗಡಿಗಳು ಬಂದ್​
  • ಮೆಡಿಕಲ್ ಷಾಪ್‌ಗಳು, ಖಾಸಗಿ ಕ್ಲಿನಿಕ್‌ಗಳು, ಪೆಟ್ರೋಲ್ ಬಂಕ್‌ಗಳು ಮಾತ್ರ ಓಪನ್​

15:49 March 22

ಕೋಲಾರದಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟ

  • ಜನತಾ ಕರ್ಫ್ಯೂ ಹಿನ್ನೆಲೆ, ಕೋಲಾರದಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟ.
  • ಕೋಲಾರ ಹೊರ ವಲಯದ ಟಮಕ ಬಳಿ ಬೈಕ್​ನಲ್ಲೇ ಮದ್ಯ ಮಾರುತ್ತಿರುವ ವ್ಯಕ್ತಿ.
  • ಸರ್ಕಾರದ ಆದೇಶದಂತೆ ಮದ್ಯದಂಗಡಿಗಳು ಬಂದ್​ಗೆ ಸೂಚನೆ.
  • ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ದುಬಾರಿ ಬೆಲೆಗೆ ಮಾರಾಟ.
  • ಕೆಲವೆಡೆ ಬಾರ್ ಮಾಲೀಕರ ಕುಮ್ಮಕ್ಕಿನಿಂದಲೆ ಹಿಂಬದಿ ಬಾಗಿಲು ಮೂಲಕ ಮದ್ಯ ಮಾರಾಟ.
  • ಕೆಲವೆಡೆ ಅಕ್ರಮವಾಗಿ ಚಿಲ್ಲರೆ ಅಂಗಡಿಗಳಲ್ಲಿಯೇ ಮದ್ಯ ಮರಾಟ

15:43 March 22

ರಾಜ್ಯದ 9 ಜಿಲ್ಲೆಗಳು ಮಾರ್ಚ್​ 31ರವರೆಗೆ ಲಾಕ್​ಡೌನ್​!

  • ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ.  
  • ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಕೊಡಗು, ಕಲಬುರಗಿ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾರ್ಚ್ 31ವರೆಗೆ ಲಾಕ್ ಡೌನ್ ಮುಂದುವರಿಕೆ.  
  • ಈ 9 ಜಿಲ್ಲೆಗಳಲ್ಲಿ ಸಾರಿಗೆ ಸೇರಿದಂತೆ ಯಾವುದೇ ವ್ಯವಸ್ಥೆ ಇರುವುದಿಲ್ಲ. 
  • ಈ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ.  
  • ನಾಳೆ ವಿಧಾನಮಂಡಲದ ಅಧಿವೇಶನ ಮುಂದುವರೆಯಲಿದೆ.
  • ರಾಜ್ಯದಲ್ಲಿ ‌ನಾಳೆಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದು.
  • ಎಸಿ ಬಸ್ ಸೇವೆ 31ರವರೆಗೆ ಇಲ್ಲ.
  • ಇಂದು ರಾತ್ರಿ 9 ರಿಂದ 11 ರವರೆಗೆ 144 ಸೆಕ್ಷನ್ ಜಾರಿ. 

15:16 March 22

ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ
  • ಮಾರ್ಚ್ 31 ರ ವರೆಗೆ ಶಾಲಾ ಶಿಕ್ಷಕರಿಗೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ
  • ಮಾರ್ಚ್ 31 ರ ವರೆಗೆ ರಜೆ ಘೋಷಣೆ ಮಾಡಿದ್ದು, ಖಾಸಗಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೂ ಇದು ಅನ್ವಯ
  • ಮನೆಯಿಂದಲೇ ಶಾಲಾ ಕೆಲಸ ನಿರ್ವಹಿಸುವಂತೆ ಸೂಚನೆ

14:59 March 22

ರಾಜ್ಯದ 6 ಜಿಲ್ಲೆಗಳು ಮಾರ್ಚ್ 31ರ ವರಗೆ ಲಾಕ್ ಡೌನ್

6 ಜಿಲ್ಲೆಗಳ ಲಾಕ್ ಡೌನ್ ಆದೇಶ ಪ್ರತಿ
  • ಕೊರೊನಾ ಸೋಂಕು ಹೆಚ್ಚು ಕಾಣಿಸಿಕೊಂಡಿರುವ ರಾಜ್ಯದ 6 ಜಿಲ್ಲೆಗಳು ಮಾರ್ಚ್ 31ರ ವರಗೆ ಲಾಕ್ ಡೌನ್
  • ಬೆಂಗಳೂರು, ಕಲಬುರಗಿ, ಕೊಡಗು, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಮೈಸೂರು ಜಿಲ್ಲೆಗಳು ಸಂಪೂರ್ಣ ಲಾಕ್ ಡೌನ್
  • ವಿಧಾನಸಭಾ ಅಧಿವೇಶನ ಸೋಮವಾರ ಕೊನೆಗೊಳ್ಳುವ ಸಾಧ್ಯತೆ
  • ಶಾಲಾ ಶಿಕ್ಷಕರಿಗೂ ಮಾರ್ಚ್ 31ರ ವರೆಗೆ ರಜೆ ಘೋಷಣೆ
  • ಮೆಟ್ರೋ ಸಂಚಾರ ಮಾರ್ಚ್ 31ರ ವರಗೆ ಸ್ಥಗಿತ

14:56 March 22

  • ‌ಕೊರೊನಾ ಭೀತಿ ಹಿನ್ನೆಲೆ ಮಾರ್ಚ್ 31 ರ ವರೆಗೆ ಅಂತರರಾಜ್ಯ ಸಾರಿಗೆ ಸಂಚಾರ ಸ್ಥಗಿತ
  • ಆಂಧ್ರಪ್ರದೇಶ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಗೆ ಸಾರಿಗೆ ಸಂಚಾರ ಬಂದ್
  • 1,076 ಅಂತರ ರಾಜ್ಯ ಬಸ್ ಸಂಚಾರ ಸ್ಥಗಿತ
  • ನಾಳೆಯಿಂದ ಮಾರ್ಚ್ 31ರ ವರಿಗೆ ಅಂತರರಾಜ್ಯ ಸಾರಿಗೆ ಸೇವೆ ಸ್ಥಗಿತ

14:51 March 22

  • ಕೊರೊನಾ ಮುಂಜಾಗ್ರತಾ ಕ್ರಮ ಮತ್ತು ಜನತಾ ಕರ್ಫ್ಯೂ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ
  • ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಯಲ್ಲಿ ಸಭೆ
  • ಎರಡನೇ ಬಾರಿಗೆ ಸಚಿವರು ಮತ್ತು ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಬಿಎಸ್​ವೈ
  • ಕೊರೊನಾ ನಿಯಂತ್ರಣ, ಮಾರ್ಗಸೂಚಿ ಅನುಷ್ಠಾನ ಇತರೆ ವಿಷಯಗಳ ಕುರಿತು ಚರ್ಚೆ
  • ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಕೂಡ  ಸಭೆಯಲ್ಲಿ ಭಾಗಿ

14:20 March 22

ಡ್ರೋಣ್ ಕ್ಯಾಮೆರಾದಲ್ಲಿ ಸೆರೆಸಿಕ್ಕ ಜನತಾ ಕರ್ಫ್ಯೂ ದೃಶ್ಯ
  • ದಾವಣಗೆರೆಯಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
  • ಡ್ರೋಣ್ ಕ್ಯಾಮೆರಾದಲ್ಲಿ ಸೆರೆಸಿಕ್ಕ ಜನತಾ ಕರ್ಫ್ಯೂ ದೃಶ್ಯ

14:11 March 22

ರಸ್ತೆ ತಿರುವಿನಲ್ಲಿ ಕಾಣಿಸಿಕೊಂಡ ಚಿರತೆ
  • ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಜನತಾ ಕರ್ಫ್ಯೂಗೆ ಬೆಂಬಲ
  • ಅರಕಲಗೂಡಿನಲ್ಲಿ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ರಸ್ತೆಗೆ ಇಳಿದ ಚಿರತೆ
  • ಬರಗೂರು-ಹುಲಿಕಲ್ ರಸ್ತೆ ತಿರುವಿನಲ್ಲಿ ಕಾಣಿಸಿಕೊಂಡ ಚಿರತೆ

14:03 March 22

ಚಿಕ್ಕಬಳ್ಳಾಪುರದಲ್ಲಿ ಭರ್ಜರಿ ನಾಟಿಕೋಳಿ ವ್ಯಾಪಾರ
  • ಚಿಕ್ಕಬಳ್ಳಾಪುರದಲ್ಲಿ ಜನತಾ ಕರ್ಪ್ಯೂ ನಡುವೆಯೇ ನಡೆದ ಭರ್ಜರಿ ನಾಟಿಕೋಳಿ ವ್ಯಾಪಾರ
  • ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ
  • ಮಾಂಸ ಪ್ರಿಯರಿಗೆ ತಟ್ಟದ ಜನತಾ ಕರ್ಪ್ಯೂ
  • ಜಿಲ್ಲಾಧಿಕಾರಿ ಆದೇಶ ಧಿಕ್ಕರಿಸಿದ ಕೊಡದವಾಡಿ ಗ್ರಾಮಸ್ಥರು

13:53 March 22

ವಾಷ್​ ಬೇಷನ್ ಉದ್ಘಾಟಿಸಿದ ಸಂಸದೆ ಶೋಭಾ ಕರಂದ್ಲಾಜೆ
  • ಉಡುಪಿ ರೈಲ್ವೆ ನಿಲ್ದಾಣದಲ್ಲಿ ವಾಷ್​ ಬೇಷನ್ ಉದ್ಘಾಟಿಸಿದ ಸಂಸದೆ ಶೋಭಾ ಕರಂದ್ಲಾಜೆ
  • ಮಾಸ್ಕ ಧರಿಸಿ ಕೆಲಸ ಮಾಡುವಂತೆ ಶೋಭಾ ಕರಂದ್ಲಾಜೆ ಸೂಚನೆ
  • ಉಡುಪಿ ಜಿಲ್ಲೆಗೆ ಕೊರೊನಾ ವೈರಸ್​ ಹರಡದಂತೆ ಅಗತ್ಯ ಕ್ರಮ

13:33 March 22

ಡಿಸಿಪಿ‌‌ ಇಶಾಪಂತ್
  • ಬೆಂಗಳೂರಿಗೆ ಬಂದ ಎಲ್ಲಾ ವಿದೇಶಿಯರಿಗೂ ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ಡಿಸಿಪಿ‌‌ ಇಶಾಪಂತ್ ನೋಟಿಸ್
  • ಬೆಂಗಳೂರಿಗೆ ಈವರೆಗೂ 42 ಸಾವಿರ ವಿದೇಶಿಯರು ಬಂದು ಹೋಗಿದ್ದಾರೆ‌‌
  • ನಗರದಲ್ಲಿ ವಾಸ್ತವ್ಯ ಹೂಡಿದವರ ಸಂಖ್ಯೆ 30 ಸಾವಿರ
  • ವಿದೇಶದಿಂದ ಬಂದಿರುವ ಪ್ರಯಾಣಿಕರ ಕೈ ಗೆ ಸೀಲ್ ಹಾಕಿ 14 ದಿನಗಳ ಕಾಲ ಗೃಹಬಂಧನದಲ್ಲಿ ಇರುವಂತೆ ತಾಕೀತು
  • ವಿದೇಶಿಯರು ನೆಲೆಸಿರುವ ಪ್ರದೇಶಗಳಿಗೆ ವಿಶೇಷ ತಂಡ ರಚಿಸಿ, ಪ್ರತ್ಯೇಕ ನಿಗಾ ಘಟಕ ತೆರೆಯಲಾಗುವುದು ಎಂದು ತಿಳಿಸಿದ ಇಶಾಪಂತ್

13:28 March 22

  • ಜನತಾ ಕರ್ಪ್ಯೂ ನಡುವೆಯೂ ನಡೆದ ಮದುವೆ
  • ನೆಲಮಂಗಲದ ಗಾಣಿಗರ ಸಮುದಾಯ ಭವನದಲ್ಲಿ ನಡೆದ ಮದುವೆ
  • ಜನರಿಲ್ಲದೆ ವ್ಯರ್ಥವಾದ ಮದುವೆ ಅಡುಗೆ

13:23 March 22

ಆರೋಗ್ಯ ಇಲಾಖೆಗೆ ಚಪ್ಪಾಳೆ ಮೂಲಕ ಗೌರವ

ಚಪ್ಪಾಳೆ ತಟ್ಟಲು ಸಿದ್ಧತೆ
  • ಪ್ರಧಾನಿ ಸಲಹೆಯಂತೆ ಸಂಜೆ ಚಪ್ಪಾಳೆ ತಟ್ಟಲು ಮುಂಜಾನೆಯಿಂದಲೇ ಪ್ರಾಕ್ಟೀಸ್
  • ಚಪ್ಪಾಳೆ ಮೂಲಕ ಸೋಂಕು ನಿವಾರಣೆಗೆ ಸಹಕರಿಸುತ್ತಿರುವ ವೈದ್ಯರು, ಪೊಲೀಸ್ ಇಲಾಖೆಗೆ ಗೌರವ
  • ಸಂಜೆ  ಐದು ಗಂಟೆಗೆ ತಮ್ಮ ತಮ್ಮ ಮನೆಯಲ್ಲಿಯೇ ಚಪ್ಪಾಳೆ ತಟ್ಟಲು ಸಿದ್ಧತೆ

13:17 March 22

ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್
  • ಇಂದಿನಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್
  • ಇಂದು ಬೆಂಗಳೂರಿಗೆ ದುಬೈನಿಂದ ಕೊನೆಯದಾಗಿ ಅಂತರಾಷ್ಟ್ರೀಯ ಎಮರೈಟ್ಸ್  ವಿಮಾನ ಆಗಮಿಸಿದ್ದು196 ಜನ ಪ್ರಯಾಣಿಕರನ್ನು ಆಕಾಶ್ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಲಾಗಿದೆ
  • ಕೊರೊನಾ ವೈರಸ್ ಹತೋಟಿಗಾಗಿ ವಿಮಾನಗಳ ಹಾರಾಟ ಬಂದ್

13:10 March 22

  • ಜನತಾ ಕರ್ಫ್ಯೂ: ಚರ್ಚ್​ಗಳಲ್ಲಿ ಇಂದಿನಿಂದ ಆನ್ ಲೈನ್ ಪ್ರಾರ್ಥನೆ
  • ಮಸೀದಿ, ಮಂದಿರ, ಚರ್ಚ್​ಗಳಲ್ಲಿ ಪೂಜೆ ಪುನಸ್ಕಾರ, ಪ್ರಾರ್ಥನೆಗೆ ಬ್ರೇಕ್ ಹಾಕಲಾಗಿದ್ದು ಇಂದಿನಿಂದ ಆನ್​ಲೈನ್ ಮೂಲಕ ಲೈವ್ ಪ್ರಾರ್ಥನೆ ನಡೆಸಲಾಗುತ್ತಿದೆ
  • ಇಂದು ಸಂಜೆ 5 ಗಂಟೆಗೆ ಎಲ್ಲಾ ಚರ್ಚ್​ಗಳಲ್ಲಿ ಗಂಟೆ ಬಾರಿಸಲು ಸೂಚನೆ

13:03 March 22

6 ಜನರಿಗೆ ಕೊರೊನಾ ಸೋಂಕಿನ ಶಂಕೆ

  • ದುಬೈನಿಂದ ಕನ್ನಡಿಗರನ್ನು ಕರೆತಂದ ರಾಜ್ಯ ಸರ್ಕಾರ
  • ದುಬೈನಲ್ಲಿದ್ದ 195 ಮಂದಿಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ
  • ಈ ಕುರಿತು ಟ್ವೀಟ್​ ಮಾಡಿದ ಶ್ರೀರಾಮುಲು
  • 6 ಜನರಿಗೆ ಕೊರೊನಾ ಸೋಂಕಿನ ಶಂಕೆ
  • ಬೆಂಗಳೂರಿನ ಆಕಾಶ್ ವೈದ್ಯಕೀಯ ಸಂಸ್ಥೆಯಲ್ಲಿ ಪ್ರತ್ಯೇಕಿಸಲ್ಪಟ್ಟ ವಾರ್ಡ್​ನಲ್ಲಿ ಚಿಕಿತ್ಸೆ

12:54 March 22

ಕೋವಿಡ್ -19 ಭೀತಿ: ಫೋಸ್ಟ್ ಆಫೀಸ್​ಗಳು ಬಂದ್

ಬೆಂಗಳೂರು ಪಶ್ಚಿಮ ವಿಭಾಗದ 20 ಅಂಚೆ ಕಚೇರಿ ಮುಚ್ಚುವಂತೆ ಆದೇಶ
  • ಕೊರೊನಾ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಅಂಚೆ ಇಲಾಖೆ
  • ಮಾರ್ಚ್ 23 ರಿಂದ ಏಪ್ರಿಲ್ 4 ರ ವರೆಗೆ ಹಲವು ಪೋಸ್ಟ್ ಆಫೀಸ್ ಬಂದ್​
  • ಬೆಂಗಳೂರು ಪಶ್ಚಿಮ ವಿಭಾಗದ 20 ಅಂಚೆ ಕಚೇರಿ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ

12:43 March 22

ಬೆಂಗಳೂರಿನ ಎಲ್ಲಾ ಚರ್ಚ್​ಗಳು ಕ್ಲೋಸ್
  • ಜನತಾ ಕರ್ಫ್ಯೂಗೆ ಬೆಂಬಲಿಸಿ ಪ್ರಾರ್ಥನೆ ಸ್ಥಗಿತ ಮಾಡಿದ ಕ್ರೈಸ್ತರು
  • ಕರ್ಫ್ಯೂ ಹಿನ್ನೆಲೆ ಬೆಂಗಳೂರಿನ ಎಲ್ಲಾ ಚರ್ಚ್​ಗಳು ಕ್ಲೋಸ್
  • ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಕ್ರೈಸ್ತ ಧರ್ಮದ ಬಿಷಪ್ ಬೆಂಜಮಿನ್ ಕರೆ
  • ಕೊರೊನಾ ಸೋಂಕು ನಿರ್ಮೂಲನೆಗೆ ವಿಶೇಷ ಪ್ರಾರ್ಥನೆ

12:36 March 22

ರಸ್ತೆಯಲ್ಲೇ ಕುಳಿತು ಅಳಲು ತೊಡಿಕೊಂಡ ವ್ಯಕ್ತಿ
  • ಪುಟ್ಟ ಪರ್ತಿಯಿಂದ ಬಂದ ವ್ಯಕ್ತಿಗೆ ರೂಂ ಕೊಡದೆ ಸತಾಯಿಸಿದ ಹೋಟೆಲ್ ಮಾಲೀಕರು
  • ರಸ್ತೆಯಲ್ಲೇ ಕುಳಿತು ಅಳಲು ತೊಡಿಕೊಂಡ ವ್ಯಕ್ತಿ
  • ವ್ಯಕ್ತಿಯನ್ನು ಕಂಡು ಭಯಭೀತರಾಗಿ ಜನ
  • ವ್ಯಕ್ತಿಯನ್ನು ವಶಕ್ಕೆ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ

12:27 March 22

ಮಹಾತ್ಮ ಗಾಂಧಿ ರಸ್ತೆ
  • ಜನತಾ ಕರ್ಫ್ಯೂಗೆ ಬೆಂಗಳೂರಿಗರಿಂದ ಭರ್ಜರಿ ಬೆಂಬಲ
  • ಜನ ರಹಿತವಾಗಿದೆ ಮಹಾತ್ಮ ಗಾಂಧಿ ರಸ್ತೆ
  • ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದ ಮಾರ್ಗ ಖಾಲಿ ಹೊಡೆಯುತ್ತಿದ್ದು ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.

12:27 March 22

12:11 March 22

ಜನತಾ ಕರ್ಫ್ಯೂಗೆ ಮಂಡ್ಯ ಜಿಲ್ಲೆಯ ಜನರ ಬೆಂಬಲ

ಜನತಾ ಕರ್ಫ್ಯೂಗೆ ಮಂಡ್ಯ ಜಿಲ್ಲೆಯ ಜನರ ಬೆಂಬಲ
  • ನಗರ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದ ಜನರಿಂದ ಬೆಂಬಲ
  • ಸಂಪೂರ್ಣ ಬಂದ್ ಆದ  ಮಂಡ್ಯ ಮಾರುಕಟ್ಟೆ
  • ವಿವಿ ರಸ್ತೆ, ನೂರಡಿ ರಸ್ತೆ, ಪೇಟೆಬೀದಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಲ್, ಮಹಾವೀರ ವೃತ್ತ, ವಿವೇಕಾನಂದ ರಸ್ತೆ, ಗುತ್ತಲು ರಸ್ತೆ, ಫ್ಯಾಕ್ಟರಿ ಸರ್ಕಲ್, ಅಂಬೇಡ್ಕರ್ ರಸ್ತೆ, ಕೆ.ಆರ್. ರಸ್ತೆ, ವಿನೋಭ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳು ಬಂದ್​
  • ಬೆಂಗಳೂರು-ಮಂಗಳೂರು ಹೆದ್ದಾರಿ, ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್​

12:10 March 22

  • ಜನತಾ ಕರ್ಫ್ಯೂಗೆ ಸುರಪುರದಲ್ಲಿ ಉತ್ತಮ ಬೆಂಬಲ
  • ದರ್ಬಾರ್ ರಸ್ತೆ, ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ ಮತ್ತು ತರಕಾರಿ ಮಾರುಕಟ್ಟೆ ಸಂಪೂರ್ಣ ಖಾಲಿ ಖಾಲಿ
  • ಮನೆಯಿಂದ ಹೊರಬರದೆ ಜನತಾ ಕರ್ಫ್ಯೂ ಆಚರಿಸುತ್ತಿರುವ ಜನ

12:08 March 22

  • ಸಂಪೂರ್ಣ ಸ್ತಬ್ದವಾದ ಗದಗ ಜಿಲ್ಲೆ
  • ಮಕ್ಕಳನ್ನು ಕೊಡಗಿನ ಸೈನಿಕ ಶಾಲೆಯಿಂದ ಕರೆದುಕೊಂಡು ಹೋಗಲು ಬಂದ ಕೊಪ್ಪಳ ಜಿಲ್ಲೆಯ ಪಾಲಕರ ಪರದಾಟ
  • ಗದಗ ಜಿಲ್ಲೆ ಬಂದ್​ಗೆ ಸಂಪೂರ್ಣ ಬೆಂಬಲ

12:06 March 22

ವಿಮಾನ ನಿಲ್ದಾಣಕ್ಕೂ ತಟ್ಟಿದ ಜನತಾ ಕರ್ಫ್ಯೂ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
  • ವಿಮಾನ ನಿಲ್ದಾಣಕ್ಕೆ ಬರುವ ಬಹುತೇಕ ವಿಮಾನಗಳು ರದ್ದು
  • ವಿಮಾನದಿಂದ ಬಂದ ಪ್ರಯಾಣಿಕರನ್ನು ಆಕಾಶ್ ಆಸ್ಪತ್ರೆಗೆ ಶಿಫ್ಟ್
  • ಸಾರಿಗೆ ವ್ಯವಸ್ಥೆ ಸಿಗುವುದಿಲ್ಲ ಎಂಬ ಕಾರಣಕ್ಕೆ ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಪ್ರಯಾಣಿಕರು

12:05 March 22

  • ಹಾಸನದಲ್ಲಿ ಜನತಾ ಕರ್ಫ್ಯೂಗೆ  ಉತ್ತಮ ಪ್ರತಿಕ್ರಿಯೆ
  • ಕೊರೊನಾ ವೈರಸ್ ವಿರುದ್ಧ ಮುಂದುವರೆದ ಹೋರಾಟ

12:04 March 22

  • ಬಂಟ್ವಾಳ ತಾಲೂಕಿನಲ್ಲಿ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
  • ಖಾಸಗಿ, ಸರ್ಕಾರಿ ಆಸ್ಪತ್ರೆಗಳ ತುರ್ತು ಸೇವೆ ಲಭ್ಯ
  • ಕೆಎಸ್ಆರ್​​ಟಿಸಿ ಸಂಚಾರ ಸಂಪೂರ್ಣ ಬಂದ್
  • ಬಿ.ಸಿ.ರೋಡ್​ ಬಸ್ ನಿಲ್ದಾಣ, ಕೈಕಂಬ, ಬಂಟ್ವಾಳ, ಕಲ್ಲಡ್ಕ, ಮಾಣಿ ಸೇರಿದಂತೆ ಬಹುತೇಕ ಕಡೆ ಸಂಚಾರ ಸ್ಥಗಿತ

12:03 March 22

ಬಾಗಲಕೋಟೆ ಜಿಲ್ಲೆಯಲ್ಲಿ ಬಸ್ ಸಂಚಾರ ಸ್ಥಗಿತ

  • ಬಾಗಲಕೋಟೆ ಜಿಲ್ಲೆಯಲ್ಲಿ ಬಸ್ ಸಂಚಾರ ಸ್ಥಗಿತ
  • ನರೇಂದ್ರ ಮೋದಿ ಮನವಿಗೆ ಸ್ಪಂದಿಸಿದ ಬಾಗಲಕೋಟೆ ಮಂದಿ
  • ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್​

12:01 March 22

ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಬಂದ್​
  • ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಬಂದ್​
  • ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತ
  • ಬಿಕೋ ಎನ್ನುತ್ತಿದೆ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ

12:00 March 22

  • ಗಂಗಾವತಿಯಲ್ಲಿ ಜನತಾ ಕರ್ಫ್ಯೂಗೆ ಬೆಂಬಲ
  • ಮಹಾತ್ಮ ಗಾಂಧಿ, ಮಹಾವೀರ ವೃತ್ತದಲ್ಲಿ ವಹಿವಾಟು ಸಂಪೂರ್ಣ ಸ್ಥಗಿತ
  • ಬಹುತೇಕ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ಚಿಕಿತ್ಸೆ ಸ್ಥಗಿತ

11:59 March 22

ಚಾಮರಾಜನಗರದಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

  • ಚಾಮರಾಜನಗರದಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
  • ಸ್ವಯಂಪ್ರೇರಿತವಾಗಿ ಅಂಗಡಿ‌, ಹೋಟೆಲ್​ಗಳು ಬಂದ್
  • ಬಿಕೋ ಎನ್ನುತ್ತಿರುವ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ
  • ಜನತಾ ಕರ್ಫ್ಯೂಗೆ ವರ್ತಕರ, ವಿವಿಧ ಸಂಘ ಸಂಸ್ಥೆಗಳ,  ಆಟೋ, ಲಾರಿ ಚಾಲಕ ಬೆಂಬಲ

11:57 March 22

  • ವಿದೇಶದಿಂದ ಆಗಮಿಸಿದ್ದ ಧಾರವಾಡ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢ
  • ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ್ದ ವ್ಯಕ್ತಿ
  • ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್  ಸ್ಪಷ್ಟನೆ
  • ಸೋಂಕಿತ ವ್ಯಕ್ತಿಯ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗದ VDRL ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಪ್ರಯೋಗಾಲಯ ವರದಿ ಕೋವಿಡ್ 19 ಪಾಸಿಟಿವ್ ಎಂದು ಬಂದಿದೆ.

11:54 March 22

  • ಬಣಗುಡುತ್ತಿರುವ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣ
  • ಜನತಾ ಕರ್ಫ್ಯೂಗೆ ರೈಲ್ವೆ ಇಲಾಖೆಯಿಂದ ವ್ಯಾಪಾಕ ಬೆಂಬಲ

11:51 March 22

  • ಎಸ್​ಎಸ್​ಎಲ್​ಸಿ ಪರೀಕ್ಷೆ ಮುಂದೂಡಿಕೆ
  • ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟಗೊಳಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ

11:51 March 22

  • ಖಾಲಿ ಖಾಲಿ ಹೊಡೆಯುತ್ತಿರುವ ಬೆಂಗಳೂರಿನ ಎಟಿಎಂಗಳು
  • ಎಟಿಎಂ ಬಳಿ ಸ್ಯಾನಿಟೈಸರ್ ಇಡದ ಅಧಿಕಾರಿಗಳ ವಿರುದ್ಧ ಆಕ್ರೋಶ

11:48 March 22

  • ಜನತಾ ಕರ್ಫ್ಯೂ ಹಿನ್ನಲೆ ಪಾರ್ಕ್ ಹಾಗೂ ಪ್ರವಾಸಿ ತಾಣಗಳಿಗೆ ನಿರ್ಬಂಧ
  • ಬೆಂಗಳೂರಿನ ಸ್ಯಾಂಕಿ ರಸ್ತೆ ಹಾಗೂ ಪಾರ್ಕ್ ಖಾಲಿ ಖಾಲಿ

11:48 March 22

  • ಕಾರವಾರದಲ್ಲಿ ಬೆಳಿಗ್ಗೆಯಿಂದ ಬಂದ್ ವಾತಾವರಣ ನಿರ್ಮಾಣ
  • ಮನೆಯಿಂದ ಯಾರು ಹೊರಬರದಂತೆ ಪೊಲೀಸರಿಂದ ಮನವಿ
  • ನಗರದ ಬಸ್ ನಿಲ್ದಾಣದಲ್ಲಿ ಸಂಚಾರ ಸ್ಥಗಿತ
  • ಜನತಾ ಕರ್ಫ್ಯೂಗೆ ಟೆಂಪೊ, ಆಟೋ ಚಾಲಕರಿಂದ ಬೆಂಬಲ

11:47 March 22

  • ಕರ್ಫ್ಯೂಗೆ ವಾಣಿಜ್ಯ ನಗರಿ ಜನತೆಯಿಂದ ಉತ್ತಮ ಸ್ಪಂದನೆ
  • ಖಾಲಿ‌ಖಾಲಿ ಹೊಡೆಯುತ್ತಿರುವ  ವಾಣಿಜ್ಯ ನಗರಿಯ ರಸ್ತೆಗಳು
  • ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ, ಬಸ್ ಸೇವೆ ಸ್ಥಗಿತ

11:46 March 22

  • ಬೆಂಗಳೂರಿನಲ್ಲಿ ಮುಂಜಾನೆ ವಾಕಿಂಗ್ ಮುಗಿಸಿ ಮನೆಗೆ ತೆರಳಿದ ಜನ
  • ಯೋಗಾಭ್ಯಾಸದ ವೇಳೆ ಚಪ್ಪಾಳೆ ಅಭ್ಯಾಸ
  • ವಾಯುವಿಹಾರ ಮುಗಿಸಿ ಮನೆಗೆ ತೆರಳಿದ ಜನ

11:45 March 22

  • ಜನತಾ ಕರ್ಫ್ಯೂಗೆ ಕೋಟೆನಾಡಿನ ಮಂದಿಯಿಂದ ಉತ್ತಮ ಪ್ರತಿಕ್ರಿಯೆ
  • ಹೊರ ಬರದೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಚಿತ್ರದುರ್ಗದ ಜನ

11:43 March 22

  • ದಾವಣಗೆರೆಯಲ್ಲಿ ಕರ್ಫ್ಯೂಗೆ ಹೋಟೆಲ್ ಉದ್ದಿಮೆದಾರರ, ಖಾಸಗಿ ಬಸ್ ಮಾಲೀಕರ ಸಂಘದಿಂದ ಬೆಂಬಲ
  • ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಿ ಜನತಾ ಕರ್ಫ್ಯೂಗೆ ಬೆಂಬಲ
  • ಎಪಿಎಂಸಿ, ಅಂಗಡಿ ಮುಂಗಟ್ಟು, ಹೋಟೆಲ್, ಜವಳಿ ಉದ್ಯಮ, ದಿನಸಿ ಮಾರುಕಟ್ಟೆ, ವ್ಯಾಪಾರ ವಹಿವಾಟು ಸಹ ಬಂದ್
  • ಸವಿತಾ ಸಮಾಜ, ಪೆಟ್ರೋಲ್ ಬಂಕ್ ಕೂಡ‌ ಬಂದ್‌
  • ದಾವಣಗೆರೆ ಜನರಿಂದ ಜನತಾ ಕರ್ಪ್ಯೂಗೆ ಸಂಪೂರ್ಣ ಬೆಂಬಲ

11:40 March 22

  • ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ ಚಿಕ್ಕೋಡಿ ಜನತೆ
  • ಚಿಕ್ಕೋಡಿ, ಹುಕ್ಕೇರಿ, ಅಥಣಿ, ರಾಯಭಾಗ, ಕಾಗವಾಡ, ನಿಪ್ಪಾಣಿ ಪಟ್ಟಣಗಳು ಸೇರಿದಂತೆ ಪ್ರಮುಖ ನಗರಗಳು ಸಂಪೂರ್ಣ ಬಂದ್​
  • ದೇವಸ್ಥಾನ, ಸಂತೆ, ಮಾರುಕಟ್ಟೆ, ಚಿತ್ರಮಂದಿರ, ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್​

11:40 March 22

  • ಜನತಾ ಕರ್ಫ್ಯೂಗೆ ಕುಂದಾನಗರಿಯಲ್ಲಿ ಅಭೂತಪೂರ್ವ ಬೆಂಬಲ
  • ಸಾರಿಗೆ ಸೇವೆ, ಹೋಟೆಲ್ ಸೇರಿದಂತೆ ಎಲ್ಲವೂ ಬಂದ್​

11:39 March 22

ಕೋಲಾರ ಸಂಪೂರ್ಣ ಸ್ತಬ್ದ

  • ಗಡಿ ಜಿಲ್ಲೆಗೂ ತಟ್ಟಿದ ಜನತಾ ಕರ್ಫ್ಯೂ
  • ಜಿಲ್ಲೆಯ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ದ
  • ಬಸ್ ನಿಲ್ದಾಣದಲ್ಲಿರುವ ಅಂಗಡಿಗಳು ಬಂದ್​

11:35 March 22

  • ಲಾಲ್ ಬಾಗ್ ವೆಸ್ಟ್ ಗೇಟ್ ಸುತ್ತಮುತ್ತ ವಾಹನ ಸಂಚಾರ ಸಂಪೂರ್ಣ ಸ್ಥಗಿತ
  • ಅಂಗಡಿ ಮುಂಗಟ್ಟು, ಹೋಟೆಲ್,ಪೆಟ್ರೋಲ್ ಬಂಕ್ ಬಂದ್​

11:35 March 22

ಜನತಾ ಕರ್ಫ್ಯೂ ಹಿನ್ನೆಲೆ ಬೆಂಗಳೂರಿನಲ್ಲಿ ಹಾಲು ವ್ಯಾಪಾರ ಡಲ್

11:26 March 22

ಜನತಾ ಕರ್ಫ್ಯೂ ಹಿನ್ನೆಲೆ ಬೆಂಗಳೂರಿನಲ್ಲಿ ಹಾಲು ವ್ಯಾಪಾರ ಡಲ್

ಬೆಂಗಳೂರು: ಜನತಾ ಕರ್ಫ್ಯೂಗೆ ಬೆಂಗಳೂರು ಜನತೆ ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದ್ದಾರೆ. ಅಗತ್ಯ ಸಾಮಾಗ್ರಿಯಾದ ಹಾಲು ಮಾರಾಟ ಎಂದಿನಂತೆ ನಡೆಯಿತು. ಆದ್ರೆ ವ್ಯಾಪಾರ ಡಲ್ ಆಗಿದ್ದು 50 % ರಷ್ಟು ವ್ಯಾಪಾರ ಕಡಿಮೆಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ರು.

11:25 March 22

ರಾಜ್ಯದಲ್ಲಿನ ಕ್ಷಣ ಕ್ಷಣದ ಮಾಹಿತಿ

ಕೊರೊನಾ ಭೀತಿ ಹಿನ್ನೆಲೆ ಇಂದು ದೇಶಾದ್ಯಂತ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಕುರಿತು ರಾಜ್ಯದಲ್ಲಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ ನೋಡಿ,,

Last Updated : Mar 22, 2020, 9:15 PM IST

ABOUT THE AUTHOR

...view details